Sharanappa Saladpur ಬೆಂಗಳೂರು ನಗರದ ಮದ್ಯ ಹಾಗೂ ಮಾದಕವಸ್ತುಗಳ ವ್ಯಸನಿಗಳಿಗೆ ಪುನರ್ವಸತಿ ನೀಡುತ್ತಿರುವ ಕೇಂದ್ರಗಳಿಗೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರು ನಗರದ ಪೀಣ್ಯ 2ನೇ ಹಂತದ, ಬಾಲಾಜಿನಗರದಲ್ಲಿರುವ
ಗುಡ್ ಡೇ ಟ್ರಸ್ಟ್ ಹಾಗೂ
ಸುಂಕದಕಟ್ಟೆಯಲ್ಲಿರುವ ಸನ್ ರೈಸ್ ರಿಅಬ್ಲಿಟೇಷನ್ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ, ಮಂಡಳಿ ಅಧ್ಯಕ್ಷರಾದ ಶರಣಪ್ಪ ಸಲಾದಪುರ ಅವರು ಮೂಲಭೂತ ಸೌಕರ್ಯಗಳು, ಚಿಕಿತ್ಸಾ ವಿಧಾನಗಳು, ತಜ್ಞರ ಲಭ್ಯತೆ, ನಿವಾಸಿ ರೋಗಿಗಳಿಗೆ ದೊರೆಯುವ ಆಹಾರ, ಆರೋಗ್ಯ ಸೇವೆಗಳ ಬಗ್ಗೆ ಸ್ಥಳದಲ್ಲೇ ಮಾಹಿತಿ ಪಡೆದರು.
Sharanappa Saladpur ಪುನರ್ವಸತಿ ಕೇಂದ್ರಗಳ ಆಡಳಿತಾಧಿಕಾರಿಗಳ ಜೊತೆ ನಡೆಸಿದ ಚರ್ಚೆಯಲ್ಲಿ, ವ್ಯಸನಮುಕ್ತಿಗಾಗಿ ವಿಜ್ಞಾನಾಧಾರಿತ ಸಮಾಲೋಚನಾ ವಿಧಾನ, ಮನೋವೈದ್ಯರ ನಿರಂತರ ಹಾಜರಾತಿ ಹಾಗೂ ಕುಟುಂಬ ಸಲಹಾ ಕಾರ್ಯಕ್ರಮಗಳನ್ನು ಬಲಪಡಿಸಬೇಕು ಹಾಗೂ ರೋಗಿಗಳ ಸುರಕ್ಷತೆ ಮತ್ತು ಮಾನವೀಯ ವರ್ತನೆಗೆ ಆದ್ಯತೆ ನೀಡಬೇಕೆಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಮಾದಕವಸ್ತು ಬಳಕೆ ಯುವಜನರಲ್ಲಿ ವೇಗವಾಗಿ ಹೆಚ್ಚುತ್ತಿರುವುದನ್ನು ಗಮನಿಸಿ, ಪುನರ್ವಸತಿ ಕೇಂದ್ರಗಳ ಕಾರ್ಯಪದ್ಧತಿ ಸಂಪೂರ್ಣ ಪಾರದರ್ಶಕವಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ, ಪುನರ್ವಸತಿ ಕೇಂದ್ರಗಳ ಮಾಲೀಕರಾದ ಕಾರ್ತಿಕ್, ಮಣಿ, ಹಾಗೂ ಪದಾಧಿಕಾರಿಗಳಾದ ಕುಶಾಲ್ ಹರುವೇಗೌಡ, ರವಿಕುಮಾರ್, ಶರತ್, ವಿಶ್ವನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
