Saturday, December 6, 2025
Saturday, December 6, 2025

Narayana Hospital Shimoga ಪ್ರಪ್ರಥಮ ಮೂತ್ರಪಿಂಡ ಕಸಿಶಸ್ತ್ರಚಿಕಿತ್ಸೆ: ನಾರಾಯಣ ಹೆಲ್ತ್ ಸಂಸ್ಥೆ ವೈದ್ಯರ ಜಾಗತಿಕ ದಾಖಲೆ.

Date:

Narayana Hospital Shimoga ಅತ್ಯಂತ ಅಪರೂಪದ ‘ಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ’ ಹೊಂದಿರುವ ರೋಗಿಗೆ ವಿಶ್ವದಲ್ಲೇ ಮೊದಲ ಬಾರಿಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಿದ ಮುಕುಂದಪುರದ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್

ತಂದೆ, ಮಗ ಇಬ್ಬರೂ ಒಂದೇ ಅಪರೂಪದ ಆನುವಂಶಿಕ ತೊಂದರೆ ಹೊಂದಿದ್ದರೂ ತಂದೆಯೇ ತನ್ನ ಮಗನಿಗೆ ಮೂತ್ರಪಿಂಡ ದಾನ ಮಾಡಿದ್ದು, ನಿಜಕ್ಕೂ ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ. ವಿಶ್ವದಲ್ಲೇ ಈ ರೀತಿಯ ಮೊದಲ ಶಸ್ತ್ರಚಿಕಿತ್ಸೆಯಾಗಿದೆ.

ಕೋಲ್ಕತ್ತಾ, 26 ನವೆಂಬರ್ 2025: ಮುಕುಂದಪುರ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ ನ ವೈದ್ಯರ ತಂಡವು ಅತ್ಯಂತ ಅಪರೂಪದ ಆನುವಂಶಿಕ ರಕ್ತಸ್ರಾವ ರೋಗವಾದ ‘ಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ’ ಇದ್ದ ಭೂತಾನ್‌ನ ಯುವಕನೊಬ್ಬನಿಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಿ ದಾಖಲೆ ಮಾಡಿದೆ. ಇದೊಂದು ವಿಶ್ವದಲ್ಲೇ ಮೊದಲ ಬಾರಿಗೆ ನಡೆದ ಅತ್ಯಂತ ಅಪರೂಪದ ಶಸ್ತ್ರಚಿಕಿತ್ಸೆಯಾಗಿದೆ.

ಜಗತ್ತಿನಲ್ಲಿ ಕೇವಲ 50 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಕಾಣಿಸುವ ಅತ್ಯಂತ ವಿರಳ ಸಮಸ್ಯೆಯಿಂದ ಆ ಯುವಕ ಬಳಲುತ್ತಿದ್ದ. ಇದುವರೆಗೆ ಜಗತ್ತಿನಲ್ಲಿ ಯಾವುದೇ ಆಸ್ಪತ್ರೆಯಲ್ಲಿ ಇಂತಹ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರಲಿಲ್ಲ. ಆದರೆ ನಾರಾಯಣ ಹೆಲ್ತ್ ಸಂಸ್ಥೆ ಈ ಮಹಾ ಸಾಧನೆ ಮಾಡಿ ತೋರಿಸಿದ್ದು, ಸಂಕೀರ್ಣ ಮತ್ತು ಅಪಾಯಕಾರಿ ಪ್ರಕರಣಗಳನ್ನು ನಿರ್ವಹಿಸುವಲ್ಲಿ ತಾನು ವಿಶ್ವಮಟ್ಟದ ಪರಿಣತಿ ಹೊಂದಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ರೋಗಿಗೆ ತಂದೆಯ ಹೊರತು ಬೇರೆ ಯಾರೂ ದಾನಿ ಆಗಲು ಸಾಧ್ಯವಿರಲಿಲ್ಲ. ಆದರೆ ತಂದೆಯೂ ಇದೇ ಅಪರೂಪದ ಆನುವಂಶಿಕ ತೊಂದರೆ ಹೊಂದಿದ್ದರು. ಇದರಿಂದ ಈ ಪ್ರಕರಣವು ವೈದ್ಯಕೀಯವಾಗಿ ಮತ್ತು ನೈತಿಕವಾಗಿ ಅತ್ಯಂತ ಸಂಕೀರ್ಣವಾಗಿತ್ತು ಮತ್ತು ಸವಾರಿನದಾಗಿತ್ತು. ಬಹುವಿಭಾಗೀಯ ತಂಡದ ದೀರ್ಘ ಚರ್ಚೆ, ಅಪಾಯ ಮೌಲ್ಯಮಾಪನದ ನಂತರ ಅತ್ಯಂತ ನಿಖರತೆಯೊಂದಿಗೆ ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ದಾನಿ ಮತ್ತು ಸ್ವೀಕರಿಸುವವರು ಇಬ್ಬರೂ ಒಂದೇ ಆನುವಂಶಿಕ ತೊಂದರೆ ಹೊಂದಿದ್ದು ನಡೆದ ಜಗತ್ತಿನ ಮೊದಲ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಎಂಬ ಗೌರವಕ್ಕೆ ಈ ಪ್ರಕರಣವು ಪಾತ್ರವಾಗಿದೆ. ವಿಶೇಷವಾಗಿ ವೈದ್ಯಕೀಯ ಇತಿಹಾಸದಲ್ಲಿ ಅತ್ಯಂ ಮಹತ್ವದ ಸಾಧನೆ ಎಂಬ ದಾಖಲೆ ಬರೆದಿದೆ.

Narayana Hospital Shimoga ಈ ಪ್ರಕರಣದ ಸಂಕೀರ್ಣತೆಯ ಕುರಿತು ಮಾತನಾಡಿದ ಮುಕುಂದಪುರದ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ ನ ಕನ್ಸಲ್ಟೆಂಟ್ ಮತ್ತು ಚೀಫ್ ನೆಫ್ರಾಲಜಿಸ್ಟ್ (ಮೂತ್ರಪಿಂಡ ಕಸಿ ಯೋಜನೆ) ಡಾ. ದೀಪಕ್ ಶಂಕರ್ ರೇ ಅವರು, “ಈ ಪ್ರಕರಣವು ನಮ್ಮ ವೈದ್ಯಕೀಯ ಸಮನ್ವಯತೆ ಮತ್ತು ಶಸ್ತ್ರಚಿಕಿತ್ಸಾ ಸಾಮರ್ಥ್ಯವನ್ನು ನಿಜವಾಗಿಯೂ ಪರೀಕ್ಷಿಸಿತು. ಚಿಕ್ಕ ರಕ್ತಸ್ರಾವದಿಂದಲೂ ಮರಣ ಹೊಂದಬಹುದಾಗಿದ್ದ ರೋಗಿಗೆ ನಾವು ಮೂತ್ರಪಿಂಡ ಕಸಿ ಮಾಡಬೇಕಾಗಿತ್ತು. ಅರಿವಳಿಕೆಯಿಂದ ಹಿಡಿದು ಹೊಲಿಗೆಯವರೆಗೆ ಪ್ರತಿ ಹಂತವೂ ಬಹಳ ಎಚ್ಚರಿಕೆಯಿಂದ ಮತ್ತು ಬಹಳ ಸಮನ್ವಯತೆಯಿಂದ ನಡೆಯಬೇಕಾಗಿತ್ತು. ಈ ಯಶಸ್ಸು ನಮ್ಮ ಟೀಮ್ ವರ್ಕ್ ಗೆ ಸಿಕ್ಕ ಗೆಲುವಾಗಿದ್ದು, ಅತ್ಯಂತ ಸೂಕ್ಷ್ಮ ಯೋಜನೆ ಮತ್ತು ಕುಟುಂಬದ ಅಚಲ ನಂಬಿಕೆಯ ಫಲಿತಾಂಶವಾಗಿದೆ. ಅತ್ಯಮೂಲ್ಯ ನೆರವನ್ನು ಒದಗಿಸಿ ಈ ಯುವಕನನ್ನು ಬದುಕಿಸಲು ಕಾರಣವಾದ, ಈ ಪ್ರಕರಣದ ಯಶಸ್ಸಿಗೆ ಬಹುಮುಖ್ಯ ಕಾರಣರಾದ ನಮ್ಮ ಬಹುವಿಭಾಗೀಯ ತಂಡದ ವೈದ್ಯರ ಅಪಾರ ಜ್ಞಾನ ಮತ್ತು ಪರಿಶ್ರಮಕ್ಕೆ ನಾವು ಕೃತಜ್ಞರಾಗಿದ್ದೇವೆ. ವಿಶೇಷವಾಗಿ ಶಸ್ತ್ರಚಿಕಿತ್ಸಾ ತಂಡದ ಡಾ. ತರ್ಷಿದ್ ಅಲಿ ಜಹಾಂಗೀರ್ ಮತ್ತು ಅರಿವಳಿಕೆ ತಂಡದ ಡಾ. ತಿತಿಸಾ ಸರ್ಕಾರ್ ಮಿತ್ರಾ ಅವರ ಕೊಡುಗೆಯನ್ನು ಗೌರವಪೂರ್ವಕವಾಗಿ ಸ್ಮರಿಸುತ್ತಿದ್ದೇವೆ” ಎಂದು ಹೇಳಿದರು.

ಈ ಅಪರೂಪದ ರಕ್ತಸ್ರಾವ ತೊಂದರೆಯ ಕುರಿತು ಮಾತನಾಡಿದ ಮುಕುಂದಪುರ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ ನ ಹೆಮಟಾಲಜಿ ವಿಭಾಗದ ಕನ್ಸಲ್ಟೆಂಟ್ ಡಾ. ಶಿಶಿರ್ ಕುಮಾರ್ ಪಾತ್ರ ಅವರು, “ಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ ಎಷ್ಟು ಅಪರೂಪ ಎಂದರೆ ಜಗತ್ತಿನಲ್ಲಿ ಸುಮಾರು 50 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಬರುತ್ತದೆ. ಇಂತಹ ಪ್ರಕರಣ ನಿರ್ವಹಣೆ ಅತ್ಯಂತ ಸೂಕ್ಷ್ಮವಾಗಿದೆ. ಫ್ಯಾಕ್ಟರ್ VII ಕಡಿಮೆಯಾದರೆ ಅತಿಯಾದ ರಕ್ತಸ್ರಾವ ಉಂಟಾಗಬಹುದು, ಮತ್ತೂ ಕಡಿಮೆಯಾದರೆ ಅಪಾಯಕಾರಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಬುದು. ನಾವು ನಿಮಿಷ ನಿಮಿಷಕ್ಕೂ ಅತ್ಯಂತ ಸಣ್ಣ ವಿಚಾರದಲ್ಲಿಯೂ ಸುರಕ್ಷತೆ ನೋಡಿಕೊಳ್ಳಬೇಕಿತ್ತು. ಈಗ ರೋಗಿ ಮತ್ತು ಅವರ ತಂದೆ ಇಬ್ಬರೂ ಚೆನ್ನಾಗಿರುವುದು ನೋಡಿ ತುಂಬಾ ಸಂತೋಷವಾಗುತ್ತಿದೆ” ಎಂದು ಹೇಳಿದರು.

ಶಸ್ತ್ರಚಿಕಿತ್ಸೆಯ ನಂತರವೂ ಬಹಳಷ್ಟು ಸವಾಲುಗಳಿದ್ದುವು. ರೋಗಿಗೆ ಸಣ್ಣ ರಕ್ತ ಹೆಪ್ಪುಗಟ್ಟುವಿಕೆಯಿಂದ ತಾತ್ಕಾಲಿಕ ಪಾರ್ಶ್ವವಾಯು ಬಂದಿತ್ತು. ಆದರೆ ನೆಫ್ರಾಲಜಿ, ನ್ಯೂರಾಲಜಿ ಮತ್ತು ಹೆಮಟಾಲಜಿ ತಂಡಗಳ ಸಂಯುಕ್ತ ಆರೈಕೆಯಲ್ಲಿ ರೋಗಿ ಪೂರ್ಣ ಚೇತರಿಕೆ ಕಂಡಿದ್ದಾರೆ. ಈಗ ಅವರ ಕ್ರಿಯೇಟಿನಿನ್ ಮಟ್ಟ ಸ್ಥಿರವಾಗಿದೆ ಮತ್ತು ಅವರು ಆರೋಗ್ಯಕರವಾಗಿ ಬದುಕುತ್ತಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ತಂಡದ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ನಾರಾಯಣ ಹೆಲ್ತ್ ಈಸ್ಟ್ ನ ಕೋಲ್ಕತ್ತಾ ಮತ್ತು ಕಾರ್ಪೊರೇಟ್ ಗ್ರೋತ್ ಇನಿಶಿಯೇಟಿವ್ ನ ನಿರ್ದೇಶಕ ಮತ್ತು ಕ್ಲಸ್ಟರ್ ಹೆಡ್ ಶ್ರೀ ಅಭಿಜಿತ್ ಸಿ.ಪಿ. ಅವರು, “ನಮ್ಮ ವೈದ್ಯರು ಕೇವಲ ಅಪರೂಪದ ಶಸ್ತ್ರಚಿಕಿತ್ಸೆ ಮಾತ್ರವೇ ಮಾಡಿಲ್ಲ, ಅತ್ಯಂತ ಅಪರೂಪದ ಮತ್ತು ತೀವ್ರತರವಾದ ಪ್ರಕರಣವನ್ನು ಯಶಸ್ವಿಗೊಳಿಸಿದ್ದಾರೆ. ಒಬ್ಬ ಯುವಕನಿಗೆ ಹೊಸ ಜೀವ ದಾನ ಮಾಡುವ ಜೊತೆಗೆ ರೋಗಿಯ ತಂದೆಯೂ ಸುರಕ್ಷಿತವಾಗಿ ಇರುವಂತೆ ನೋಡಿಕೊಂಡಿದ್ದಾರೆ. ಇಂತಹ ಸಾಧನೆಗಳು ವಿಶ್ವದ ಅತ್ಯುನ್ನತ ವೈದ್ಯಕೀಯ ಸೇವೆ ಹೊಂದಿರುವ ಪ್ರದೇಶಗಳ ಪಟ್ಟಿಯಲ್ಲಿ ಪೂರ್ವ ಭಾರತವನ್ನು ನೆಲೆಗೊಳಿಸುತ್ತದೆ” ಎಂದು ಹೇಳಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ನಾರಾಯಣ ಹೆಲ್ತ್ ನ ಗ್ರೂಪ್ ಸಿಓಓ ಶ್ರೀ ಆರ್. ವೆಂಕಟೇಶ್ ಅವರು, “ಅತ್ಯುನ್ನತ ನೈತಿಕ ಮಾನದಂಡಗಳನ್ನು ಕಾಪಾಡಿಕೊಳ್ಳುತ್ತಾ ವೈದ್ಯಕೀಯ ಸಾಮರ್ಥ್ಯದ ಗಡಿಯನ್ನು ಮೀರುವುದರ ಮೇಲೆ ನಾರಾಯಣ ಹೆಲ್ತ್‌ ನಂಬಿಕೆ ಇಟ್ಟಿದೆ. ಈ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆಯು ನಮ್ಮ ಬಹುವಿಭಾಗೀಯ ಸಹಯೋಗ, ಅಂತಾರಾಷ್ಟ್ರೀಯ ಮಟ್ಟದ ಅತ್ಯುನ್ನತ ಪದ್ಧತಿಗಳು ಮತ್ತು ಅದ್ಭುತವಾದ ಚಿಕಿತ್ಸಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ನಮ್ಮ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ನಮ್ಮ ಮೇಲೆ ನಂಬಿಕೆ ಇಟ್ಟ ಕುಟುಂಬಕ್ಕೆ ಕೃತಜ್ಞತೆ” ಎಂದು ಹೇಳಿದರು.

ಈ ಪ್ರಕರಣವು ಈಗಾಗಲೇ ಭಾರತ ಮತ್ತು ವಿದೇಶಗಳ ವೈದ್ಯಕೀಯ ತಜ್ಞರ ಗಮನ ಸೆಳೆದಿರುವುದು ವಿಶೇಷವಾಗಿದೆ.

ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್, ಮುಕುಂದಪುರ, ಕೋಲ್ಕತ್ತಾ ಕುರಿತು

ಕೋಲ್ಕತ್ತಾದ ಪೂರ್ವ ಮೆಟ್ರೋಪಾಲಿಟನ್ ಬೈಪಾಸ್‌ನ ಮುಕುಂದಪುರದಲ್ಲಿರುವ 681 ಹಾಸಿಗೆಗಳ ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜೆಸಿಐ ಮತ್ತು ಎನ್.ಎ.ಬಿ.ಎಚ್ ಮಾನ್ಯತೆ ಪಡೆದಿದೆ. ಹೃದಯ ವಿಜ್ಞಾನ (ಹೃದಯ ಕಸಿ ಸಹಿತ), ಮೂತ್ರಪಿಂಡ ವಿಜ್ಞಾನ (ಮೂತ್ರಪಿಂಡ ಕಸಿ ಸಹಿತ), ಜೀರ್ಣಾಂಗ ವಿಜ್ಞಾನ (ಯಕೃತ್ತು ಕಸಿ ಸಹಿತ), ನರವಿಜ್ಞಾನ, ಸಮಗ್ರ ಕ್ಯಾನ್ಸರ್ ಆರೈಕೆ, ಆರ್ಥೋಪೆಡಿಕ್ಸ್ ಮತ್ತು ಇತರ ವಿಶೇಷತೆಗಳಲ್ಲಿ ಪೂರ್ವ ಭಾರತದ ಅತ್ಯಂತ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...