Gangadharendra Saraswati Swamiji ಕಾರ್ಮಿಕರೆಂದರೆ ಕರ್ಮಯೋಗಿಗಳು. ಕರ್ಮ ಮಾಡುವುದೇ ಅವರ ಧ್ಯೇಯ. ಮಾಡಿದ ಕರ್ಮ ಅಂದರೆ ಕೆಲಸಕ್ಕೆ ಪ್ರತಿಫಲ ಪಡೆಯುತ್ತಾರೆ..
ಸಂಪೂರ್ಣ ಕೆಲಸಕ್ಕೆ ಅರ್ಪಿಸಿಕೊಳ್ಳುವ ಅವರ ಕೌಶಲ ಅವರ ಜೀವನಕ್ಕೆ ಆಧಾರ.
ಮಾಲೀಕರು ಮೆಚ್ಚುವಂತೆ ಮಡುವ ಅವರ ಕಾಯಕಕ್ಕೆ ಸೂಕ್ತ ಪ್ರತಿಫಲ ನೀಡುತ್ತಾರೆ. ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಷು ಕದಾಚನ
ಎಂಬ ಗೀತಾವಾಕ್ಯ ಅದನ್ನೇ ಸಾರ್ಥಕವಾಗಿ ಹೇಳುತ್ತದೆ. ಕಾರ್ಖಾನೆಗಳಲ್ಲಿ ಮಾಲೀಕರು ಮೆಚ್ಚಿದರೆ
ಪಾರಮಾರ್ಥಿಕ ಅರ್ಥದಲ್ಲಿ ಮಾಲೀಕನೇ ಭಗವಂತ .
ನಮ್ಮ ಜೀವನದಲ್ಲೂ ಅಷ್ಟೆ ನಮ್ಮ ಕರ್ಮವನ್ನು ನಾವು ಮಾಡಬೇಕು. ಪ್ರತಿಫಲ
ಭಗವಂತನೇ ಕೊಡುತ್ತಾನೆ ಎಂದು
ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.
Gangadharendra Saraswati Swamiji ಶಿವಮೊಗ್ಗದಲ್ಲಿ ನಡೆಯಲಿರುವ ಭಗವದ್ಗೀತಾ ಅಭಿಯಾನ 2025 ರ ಅಂಗವಾಗಿ ವಿಶೇಷ ಕಾರ್ಯಕ್ರಮಗಳ ಸರಣಿಯಲ್ಲಿ ಭಗವದ್ಗೀತೆ ಮತ್ತು ದೈನಂದಿನ ಜೀವನಕ್ಕೆ ಸಂದೇಶಗಳು ವಿಷಯವಾಗಿ
ಜಿಲ್ಲೆಯಾದ್ಯಂತ ಉಪನ್ಯಾಸ,ವಿಚಾರ ಸಂಕಿರಣಗಳು ನಡೆಯುತ್ತಿವೆ.
ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿಯ
ಶಾಂತಲಾ ಫೆರೋಕಾಸ್ಟಿಂಗ್ಸ್ ಸಭಾಂಗಣದಲ್ಲಿ ಕಾರ್ಮಿಕ ವಿಭಾಗಕ್ಕೋಸ್ಕರ ವಿಶೇಷ ಸಮಾರಂಭ ಏರ್ಪಡಿಸಲಾಗಿತ್ತು.
ನಿತ್ಯವೂ ಶ್ರಮಿಸುವ ಕಾಯಕಯೋಗಿಗಳು ಪೂಜ್ಯಶ್ರೀಗಳ ಗೀತಾ ಸಂದೇಶವನ್ನ ಕೇಳಿ ಆನಂದಿಸಿದರು.
ಶಾಂತಲಾ ಫೇರೊಕಾಸ್ಟಿಂಗ್ಸ್ ನ ಮಾಲೀಕರಾದ ಉದ್ಯಮಿ ಮತ್ತು ಮಾಜಿ ಶಾಸಕ ಶ್ರೀ ಎಸ್.ರುದ್ರೇಗೌಡರು
ಪೂಜ್ಯ ಸ್ವಾಮೀಜಿಯವರಿಗೆ ಫಲಪುಷ್ಪ ನೀಡಿ ಗೌರವ ಅರ್ಪಿಸಿದರು.
