Saturday, December 6, 2025
Saturday, December 6, 2025

Dr Shalini Rajneesh IAS ಲೆಕ್ಕಪರಿಶೋಧನೆಯು ಸಾರ್ವಜನಿಕ ಹಿತಕಾಯುವ ನೈತಿಕ ದಿಕ್ಸೂಚಿಯಂತೆ- ಡಾ.ಶಾಲಿನಿ ರಜನೀಶ್.

Date:

Dr Shalini Rajneesh IAS ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ 5ನೇ ಲೆಕ್ಕಪರಿಶೋಧನಾ ದಿವಸ – 2025 ಹಾಗೂ ಲೆಕ್ಕಪರಿಶೋಧನಾ ವಾರವನ್ನು ಇಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಉದ್ಘಾಟಿಸಿದರು.

“ಬದಲಾವಣೆಯನ್ನು ಮುನ್ನಡೆಸುವುದು ಮತ್ತು ಮೌಲ್ಯಗಳನ್ನು ಪುನಃ ಸ್ಥಾಪಿಸುವುದು: ನಂಬಿಕೆ, ನವೀನತೆ, ಸ್ಥಿರತೆ ಮತ್ತು ಹೊಣೆಗಾರಿಕೆ.” ಈ ವರ್ಷದ ಆಯ್ಕೆಯ ವಿಷಯವಾಗಿದೆ ಎಂದು ತಿಳಿಸಿದ ಮುಖ್ಯ ಕಾರ್ಯದರ್ಶಿಗಳು, 5ನೇ ಲೆಕ್ಕಪರಿಶೋಧನಾ ದಿವಸ 2025ರ ಉದ್ಘಾಟನೆಗೆ ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪರಿಶೋಧನಾ ಇಲಾಖೆಯ ಅಧಿಕಾರಿಗಳೊಂದಿಗೆ ಭಾಗವಹಿಸುವ ಅವಕಾಶ ನನಗೆ ಅಪಾರ ಸಂತೋಷ ನೀಡಿದೆ. ಉತ್ತಮ ಆಡಳಿತಕ್ಕಾಗಿ ಲೆಕ್ಕಪರಿಶೋಧನಾ ಕ್ಷೇತ್ರದ ಸಮರ್ಪಿತ ಸೇವೆಯನ್ನು ನಾನು ಶ್ಲಾಘಿಸುತ್ತೇನೆ ಎಂದು ತಿಳಿಸಿದರು.

ಲೆಕ್ಕಪರಿಶೋಧನೆಯು ಸಾರ್ವಜನಿಕ ಹಿತವನ್ನು ಕಾಯುವ ನೈತಿಕ ದಿಕ್ಕೂಚಿಯಂತೆ, ಸಾರ್ವಜನಿಕ ಸೇವಕರು ಸತ್ಯ ಮತ್ತು ಸತ್ಯನಿಷ್ಠೆಯ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಸಾರ್ವಜನಿಕ ಸಂಸ್ಥೆಗಳ ಮೇಲೆ ನಾಗರೀಕರ ನಂಬಿಕೆ ಉಳಿಯುವುದಕ್ಕೆ, ತೆರಿಗೆದಾರರ ಹಣವನ್ನು ಅತ್ಯಂತ ಪ್ರಾಮಾಣಿಕವಾಗಿ ಬಳಸುವುದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯಾಗಿದೆ ಎಂದರು.

Dr Shalini Rajneesh IAS ಲೆಕ್ಕಪರಿಶೋಧನಾ ದಿವಸ ಕೇವಲ ಆಚರಣೆಗೆ ಸೀಮಿತವಾದ ದಿನವಲ್ಲ- ಇದು ಸಾಂವಿಧಾನಿಕ ದೃಷ್ಟಿಕೋನದ ಜ್ಞಾಪನೆಯಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರವರನ್ನು “ಬಹುಶಃ ಸಂವಿಧಾನದ ಅತ್ಯಂತ ಮಹತ್ವದ ಅಧಿಕಾರಿ” ಎಂದು ವರ್ಣಿಸಿದ್ದರು. ಸಾರ್ವಜನಿಕ ನಂಬಿಕೆಯ ರಕ್ಷಕ ಮತ್ತು ಸರ್ಕಾರಿ ಹಣಕಾಸಿನ ಪಾಲಕ ಎಂದೂ ಸಹ ಹೇಳಬಹುದು ಎಂದು ತಿಳಿಸಿದರು.

ಭಾರತದ ಸಂವಿಧಾನಿಕ ವಿನ್ಯಾಸದಲ್ಲಿ ಲೆಕ್ಕಪರಿಶೋಧಕ ಹಾಗೂ ಮಹಾ ಲೆಕ್ಕಪರಿಶೋಧಕರ (CAG) ಸ್ಥಾನ ಅತ್ಯಂತ ಮಹತ್ವದ್ದಾಗಿದೆ. ಸಂವಿಧಾನದ 148 ರಿಂದ 151ನೇ ಅನುಚ್ಛೇದಗಳ ಅಡಿಯಲ್ಲಿ ನೀಡಲಾದ ಅಧಿಕಾರದಂತೆ, ಸರ್ಕಾರಗಳ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಶಿಷ್ಟಾಚಾರವನ್ನು ಕಾಪಾಡುವುದು ಸಿಎಜಿ ಅವರ ಜವಾಬ್ದಾರಿಯಾಗಿದೆ. ಆದಾಯ, ವೆಚ್ಚ ಮತ್ತು ಸಾರ್ವಜನಿಕ ವಲಯ ಸಂಸ್ಥೆಗಳ ಪಕ್ಷಪಾತರಹಿತ ಲೆಕ್ಕಪರಿಶೋಧನೆ ನಡೆಸುವ ಮೂಲಕ, ಸಿಎಜಿ ಶಾಸನಾತ್ಮಕ ಮೇಲ್ವಿಚಾರಣೆಯನ್ನು ಬಲಪಡಿಸುತ್ತಾರೆ ಮತ್ತು ಪ್ರಜಾಪ್ರಭುತ್ವ ಆಡಳಿತದ ಮೇಲಿನ ನಂಬಿಕೆಯನ್ನು ದೃಢವಾಗಿಸುತ್ತಾರೆ.

ಸಿಎಜಿ ನಡೆಸುವ ಕಾರ್ಯಕ್ಷಮತೆ, ಅನುಸರಣೆ ಮತ್ತು ಹಣಕಾಸು ಲೆಕ್ಕಪರಿಶೋಧನೆಗಳು ವ್ಯವಸ್ಥಾತ್ಮಕ ಕೊರತೆಗಳನ್ನು ಗುರುತಿಸಲು, ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸಲು ಮತ್ತು ಸಾರ್ವಜನಿಕ ಆಡಳಿತದಲ್ಲಿ ಆರ್ಥಿಕತೆ ಹಾಗೂ ಪರಿಣಾಮಕಾರಿ ತತ್ವಗಳನ್ನು ಕಾಪಾಡಲು ನೆರವಾಗುತ್ತವೆ. ಸಿಎಜಿ ಅವರ ಸ್ವತಂತ್ರ ಪಾತ್ರವು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದಷ್ಟೇ ಅಲ್ಲ, ಸರ್ಕಾರಿ ಇಲಾಖೆಗಳು ಉತ್ತಮ ಹಣಕಾಸು ಶಿಸ್ತಿನಿಂದ ಕಾರ್ಯನಿರ್ವಹಿಸಲು ಮತ್ತು ಸೇವಾ ವಿತರಣೆಯನ್ನು ಸುಧಾರಿಸಲು ದಾರಿದೀಪವಾಗುತ್ತದೆ. ಹೊಣೆಗಾರಿಕೆಗೆ ಸಂಬಂಧಿಸಿದ ಈ ಅಚಲ ಬದ್ಧತೆಯೇ, ಸಿಎಜಿ ಅನ್ನು ಭಾರತದ ಪ್ರಜಾಸತ್ತಾತ್ಮಕ ಮತ್ತು ಆಡಳಿತಾತ್ಮಕ ರಚನೆಯ ಅತ್ಯವಶ್ಯಕ ಸ್ತಂಭವಾಗಿಸಿದೆ.ಇಂದು, ವೇಗವಾಗಿ ಬದಲಾಗುತ್ತಿರುವ ಪರಿಸರ ಮತ್ತು ಸಂಕೀರ್ಣ ಆಡಳಿತ ಸವಾಲುಗಳ ನಡುವಲ್ಲಿ, ಈ ಪಾತ್ರದ ಮಹತ್ವ ಇನ್ನಷ್ಟು ಹೆಚ್ಚಾಗಿದೆ ಎಂದರು.

ಸಿಎಜಿ ಯವರ ಲೆಕ್ಕ ಪರಿಶೋಧನಾ ವರದಿಗಳು ನಮ್ಮ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಇನ್ನಷ್ಟು ಬಲಪಡಿಸಲು ಅಮೂಲ್ಯವಾದ ಒಳನೋಟಗಳು ಮತ್ತು ಪ್ರಾಯೋಗಿಕವಾಗಿ ಉಪಯೋಗಿಸಬಹುದಾದ ಶಿಫಾರಸ್ಸುಗಳನ್ನು ಒದಗಿಸುತ್ತವೆ. ಈ ವರದಿಗಳು ಕೇವಲ ಹೊಣೆಗಾರಿಕೆಯ ಸಾಧನಗಳಷ್ಟೇ ಅಲ್ಲ, ಅವು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ. ಸಾರ್ವಜನಿಕ ನಂಬಿಕೆಯನ್ನು ನಿರ್ಮಿಸುತ್ತವೆ. ಆಡಳಿತದಲ್ಲಿ ನಾಗರೀಕರ ನಿಷ್ಠೆ ಮತ್ತು ಪಾಲ್ಗೊಳ್ಳುವಿಕೆಯನ್ನು ಗಾಢಗೊಳಿಸುತ್ತವೆ.

ಸಿಎಜಿ ಲೆಕ್ಕ ಪರಿಶೋಧನೆಗಳು ಕೇವಲ ದೋಷಗಳನ್ನು ಗುರುತಿಸುವುದು ಅಥವಾ ವ್ಯತ್ಯಾಸಗಳನ್ನು ಸೂಚಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ನಾವೆಲ್ಲರೂ ಮನಗಾಣುವುದು ಅತ್ಯಂತ ಮುಖ್ಯ. ವಾಸ್ತವವಾಗಿ ಕಾರ್ಯಕ್ಷಮತಾ ಲೆಕ್ಕಪರಿಶೋಧನೆಗಳು ಇದಕ್ಕಿಂತ ಭಿನ್ನವಾಗಿವೆ. ಅವು ಯೋಜನೆಗಳು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಹೇಗೆ ಜಾರಿಗೊಳಿಸಲಾಗುತ್ತಿದೆ ಎಂಬುದರ ಕುರಿತು ರಚನಾತ್ಮಕ, ಸಾಕ್ಷ್ಯಾಧಾರಿತ ಮೌಲ್ಯಮಾಪನಗಳನ್ನು ಒದಗಿಸುತ್ತವೆ ಮತ್ತು ವ್ಯವಸ್ಥೆಗಳ ಸುಧಾರಣೆಗಾಗಿ, ಹಾಗೂ ನಮ್ಮ ಜನತೆಗೆ ಉತ್ತಮ ಫಲಿತಾಂಶಗಳನ್ನು ನೀಡಲು ಸ್ಪಷ್ಟ ಜಾರಿಗೆ ತರುವಂತ ಶಿಫಾರಸುಗಳನ್ನು ನೀಡುತ್ತವೆ ಎಂದರು.

ಲೆಕ್ಕಪರಿಶೋಧನಾ ದಿವಸವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಸಿಎಜಿ ಮತ್ತು ಸರ್ಕಾರದ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ನಾವು ಗಟ್ಟಿಗೊಳಿಸಲು ಇದು ಸೂಕ್ತ ಸಮಯ – ಪರಸ್ಪರ ಗೌರವ ಮತ್ತು ಸಹಕಾರವನ್ನು ಬೆಳೆಸುವ ಬಂಧವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...