Saturday, December 6, 2025
Saturday, December 6, 2025

M.S.Santosh ಬಾಕಿಯಿರುವ ಪ್ರಕರಣಗಳ ವಿಲೇವಾರಿಗೆ ಡಿಸೆಂಬರ್ 13 ರಂದುಲೋಕ ಅದಾಲತ್- ನ್ಯಾ.ಎಂ.ಎಸ್.ಸಂತೋಷ್

Date:

M.S.Santosh ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿ ಹಾಗೂ ಪಕ್ಷಗಾರರಿಗೆ ತ್ವರಿತ ನ್ಯಾಯದಾನ ನೀಡುವ ಉದ್ದೇಶದಿಂದ ಡಿ.13 ರಂದು ಈ ವರ್ಷದ ಕೊನೆಯ ಲೋಕ್ ಅದಾಲತ್‌ನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ತಿಳಿಸಿದರು.
ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಗುರುವಾರ ಲೋಕ್ ಅದಾಲತ್ ಹಾಗೂ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ಮತ್ತು ಸಾರಿಗೆ ಇಲಾಖೆಯ ದಂಡ ಪಾವತಿ ಬಾಕಿ ಪ್ರಕರಣಗಳಿಗೆ ಶೇ.50 ರಿಯಾಯಿತಿ ನೀಡಿ ಪ್ರಕರಣ ಇತ್ಯರ್ಥಪಡಿಸುವ ಸಂಬಂಧ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಡಿ.13 ರಂದು ನಡೆಯುವ ಲೋಕ್ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ವೈವಾಹಿಕ ವಿವಾಹದ ವ್ಯಾಜ್ಯಗಳು, ಅಪಘಾತಕ್ಕೆ ಸಂಬಂಧಿಸಿದ ಪರಿಹಾರದ ವ್ಯಾಜ್ಯಗಳು, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ವಾಣಿಜ್ಯ ವಿವಾದದ ದಾವೆಗಳು, ವೇತನ ಮತ್ತು ಸೇವೆಗೆ ಸಂಬಂಧಿಸಿದ ವ್ಯಾಜ್ಯಗಳು, ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಗ್ರಾಹಕರ ವೇದಿಕೆಯ ಪ್ರಕರಣಗಳು, ಸಾಲದ ಪ್ರಕರಣಗಳು, ಪಾಲು ವಿಭಾಗದ ದಾವೆಗಳು, ಸ್ಥಿರ ಆಸ್ತಿ ಸ್ವಾಧೀನದ M.S.Santosh ದಾವೆಗಳು, ಭೂಸ್ವಾಧೀನದ ಪ್ರಕರಣಗಳು ಮತ್ತು ಇತರೆ ಸಿವಿಲ್ ಪ್ರಕರಣಗಳ ರಾಜೀ ಸಂಧಾನಕ್ಕಾಗಿ ಉಭಯ ಪಕ್ಷಗಾರರ ಉಪಸ್ಥಿತಿಯಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಿಕೇತರ ಸಂಧಾನಕಾರರು ರಾಜೀ ಸಂಧಾನದ ಪ್ರಕ್ರಿಯೆಯನ್ನು ಕೈಗೊಂಡು ಪಕ್ಷಗಾರರು ವಿವಾದವನ್ನು ಇತ್ಯರ್ಥಪಡಿಸುವರು. ಅಂದರಂತೆ ಅಂತಿಮ ಆದೇಶವನ್ನು ಅದೇ ದಿನದಂದು ನೀಡಲಾಗುವುದು. ಸಾರ್ವಜನಿಕರು ಮತ್ತು ಪಕ್ಷಗಾರರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು.
ದಿನಾಂಕ: 13.09.2025 ರಂದು ಕೈಗೊಳ್ಳಲಾದ ಈ ವರ್ಷದ 3 ನೇ ರಾಷ್ಟ್ರೀಯ ಲೋಕ್‌ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ 14550 ರಷ್ಟು ಪ್ರಕರಣಗಳು ರಾಜೀ ಸಂಧಾನದ ಮೂಲಕ ಕೊನೆಗೊಂಡಿದ್ದು, ಅವುಗಳ ಮೂಲಕ ಪಕ್ಷಗಾರರು ಒಟ್ಟು ರೂ. 36,49,86,652/- ಮೊತ್ತದ ಪರಿಹಾರ ಒಳಗೊಂಡ ವಿವಾದಗಳನ್ನು ರಾಜೀ ಮಾಡಿಕೊಂಡಿರುತ್ತಾರೆ. ಅದೇ ಸಂದರ್ಭದಲ್ಲಿ ಒಟ್ಟು 1,46,464 ವ್ಯಾಜ್ಯ ಪೂರ್ವ ಪ್ರಕರಣಗಳು ಕೊನೆಗೊಂಡಿದ್ದು, ಅವುಗಳ ಮೂಲಕ ಒಟ್ಟು ರೂ. 46,95,49,044/- ಮೊತ್ತದ ಪರಿಹಾರ ಒಳಗೊಂಡ ವಿವಾದಗಳನ್ನು ರಾಜೀ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...