Women’s Cricket ಮಹಿಳಾ ಅಂಧರ T20 ವಿಶ್ವಕಪ್ ಪ್ರಶಸ್ತಿಯನ್ನು ಭಾರತದ ಮಹಿಳಾ ಅಂಧರ ಕ್ರಿಕೆಟ್ ತಂಡ ಪಡೆದಿದೆ.
ಮೊದಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಮಹಿಳೆಯರ ತಂಡ ದ ಆನಂದಕ್ಕೆ ಪಾರವೇ ಇಲ್ಲ.
ಭಾನುವಾರ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ದೀಪಿಕಾ ಟಿ.ಸಿ. ಅವರ ನಾಯಕತ್ವದ ಭಾರತ ತಂಡ
ನೇಪಾಳವನ್ನು ಏಳು ವಿಕೆಟ್‌ಗಳಿಂದ ಮಣಿಸಿತು.
ಕರ್ಣಾಟಕದ ಮೂವರಲ್ಲಿ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯ ಕಾವ್ಯಾ, ವಿ.ಕ್ರಿಕೆಟ್ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ
ಗೆಲುವಿಗೆ ಕೈಜೋಡಿಸಿದ ರಿಪ್ಪನ್ ಪೇಟೆಯ ಪ್ರತಿಭೆ ಕಾವ್ಯಾ .ವಿ .
ಕಾವ್ಯಾ ವಿ ರಿಪ್ಪನ್ ಪೇಟೆಯ ಬರುವೆ ಗ್ರಾಮದ ಆಚಾರ್ ಕೇರಿ ನಿವಾಸಿ
ಜಯಮ್ಮ–ವೆಂಕಟೇಶ್ ಆಚಾರ್ ದಂಪತಿಯ ಪುತ್ರಿ .
ನಾಲ್ಕನೇ ತರಗತಿಯವರೆಗೂ ಪಟ್ಟಣದ ಬರುವೆ ಗ್ರಾಮದ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.
Women’s Cricket ದೃಷ್ಟಿಯಲ್ಲಿ ಸಮಸ್ಯೆಯುಂಟಾದ ಕಾರಣ ಕಾವ್ಯ ಅವರು ಶಿವಮೊಗ್ಗದ ಗೋಪಾಲ ಬಡಾವಣೆಯ ಶಾರದ ಅಂಧರ ಶಾಲೆಯಲ್ಲಿ 2009–2015 ರವರೆಗೆ ಶಿಕ್ಷಣ ಪಡೆದರು.
ಬಳಿಕ ಬೆಂಗಳೂರಿನ ಸಮರ್ಥನಂ ಅಂಧರ ವಿಕಾಸ ಕೇಂದ್ರದಲ್ಲಿ ಬಿ.ಎ ಪದವಿ ಪೂರೈಸಿದ್ದಾರೆ.
ಪ್ರಸ್ತುತ ಜ್ಞಾನಭಾರತಿ ಎಜುಕೇಶನ್ ಸೊಸೈಟಿಯಲ್ಲಿ ಕಾವ್ಯ ಅವರು
ಎಂ.ಎ ವ್ಯಾಸಂಗ ಮಾಡುತ್ತಿದ್ದಾರೆ
ಐದು ಹೆಣ್ಣುಮಕ್ಕಳ ಬಡ ಕುಟುಂಬದಲ್ಲಿ ಬೆಳೆದ ಕಾವ್ಯಾ
ಪೋಷಕರಿಗೆ ಗ್ರಾಮಸ್ಥರ ವತಿಯಿಂದ ಅಭಿಮಾನಪೂರ್ವಕ ಸನ್ಮಾನಮಾಡಲಾಯಿತು.
ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ , ಪತ್ರಕರ್ತ ರಫ಼ಿ ರಿಪ್ಪನ್ ಪೇಟೆ ಅವರು ಭಾಗಿಯಾಗಿದ್ದರು.
