ತೀರ್ಥಹಳ್ಳಿ ಪಟ್ಟಣದ ಕುಶಾವತಿಯ ಆಂಜನೇಯ ದೇವಸ್ಥಾನದ ಸಮೀಪದಲ್ಲಿ ಅನಾಮಧೇಯ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.
ಆಂಜನೇಯ ದೇವಸ್ಥಾನದ ಸಮೀಪದ ಶೇಡ್ ಪಕ್ಕ ಮಲಗಿರುವ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವ್ಯಕ್ತಿಯ ಜೇಬಲ್ಲಿ ಇರುವ ಫೋನ್ ನಂಬರ್ ಗಳಿಗೆ ಕರೆ ಹೋಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು ಅದರಲ್ಲಿರುವ ಆಧಾರ್ ಕಾರ್ಡ್ ಸಹ ಸಂಪೂರ್ಣ ಹರಿದು ಹೋಗಿದೆ.
ಹಾಗಾಗಿ ಆದರೆ ಅದರಲ್ಲಿ ಹೆಸರು ಸುರೇಶ ಅಂತ ಇದ್ದು ಊರಿನ ಹೆಸರು ಕೊಪ್ಪಳ ಎಂದು ಇದೆ.
ಆತನ ವಯಸ್ಸು ಅಂದಾಜು 40 ವರ್ಷ ಎಂದು ಅಂದಾಜಿಸಲಾಗಿದ್ದು ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
