Shimoga News ಶಿವಮೊಗ್ಗದ ದುರ್ಗಿಗುಡಿ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಟ್ರಸ್ಟಿಗಳಾಗಿ ಅವಿರತ ಸೇವೆ ಸಲ್ಲಿಸುತ್ತಿದ್ದ ಶ್ರೀ ಸಿ.ವಿ.ರಾಘವೇಂದ್ರರಾವ್ ( 81) ಅವರು ನಿಧನರಾಗಿದ್ದಾರೆ.
ದಿವಂಗತರು ನಿವೃತ್ತ ಉಪನ್ಯಾಸಕರಾಗಿದ್ದರು.
ಭಾರತೀಯ ಕುಟುಂಬ ಯೋಜನಾ ಸಂಸ್ಥೆಯ
ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
Shimoga News ಪತ್ರಿಕಾಕ್ಷೇತ್ರದಲ್ಲಿ ಪಿಟಿಐ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.
ನಾಡಿನ ಇಂಗ್ಲೀಷ್ ದೈನಿಕಗಳಲ್ಲಿ ವಿಶೇಷ ಲೇಖನ ,ವರದಿಗಳನ್ನ ಬರೆಯುವ ನಿಷ್ಣಾತ ಬರಹಗಾರರಾಗಿದ್ದರು.
ಸಿವಿಆರ್ ಎಂದೇ ಆತ್ಮೀಯರಾಗಿದ್ದ ರಾಘವೇಂದ್ರರಾವ್ ಅವರು ಚನ್ನಗಿರಿಯ ಶಾನುಭೋಗ್ ಮನತನದ ಹಿರಿಯರಾಗಿದ್ದರು.
ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನ ಅಗಲಿದ್ದಾರೆ.
Shimoga News ಹಿರಿಯ ಸಮಾಜಸೇವಾ ಧುರೀಣ ಸಿ.ವಿ.ರಾಘವೇಂದ್ರರಾವ್ ನಿಧನ
Date:
