ಕೆ ರಂಗನಾಥ್ ಗೆ ಜಿಲ್ಲಾ ಉತ್ತಮ ಸಹಕಾರಿ ಪ್ರಶಸ್ತಿ ಪ್ರಧಾನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ., ಬೆಂಗಳೂರು, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿ., ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ ನಿಯಮಿತ, ಹಾಗೂ ಸಹಕಾರ ಇಲಾಖೆ, ಶಿವಮೊಗ್ಗ ಹಾಗೂ ಎಲ್ಲಾ ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ ಹೊಸನಗರ ತಾಲೂಕು ರಿಪ್ಪಿನ್ ಪೇಟೆಯಲ್ಲಿ ನಡೆದ ’72ನೇ ಸಹಕಾರ ಸಪ್ತಾಹ ‘ ಸಮಾರೋಪ ಸಮಾರಂಭದಲ್ಲಿ ಸಹಕಾರಿ ಕ್ಷೇತ್ರಗಳ ಬೆಳವಣಿಗೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿ ಸೊಸೈಟಿಯ ಖಜಾಂಚಿಗಳು ಹಾಗೂ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರಾದ ಕೆ.ರಂಗನಾಥ್ ರವರಿಗೆ “ಜಿಲ್ಲಾ ಉತ್ತಮ ಸಹಕಾರಿ” ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು. ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು, ಮಲೆನಾಡು ಪ್ರಾಧಿಕಾರ ಅಧ್ಯಕ್ಷರು ‘ಸಹಕಾರಿ ಕ್ಷೇತ್ರದ ಭೀಷ್ಮ’ ಆರ್. ಎಂ ಮಂಜುನಾಥಗೌಡ, ರವರಿಗೂ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ‘ಸಹಕಾರಿ ರತ್ನ ‘ಎಸ್ ಕೆ ಮರಿಯಪ್ಪ, ನವರಿಗೂ , ಶಿಮುಲ್ ಅಧ್ಯಕ್ಷರಾದ ವಿದ್ಯಾಧರ್, ರವರಿಗೂ ಡಿಸಿಸಿ ಬ್ಯಾಂಕ್ ನ ಹಿರಿಯ ನಿರ್ದೇಶಕರಾದ ಜಿ.ಎನ್ ಸುಧೀರ್ ರವರಿಗೂ ಹಾಗೂ ಜಿಲ್ಲೆಯ ಎಲ್ಲಾ ಸಹಕಾರಿ ಬಾಂಧವರಿಗೆ ಕೆ ರಂಗನಾಥ್ ರವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ
ಕೆ.ರಂಗನಾಥ್ ಗೆ “ಜಿಲ್ಲಾ ಉತ್ತಮ ಸಹಕಾರಿ” ಪ್ರಶಸ್ತಿ ಪ್ರದಾನ
Date:
