Chamber of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಮತ್ತು ಲಘು ಉದ್ಯೋಗ್ ಭಾರತಿ ಕರ್ನಾಟಕ ಚಾಪ್ಟರ್‌ನ ವತಿಯಿಂದ ದಿನಾಂಕ: 25.11.2025ನೇ ಮಂಗಳವಾರ ಸಂಜೆ 4:30 ಕ್ಕೆ ವಿಶೇಷ ವಿಚಾರ ಸಂಕಿರಣವನ್ನು ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಶ್ರೀ ಹೇಮಂತ್ ಎನ್. ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಿಸಲಿದ್ದಾರೆ. Chamber of Commerce Shivamogga ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಿ.ಗೋಪಿನಾಥ್‌ರವರು ವಹಿಸಲಿರುವರು ಮತ್ತು ಲಘು ಉದ್ಯೋಗ್ ಭಾರತಿ ಶಿವಮೊಗ್ಗ ಛಾಪ್ಟರ್‌ನ ಅಧ್ಯಕ್ಷರಾದ ಶ್ರೀ ಹರ್ಷ ರುದ್ರೇಗೌಡರವರು ಉಪಸ್ಥಿತರಿರುತ್ತಾರೆ. ಸಂಘದ ಮಾನ್ಯ ಗೃಹ ಕೈಗಾರಿಕಾ ಘಟಕಗಳು, ಗುಡಿ ಕೈಗಾರಿಕೆಗಳ ಘಟಕಗಳ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ ಹಾಗೂ ಕಾರ್ಯಕ್ರಮಕ್ಕೆ ಸಂಘದ ಸದಸ್ಯ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ಲೆಕ್ಕಪರಿಶೋಧಕರು, ತೆರಿಗೆ ಸಲಹೆಗಾರರು, ವೃತ್ತಿಪರರು, ಲಘು ಉದ್ಯೋಗ್ ಭಾರತಿ ಸಂಸ್ಥೆಯ ಸದಸ್ಯರುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಗೌರವ ಕಾರ್ಯದರ್ಶಿ ಶ್ರೀ ಎ.ಎಂ. ಸುರೇಶ್‌ರವರು ಸಂಘದ ಕೋರಿದ್ದಾರೆ.
Chamber of Commerce Shivamogga ಕ್ರಾಫ್ಟ್ಸ್ ಆಫ್ ಮಲ್ನಾಡ್” ಎಂಬ ವಿಚಾರವಾಗಿ ವಿಚಾರ ಸಂಕಿರಣ
Date:
