Saturday, December 6, 2025
Saturday, December 6, 2025

Sri Sathya Sai Baba ಶಿವಮೊಗ್ಗದಲ್ಲಿ ನವೆಂಬರ್ 23 ರಂದು ಶ್ರೀಸತ್ಯಸಾಯಿಬಾಬಾ ಜನ್ಮ ಶತಮಾನೋತ್ಸವ

Date:

Sri Sathya Sai Baba ಭಗವಾನ್ ಶ್ರೀ ಸತ್ಯಸಾಯಿಬಾಬಾ ಅವರ ಜನ್ಮ ಶತಮಾನೋತ್ಸವವು ವೈಭವಯುತವಾಗಿ ಪುಟ್ಟಪರ್ತಿಯಲ್ಲಿ ನಡೆಯುತ್ತಿರುವುದರಿಂದ ಆ ದಿವ್ಯ ಸನ್ನಿಧಿಯಲ್ಲಿ ಹಲವಾರು ಭಕ್ತರು ಸೇರಿರುವುದರಿಂದ ಪ್ರತಿವರ್ಷ ನ.23ರಂದು ಬಸವನಗುಡಿ 3ನೇ ತಿರುವಿನಲ್ಲಿನ ಶ್ರೀ ಆನಂದಸಾಯಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಶ್ರೀ ಸತ್ಯ ಸಾಯಿಬಾಬಾ ಅವರ ಜನ್ಮದಿನದ ಆಚರಣೆಯನ್ನು ಈ ಬಾರಿ ಡಿ.07ರಂದು ಆಚರಿಸಲಾಗುತ್ತಿದೆ.

ಜನ್ಮಶತಮಾನೋತ್ಸವ ಅಂಗವಾಗಿ ಡಿ.5ರಂದು ಮಹಿಳಾ ದಿನಾಚರಣೆ ನಡೆಯಲಿದೆ. ಅಂದು ಬೆಳಗ್ಗೆ 10ಕ್ಕೆ ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ಹಣ್ಣು ಮತ್ತು ಪ್ರಸಾದ ವಿತರಣೆ, ಸಂಜೆ 5ಕ್ಕೆ ವೇದ ಪಠಣ, ಮಹಿಳೆಯರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಸತ್ಸಂಗ ಮತ್ತು ಭಜನೆ ಇರುತ್ತದೆ. ಡಿ.06ರಂದು ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 6ರಿಂದ 6:30ರವರೆಗೆ ವೇದಘೋಷ, 6:30ರಿಂದ 7:30ರವರೆಗೆ ಆನಂದ ಸಾಯಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 7:30ರಿಂದ 8:15ರವರೆಗೆ ಗುರುಗುಹ ಮಹಾವಿದ್ಯಾಲಯ ಮಕ್ಕಳಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಡಿ.07ರಂದು ಭಗವಾನ್ ಶ್ರೀ. ಸತ್ಯಸಾಯಿ ಬಾಬಾಅವರ ಜನ್ಮಶತಮಾನೋತ್ಸವ ಅಂಗವಾಗಿ ಬೆಳಗ್ಗೆ 9:30ರಿಂದ 10:30ರವರೆಗೆ ಬಾಲವಿಕಾಸ ಮಕ್ಕ. ರ‍್ಯಾಲಿ, 10:30ರಿಂದ 12ರವೆರೆಗೆ ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ನಂತರ ಭಜನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಇರುತ್ತದೆ.

Sri Sathya Sai Baba ಸಂಜೆ 6:30ರಿಂದ 07ರವರೆಗೆ ವೇದಘೋಷ, ಸಂಜೆ 07ರಿಂದ 7:30ರವೆರೆಗೆ ವಿವಿಧ ಶಾಲೆಗಳಲ್ಲಿ ನಡೆದ ವಲಯಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಹಾಗೂ 7:30ರಿಂದ 8:30ರವರೆಗೆ ಶ್ರೀ ಜಗನ್ನಾಥ್ ನಾಡಿಗರ್ ಅವರಿಂದ ಉಪನ್ಯಾಸ ಇರುತ್ತದೆ ಎಂದು ಶ್ರೀ ಸತ್ಯಸಾಯಿ ಸೇವಾ ಸಮಿತಿ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...