Kannada Rajyotsava ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಮಾರಣಕಟ್ಟೆ ಅವರ ಸಂಯೋಜನೆ ಮತ್ತು ನಿರ್ದೇಶನದಲ್ಲಿ ಅದ್ಧೂರಿಯಾಗಿ ಯಕ್ಷಗಾನ ಪ್ರದರ್ಶನ ನಡೆಯಿತು.
ಹಳ್ಳಿ ಹೆಬ್ಬಾಗಿಲು ಮನೆಯಲ್ಲಿ ಪ್ರತಿವರ್ಷ ನಿಷ್ಠೆಯ ಪರಂಪರೆಯೊಂದಿಗೆ ಆಯೋಜಿಸಲಾಗುವ ಪಾರಂಪರಿಕ ಕಟ್ಟು ಕಟ್ಟಳೆ ಯಕ್ಷಗಾನ ಆಟ ನಡೆಸಲಾಯಿತು.
ಹಳ್ಳಿ ಹೆಬ್ಬಾಗಿಲು ಮನೆ ಕೊಡುಗೆ ಅಪಾರವಾಗಿದ್ದು, ಕರ್ನಾಟಕದ ಯಕ್ಷಗಾನ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಅವರು ನಿರಂತರವಾಗಿ ಶ್ರದ್ಧೆ ಮತ್ತು ನಿಷ್ಠೆಯನ್ನು ತೋರಿಸಿದ್ದಾರೆ ಎಂಬುದನ್ನು ವಿಶೇಷವಾಗಿ ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಏರ್‌ಬೈಲ್ ಆನಂದ ಶೆಟ್ಟಿ ಮತ್ತು ಯಳಬೇರು ಶೇಖರ ಶೆಟ್ಟಿ ಅವರನ್ನು ವಿಶೇಷ ಗೌರವಾರ್ಥವಾಗಿ ಸನ್ಮಾನಿಸಲಾಯಿತು.
Kannada Rajyotsava ಇದೇ ಸಂದರ್ಭದಲ್ಲಿ ಹಳ್ಳಿ ಹೆಬ್ಬಾಗಿಲು ಮನೆ ಕುಟುಂಬದ ಹಿರಿಯ ಸದಸ್ಯರಾದ ಶೇಖರ ಶೆಟ್ಟಿ, ಸುಧಾರಾಮ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಅಶೋಕ್ ಶೆಟ್ಟಿ, ರವಿ ಶೆಟ್ಟಿ ಮತ್ತು ಜಯಶೀಲ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಹಾಜರಾಗಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು
