Saturday, December 6, 2025
Saturday, December 6, 2025

Radio Shimoga ಮಕ್ಕಳ ದಿನ ,ರೇಡಿಯೊ ಶಿವಮೊಗ್ಗದಲ್ಲಿ ಮಕ್ಕಳೇ ಆರ್ ಜೆ. ಗಳಾಗಿ ಮಿಂಚಿದರು

Date:

Radio Shimoga ರೇಡಿಯೋ ಶಿವಮೊಗ್ಗ 90.8ಎಫ್.ಎಂ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ನವಂಬರ್-14 ರಂದು ಇಡೀ ದಿನದ ಸಂಪೂರ್ಣ ಕಾರ್ಯಕ್ರಮಗಳು ಮಕ್ಕಳಿಂದಲೇ ಮೂಡಿಬಂದಿತು ಇದು ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ‘ಜೂನಿಯರ್ ಆರ್.ಜೆ’ ಹೆಸರಿನ ಮಕ್ಕಳಿಗಾಗಿಯೇ ಸಿದ್ಧಪಡಿಸಿದ ವಿಭಿನ್ನ ಕಾರ್ಯಕ್ರಮವಾಗಿತ್ತು. ಬೆಳಗ್ಗೆ 6 ರಿಂದ ರಾತ್ರಿ 8 ಘಂಟೆಯವರೆಗೂ ನಡೆಯುವ ಎಲ್ಲಾ ಕಾರ್ಯಕ್ರಮಗಳು, ಜಾಗೃತಿಯ ಕಾರ್ಯಕ್ರಮಗಳು, ನೇರಪ್ರಸಾರ, ಸುದ್ಧಿ ಸಮಾಚಾರ ಹೀಗೆ ಎಲ್ಲವನ್ನೂ ಮಕ್ಕಳೇ ನಡೆಸಿಕೊಟ್ಟರು.

ಶಿವಮೊಗ್ಗ, ಬೆಂಗಳೂರು, ಹಾವೇರಿ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು ಹೀಗೆ ವಿವಿಧ ಜಿಲ್ಲೆಯ ೩೫ ಕ್ಕೂ ಹೆಚ್ಚಿನ ಮಕ್ಕಳು ‘ಜೂನಿಯರ್ ಆರ್.ಜೆ’ ಗಳಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಒಟ್ಟಾರೆಯಾಗಿ ೩೫ ಕ್ಕೂ ಹೆಚ್ಚಿನ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಯ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಸೇರಿ ಇಡೀ ದಿನದ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು ಜೊತೆಗೆ ಕಾರ್ಯಕ್ರಮಗಳ ಮಧ್ಯೆ ಪ್ರಸಾರ ಆಗುವ ಹಲವು ಹಾಡುಗಳನ್ನು ಮಕ್ಕಳೇ ಹಾಡಿದ್ದರು.

ಇದು ಮಕ್ಕಳಲ್ಲಿ ರೇಡಿಯೋ ಬಗ್ಗೆ ಅಭಿರುಚಿ, ಆಸಕ್ತಿಯನ್ನು ಮೂಡಿಸುವ ಕಾರ್ಯವಾಗಿತ್ತು. ಮಕ್ಕಳ ಪ್ರತಿಭೆಗೊಂದು ಅವಕಾಶವನ್ನು ರೇಡಿಯೋ ಶಿವಮೊಗ್ಗ ನೀಡಿತ್ತು. ಕಾರ್ಯಕ್ರಮದ ಸಂಯೋಜಕರು, ಆರ್.ಜೆ ಗಳು ಎಲ್ಲಾ ಮಕ್ಕಳಿಗೆ ಮಾರ್ಗದರ್ಶನ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಎಲ್ಲಾ ಮಕ್ಕಳನ್ನು ಸಜ್ಜುಗೊಳಿಸಿದ್ದರು.

ಒಂದು ದಿನದ ಸಂಪೂರ್ಣ ಕಾರ್ಯಕ್ರಮವನ್ನು ಮಕ್ಕಳೇ ನಡೆಸಿಕೊಟ್ಟಿರುವುದು ಇದೊಂದು ದಾಖಲೆಯ ಕಾರ್ಯಕ್ರಮವಾಗಿದೆ. ಇದಕ್ಕೆ ಸಹಕರಿಸಿದ ಮಕ್ಕಳ ಪೋಷಕರು, ಶಾಲೆಯ ಶಿಕ್ಷಕರ ಸಹಕಾರ, ರೇಡಿಯೋ ಕೇಂದ್ರದ ಆರ್.ಜೆ ಗಳಾದ ಅರ್ಪಿತ, ಮಹಾಲಕ್ಷ್ಮಿ, ಪವಿತ್ರದಿನೇಶ್, ಶ್ವೇತ, ಶ್ರೀಧರ್, ರಕ್ಷಿತಹೊಳ್ಳ, ದಿನೇಶ್ ಹೊಸನಗರ, ಶ್ರೀಕಾಂತ್ ಇವರುಗಳು ಮಕ್ಕಳನ್ನು ಎಲ್ಲಾ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಿದ್ದರು.

ನಿಲಯದ ಸಂಯೋಜಕರಾದ ಗುರುಪ್ರಸಾದ್ ಮತ್ತು ನಿಲಯದ ನಿರ್ದೇಶಕರಾದ ಜನಾರ್ಧನ್ ಜಿ.ಎಲ್ ಮತ್ತು ಕಾರ್ಯಕ್ರದ ಸಂಯೋನಾಧಿಕಾರಿ ಚೇತನ್ ಕುಮಾರ್ ಸಿ ಇವರುಗಳ ಮುಂದಾಳತ್ವದಲ್ಲಿ, ಕಛೇರಿ ಸಿಬ್ಬಂದಿಗಳ ನೆರವಿನಿಂದ ಕಾರ್ಯಕ್ರಮ ಯಶಸ್ವಿಯಾಯಿತು.

Radio Shimoga ದಿನದ ಆರಂಭದ ದಿನಚರಿಯನ್ನು ಜೂನಿಯರ್ ಆರ್.ಜೆ ಪೂಜಾ.ಡಿ.ಜಿ, ಚಂದನ್.ಡಿ.ಜಿ, ‘ಅರುಣೋದಯ’ ಈ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ ಅಬ್ಧಿ ಆರ್ ನಾಡಿಗ್, ‘ಗಾಂಧಿಓದು’ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ ಮೇಘನಾ.ಎ.ಬಿ, ‘ವಚನ ವಿಹಾರ’ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ ಪ್ರಯಾಗ್.ಡಿ.ಹೆಚ್, ಸಾನ್ವಿ ಪಿ ದೇವಾಡಿಗ ಮತ್ತು ಸಂಸ್ಕöÈತಿ, ಜೂನಿಯರ್ ಆರ್.ಜೆ ಖುಷಿ ಮತ್ತು ಕೃತಿಕಾ ‘ಮಂಕುತಿಮ್ಮನಕಗ್ಗ’ ದ ವಾಚನ ಮತ್ತು ನಿರೂಪಣೆಯನ್ನು, ಜೂನಿಯರ್ ಆರ್.ಜೆ ನಮಿತಾ ಮತ್ತು ಸನ್ನಿಧಿ ಇವರುಗಳ ಕಥೆಯನ್ನು, ಯೋಗದ ಮಹತ್ವವನ್ನು ಜ್ಞಾನಶ್ರೀ ಸನ್ನಿಧಿ ‘ದಿನದ ವಿಶೇಷ’ ಸುದ್ಧಿಸಮಾಚಾರವನ್ನು ಜೂನಿಯರ್ ಆರ್.ಜೆ ರಮ್ಯಾ, ‘ಪರಿಸರ ಪರಿಚಯ’ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ ಇಂಪನ.ಎಂ.ವಿ ಇವರು ಪರಿಸರ ಮಾಲಿನ್ಯದ ಬಗ್ಗೆ, ‘ಟ್ರಾವೆಲ್ಲರ್ ಸ್ ಡೈರೀ’ ಕಾರ್ಯಕ್ರಮವನ್ನು ಬಸರೀಕಟ್ಟೆಯಿಂದ ಜೂನಿಯರ್ ಆರ್.ಜೆ ರುಚಿರ ಜೂನಿಯರ್ ಆರ್.ಜೆ ಆದ್ಯಾ ಆರ್ ಕಷ್ಯಪ್, ಕುಣಿಗಲ್ ನ ಜೂನಿಯರ್ ಆರ್.ಜೆ ಚೆಂದನ್.ಡಿ.ಜಿ, ‘ಸಾಹಿತ್ಯಲೋಕ’ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ ಆಲಾಪನ, ‘ಬಿಂದಾಸ್ ಮಾರ್ನಿಂಗ್’ ನೇರಫೋನ್ ಇನ್ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ ಗಳಾದ ಅಬ್ಧಿ ಆರ್ ನಾಡಿಗ್, ಸೃತಿ ಭಾರಧ್ವಾಜ್ ನಡೆಸಿಕೊಟ್ಟರು. ‘ಸೋಶಿಯಲ್ ಮೀಡಿಯಾ ಕಥೆಗಳು’ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ ಕರಣ್ ನಡೆಸಿಕೊಡಲಿದ್ದಾರೆ.

‘ಅಂಬೇಡ್ಕರ್‌ಓದು’ ಕಾರ್ಯಕ್ರಮವನ್ನು ಹಾವೇರಿಯ ಜೂನಿಯರ್ ಆರ್.ಜೆ ಲಿಖಿತ, ‘ಅಡುಗೆಮನೆಯಲ್ಲೊಂದು ಸುತ್ತು’ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ ಆರೋಹಣ, ಸ್ಥಳೀಯ ಸುದ್ಧಿಗಳನ್ನು ತಿಳಿಸುವ ‘ಸುತ್ತಮುತ್ತಾ’ ಸುದ್ಧಿ ಸಮಾಚಾರವನ್ನು ಜೂನಿಯರ್ ಆರ್.ಜೆ ಸಮನ್ವಿತ, ಪಂಚತಂತ್ರ ಕಥೆಯನ್ನು ಜೂನಿಯರ್ ಆರ್.ಜೆ ವೈಷ್ಣವಿ, ವಿಜ್ಞಾನದ ವಿಶೇಷತೆಯ ಜಾಣಸುದ್ದಿ ಬಗ್ಗೆ ಜೂನಿಯರ್ ಆರ್.ಜೆ ವಚನ.ಎಂ.ಬಿ, ಕಾಫಿ ವಿತ್ ಆರ್ ಜೇಸ್, ಸಿನಿಕಹಾನಿ ನೇರ ಫೋನ್‌ಇನ್ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ ಗಳಾದ ದಿಶಾ.ಪಿ, ಪ್ರಯಾಗ್ ಮತ್ತು ಪರ್ಣವಿ ಇವರುಗಳು ನಡೆಸಿಕೊಟ್ಟರು.

‘ನಮ್ಮ ನಡಿಗೆ ಪರಿಹಾರದ ಕಡೆಗೆ’ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ ಜೀವಿತ ಮೌನೇಶ್, ‘ವಿಸ್ಮಯಜಗತ್ತು’ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ ನಿತಿನ್ ಸಾಸ್ವೆಹಳ್ಳಿ, ‘ಬ್ಯುಜಿನೆಜ್ ಬಝ್’ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ.ಸೃತಿ ಭಾರಧ್ವಾಜ್, ‘ನಿಮ್ಮ ಕೃಷಿ ನಮ್ಮ ಖುಷಿ’ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ ಪರ್ಣವಿ, ವಿಜ್ಞಾನಿ, ಕೂತುಹಲ ಸಂಗತಿ ಬಗ್ಗೆ ಜೂನಿಯರ್ ಆರ್.ಜೆ ಸಿರಿ.ಎ.ಎಸ್, ಪೇಟೆ ಸಂಚಾರ ಸುದ್ಧಿ ಸಮಾಚಾರವನ್ನು ಜೂನಿಯರ್ ಆರ್.ಜೆ ಅಭಿಜ್ಞ ಭಟ್, ಆವಿಷ್ಕಾರದ ಅಸ್ಮಿತೆ ಕಾರ್ಯಕ್ರಮವನ್ನು ಜೂನಿಯರ್ ಆರ್.ಜೆ ಪ್ರಣವ್.ಡಿ.ಹೆಚ್ ಇವರುಗಳು ನಡೆಸಿಕೊಟ್ಟರು. ಇದರಲ್ಲಿ ಕೆಲವು ಆಗಾಗ ನಾವು ಬಂದು ಕಾರ್ಯಕ್ರಮವನ್ನು ಕೊಡುತ್ತೇವೆ.

ನಮಗೂ ಮಾತನಾಡಲು ಒಂದಿಷ್ಟು ಧೈರ್ಯವು ಮೂಡಿದೆ. ಜೊತೆಗೆ ಇಲ್ಲಿಯ ಕಾರ್ಯವು ನಮಗೆ ಖುಷಿ ಕೊಟ್ಟಿದೆ. ಎಂದು ಮಕ್ಕಳು ಹೇಳುವಾಗ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸಾರ್ಥಕ ಎನ್ನುವ ಭಾವ ನಮ್ಮೆಲ್ಲರಲ್ಲಿ…
ಜನಾರ್ಧನ್.ಜಿ.ಎಲ್
ನಿಲಯದ ನಿರ್ದೇಶಕರು
ರೇಡಿಯೋ ಶಿವಮೊಗ್ಗ 90.8ಎಫ್.ಎಂ, ಶಿವಮೊಗ್ಗ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...