Swami Vivekananda International 2026ರ ಜನವರಿ ಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ನಿಮಿತ್ತ ಬೆಳಗಾವಿಯಲ್ಲಿ ನ. 20ರ ನಾಳೆ ಮತ್ತು 21ರಂದು ರಾಜ್ಯಮಟ್ಟದ ಶಾಲಾ ಬ್ಯಾಂಡ್ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಗೆ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಶಾಲೆ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲಾ ಮಕ್ಕಳು ಆಯ್ಕೆಯಾಗಿದ್ದಾರೆ.
Swami Vivekananda International ರಾಜ್ಯ ಮಟ್ಟದ ಶಾಲಾ ಬ್ಯಾಂಡ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ. ಈ ಬೃಹತ್ ವೇದಿಕೆಯಲ್ಲಿ ತಮ್ಮ ಪ್ರತಿಭೆ, ಶಿಸ್ತಿನ ಪ್ರದರ್ಶನ ಮತ್ತು ತಂಡದ ಪ್ರಭಾವ ವನ್ನು ತೋರಿಸಲು ಮುಂದಾಗಿರುವ ಮಕ್ಕಳಿಗೆ ಮತ್ತು ತರಬೇತುದಾರರಿಗೆ ಯಶಸ್ವಿಯಾಗಿ ಬರಲಿ ಎಂದು ಶಾಲಾ ಸಮಿತಿಯ ಗೌರವ ಅಧ್ಯಕ್ಷರಾದ ಅನೂಪ್ ಪಟೇಲ್ ಮತ್ತು ಉಪಾಧ್ಯಕ್ಷೆ ರಾಗಿಣಿ ಸಿಂಗ್, ಮುಖ್ಯೋಪಾಧ್ಯಾಯಿನಿ ರೂಪಶ್ರೀ, ಶಿಕ್ಷಕರು ಮತ್ತು ಸಿಬ್ಬಂಧಿ ವರ್ಗದವರು ಶುಭ ಹಾರೈಸಿದ್ದಾರೆ.
