Karnataka State Human Rights Commission ಮಾನವ ಹಕ್ಕುಗಳು ಜನಾಂಗ, ಲಿಂಗ, ಧರ್ಮ, ರಾಷ್ಟ್ರೀಯತೆ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುವ ಮತ್ತು ಜೀವನ, ಸ್ವಾತಂತ್ರ್ಯ, ಶಿಕ್ಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳನ್ನು ಒಳಗೊಂಡಿವೆ ಮಾತ್ರವಲ್ಲ ಸಮಾಜದಲ್ಲಿ ನ್ಯಾಯ, ಶಾಂತಿ ಮತ್ತು ಸಮಾನತೆಯನ್ನು ಉತ್ತೇಜಿಸುವಲ್ಲಿ ಹಾಗೂ ಸರ್ವರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಘನತೆಯನ್ನು ಹೆಚ್ಚಿಸುವಲ್ಲಿ ಆಯೋಗ ಕಾರ್ಯನಿರ್ವಹಿಸಲಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್‌ಭಟ್‌ಅವರು ಹೇಳಿದರು.
ಅವರು ಶಿವಮೊಗ್ಗ ನಗರದ ಮೆಗ್ಗಾನ್‌ಆಸ್ಪತ್ರೆ, ನಗರದ ಕೆ.ಎಸ್.ಆರ್.ಟಿ.ಸಿ. ಬಸ್‌ನಿಲ್ದಾಣ, ಕೇಂದ್ರ ಕಾರಾಗೃಹ ಮತ್ತು ಶಿವಪ್ಪನಾಯಕ ಅರಮನೆಗೆ ಭೇಟಿ ಮಾಡಿ ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲಿಸಿದ ನಂತರ ಜಿಲ್ಲಾ ಪಂಚಾಯಿತಿ ಅಬ್ದುಲ್‌ನಜೀರ್‌ಸಾಬ್‌ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ವಿಚಾರಣೆ ಕಾರ್ಯಕ್ರಮದ ನಂತರ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ
ಚರ್ಚಿಸಿ ಮಾಹಿತಿ ಪಡೆದು ಮಾತನಾಡುತ್ತಿದ್ದರು.
ಶಿಕ್ಷಣದ ಹಕ್ಕು ಮತ್ತು ಆರೋಗ್ಯ ಸೇವೆಗಳಿಗೆ ಪ್ರವೇಶದಂತಹ ಹಕ್ಕುಗಳು ಸಮಾಜದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ ಎಂದ ಅವರು ಮಾನವ ಹಕ್ಕುಗಳ ರಕ್ಷಣೆಯು ನ್ಯಾಯ, ಸಮಾನತೆ ಮತ್ತು ಶಾಂತಿಯುತ ಸಮಾಜವನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಮಾತ್ರವಲ್ಲ ಎಲ್ಲಾ ರೀತಿಯ ಅಸಮಾನತೆಗಳು ಮತ್ತು ಶೋಷಣೆಗಳ ವಿರುದ್ಧ ಹೋರಾಡುತ್ತದೆ ಎಂದವರು ನುಡಿದರು.
ಮಹಿಳೆಯರು, ಮಕ್ಕಳು, ಶೋಷಿತರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ದುರ್ಬಲ ಗುಂಪುಗಳ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಹಾಗೂ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು, ಗುಲಾಮಗಿರಿ ಮತ್ತು ಚಿತ್ರಹಿಂಸೆಯಿಂದ ಮುಕ್ತಿ, ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಮಾವನ ಹಕ್ಕುಗಳು ಪ್ರತಿಪಾದಿಸುತ್ತವೆ ಎಂದವರು ನುಡಿದರು.
ಜೈಲಧಿಕಾರಿಗಳು ವಿಚಾರಣಾಧೀನ ಖೈದಿಗಳಿಗೆ ಎಣ್ಣೆ, ಸೋಪು, ಪೇಸ್ಟ್, ಚಪ್ಪಲಿ, ಇತ್ಯಾದಿ ಅಗತ್ಯ ವಸ್ತುಗಳನ್ನು ಮಾನವೀಯ ನೆಲೆಯಲ್ಲಿ ಒದಗಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಿ. ಬಂಧೀಖಾನೆಯಿಂದ ಆಸ್ಪತ್ರೆ, ನ್ಯಾಯಾಲಯಕ್ಕೆ ಹೋಗಿ ಹಿಂದಿರುವ ಖೈದಿಗಳಿಗೆ ನಿಯಮಾನುಸಾರ ತಪಾಸಣೆಗೆ ಒಳಪಡಿಸಿ.
–ಎಸ್.ಕೆ.ವಂಟಿಗೋಡಿ. ಸದಸ್ಯರು, ಮಾನವ ಹಕ್ಕುಗಳ ಆಯೋಗ.
ಯಾವುದೇ ಇಲಾಖೆಯ ಅಧಿಕಾರಿಗಳು ತಮ್ಮ ಕಚೇರಿಗಳಿಗೆ ಸೌಲಭ್ಯವನ್ನು ಅರಸಿ ಬರುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ಇದರಿಂದಾಗಿ ಶೇ.50ರಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಅಲ್ಲದೇ ಸಾರ್ವಜನಿಕರಿಗೆ ಸಮಾಧಾನ ದೊರೆಯಲಿದೆ ಎಂದರು.
ಆಯೋಗದಲ್ಲಿ ದಾಖಲಾದ ಪ್ರಕರಣಗಳಲ್ಲಿ ಕಳೆದ ವರ್ಷದಿಂದೀಚೆಗೆ ಸುಮಾರು 13000ಕ್ಕೂ ಹೆಚ್ಚಿನ ಪ್ರಕರಣಗಳ ವಿಚಾರಣೆ ನಡೆಸಿ, ಇತ್ಯರ್ಥಗೊಳಿಸಲಾಗಿದೆ. ದಾಖಲಾಧ ಒಟ್ಟು ಪ್ರಕರಣಗಳಲ್ಲಿ ಅಕ್ಟೋಬರ್‌ಮಾಸಾಂತ್ಯದವರೆಗೆ ಇನ್ನೂ3413ಪ್ರಕರಣಗಳು ಬಾಕಿ ಉಳಿದಿವೆ. ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಬಗ್ಗೆ ಸುಮಾರು 100ಮೊಕದ್ದಮೆಗಳು ದಾಖಲಾಗಿದ್ದು, ಅವುಗಳಲ್ಲಿ 50ಪ್ರಕರಣಗಳ ವಿಚಾರಣೆ ನಡೆಸಲಾಗಿದ್ದು, ಉಳಿದವುಗಳನ್ನು ಹಂತಹಂತವಾಗಿ ವಿಚಾರಣೆ ನಡೆಸಿ, ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದ ಅವರು ದಾಖಲಾದ ಪ್ರಕರಣಗಳಲ್ಲಿ ಶೇ. 80ರಷ್ಟು ಪ್ರಕರಣಗಳು ಪೊಲೀಸ್‌ಇಲಾಖೆಗೆ ಸೇರಿದ್ದವುಗಳೇ ಆಗಿರುತ್ತವೆ ಎಂದವರು ನುಡಿದರು.
Karnataka State Human Rights Commission ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಅವರು ಮಾತನಾಡಿ, ಅಧಿಕಾರಿಗಳ ಭೇಟಿಗಾಗಿ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಚೇರಿಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ ಅವರು, ಮೆಗ್ಗಾನ್‌ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳ ಸಂಬಂಧಿಗಳು ಉಳಿದುಕೊಳ್ಳಲು ಅನುಕೂಲವಾಗುವಂತೆ ವಿಶ್ರಾಂತಿಗೃಹ ನಿರ್ಮಾಣದ ಅಗತ್ಯವನ್ನು ಗಮನಿಸಲಾಗಿದ್ದು, ಅದನ್ನು ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಇಂದಿನ ಸ್ಥಳ ಭೇಟಿ ಸಂದರ್ಭದಲ್ಲಿ ಗಮನಿಸಿರುವಂತೆ ನಗರದ ಖಾಸಗಿ ಬಸ್‌ನಿಲ್ದಾಣದ ಸ್ವಚ್ಚತೆ ಮತ್ತು ಶೌಚಾಲಯ ನಿರ್ವಹಣೆ ಕುರಿತು ಖಾಸಗಿ ಬಸ್ಸುಗಳ ಮಾಲೀಕರೊಂದಿಗೆ ಕೂಡಲೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಖೈದಿಗಳ ಭೇಟಿಗೆ ತೆರಳುವ ಸಾರ್ವಜನಿಕರು ಹಾಗೂ ಕುಟುಂಬದ ಸದಸ್ಯರ ಅನುಕೂಲಕ್ಕಾಗಿ ಬಸ್‌ಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆಯೂ ಸಾರಿಗೆ ನಿಗಮದ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ಮಾನವ ಹಕ್ಕುಗಳ ಆಯೋಗಕ್ಕೆ ಸಮಾನವಾಗಿರುವಂತೆ ಹೆಸರಿನ ಸಂಸ್ಥೆಗಳ ಹೆಸರಿನಲ್ಲಿ ಅನೇಕರು ಅಧಿಕಾರಿಗಳ ಮೇಲೆ ಬೆದರಿಕೆ, ದೌರ್ಜನಕ್ಕೆ ಮುಂದಾಗಿರುವ ಬಗ್ಗೆ ದೂರುಗಳು ಆಯೋಗಕ್ಕೆ ಬಂದಿವೆ ಇಂತಹ ಸಂಸ್ಥೆ, ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ಎಚ್ಚರದಿಂದಿರುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತಹೆಗಡೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನಿನ್ನೆ ಸಂಜೆ ಪರಿಶಿಷ್ಟ ಜಾತಿ ಪಂಗಡಗಳ ಕಲ್ಯಾಣ ಇಲಾಖೆ, ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲಾಗುತ್ತಿರುವ ಮೆಟ್ರಿಕ್‌ಪೂರ್ವ ವಸತಿನಿಲಯಗಳು, ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಇಂದು ನಗರದ ಮೆಗ್ಗಾನ್‌ಆಸ್ಪತ್ರೆ, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣ, ಕೇಂದ್ರ ಕಾರಾಗೃಹ ಮತ್ತು ಶಿವಪ್ಪನಾಯಕನ ಬೇಸಿಗೆ ಅರಮನೆಗಳಿಗೆ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಭೇಟಿ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್‌ವಿ., ಮೆಗ್ಗಾನ್‌ಅಧೀಕ್ಷಕ ಡಾ|| ಸಿದ್ಧನಗೌಡ, ಕೆ.ಎಸ್.ಆರ್.ಟಿ.ಸಿ. ಡಿ.ಸಿ. ನವೀನ್‌ಕುಮಾರ್, ಡಿ.ಟಿ.ಒ. ದಿನೇಶಕುಮಾರ್, ಜೈಲಧಿಕಾರಿ ಡಾ|| ಪಿ.ರಂಗನಾಥ್, ಉಪವಿಭಾಗಾಧಿಕಾರಿ ಸತ್ಯನಾರಾಯಣ, ತಹಶೀಲ್ದಾರ್‌ರಾಜೀವ್‌ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.
Karnataka State Human Rights Commission ಮಾನವೀಯ ಹಕ್ಕುಗಳ ರಕ್ಷಣೆ ಸಮಾಜದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ- ಟಿ.ಶ್ಯಾಮಭಟ್
Date:
