ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ ಪಾಠ ಶಾಲೆಯಲ್ಲಿ ಗಾನಲಹರಿ 141ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮವನ್ನು ನ. 20ರಂದು ಸಂಜೆ 6:30ಕ್ಕೆ ಪುಣ್ಯಾಶ್ರಮದ ಆವರಣದಲ್ಲಿ ಆಯೋಜಿಸಲಾಗಿದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳೂ ಅಧ್ಯಕ್ಷತೆ ವಹಿಸುವರು. ನವುಲೆಯ ಅರ್ಪತಾ ಭಜನಾ ಮಂಡಳಿ ಯಿಂದ ಭಜನಾ ಸೇವೆ ಮತ್ತು ಆಶ್ರಮದ ಅಂಧ ಮಕ್ಕಳಿಂದ ಪ್ರಾರ್ಥನೆ ನಡೆಯಲಿದೆ.
ದಾವಣಗೆರೆ ಆಶ್ರಮದ ಗಾಯಕ ಉದಯ ರಾಣೆಬೆನ್ನೂರು ಅವರಿಂದ ಸಂಗೀತ ಸೇವೆ ನಡೆಯಲಿದೆ. ಮಹಂತೆಶ್ ಕಿರಟಗೆರೆ ಅವರ ಹಾರ್‍ಮೋನಿಯಂ ಸೋಲೊ, ದಿತ್ಯ ಜಿಗಳಿ ಅವರ ತಬಲ, ರಾಮಣ್ಣ ಭಜಂತ್ರಿ ಶಹನಾಯ, ವೀರಭದ್ರಯ್ಯ ಶಾಸ್ತ್ರಿಗಳಿಂದ ವೇದಘೋಷ ಹಾಗೂ ಹಿರಿಯ ತಬಲ ಕಲಾವಿದರಾದ ಪಂ. ಆರ್. ತುಕಾರಾಮ್ ರಂಗಧೋಳ್ ಅವರ ತಬಲಸೇವೆ ಹಾಗೂ ಸಿದ್ದಣ್ಣ ಬಡಿಗಾರ್ ಅವರು ಆರ್‍ಮೋನಿಯಂ ನೊಂದಿಗೆ ಸಾಥ್ ನೀಡಲಿದ್ದಾರೆ.
ರೇವಣ್ಣ ಸಿದ್ದಯ್ಯ ಶಾಸ್ತ್ರಿ ನಿರೂಪಿಸಲಿದ್ದಾರೆ.
