Rotary Club Shivamogga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯು ವಲಯ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನ.23ರಂದು ಶೃಂಗೇರಿಯಲ್ಲಿ ಆಯೋಜಿಸಿರುವ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗೆ ಆಯ್ಕೆಯಾಗಿದೆ.
ರೋಟರಿ ಕ್ಲಬ್ ಕೋಣಂದೂರು ವತಿಯಿಂದ ಕೋಣಂದೂರಿನ ವಿನಾಯಕ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಿದ್ದ ರೋಟರಿ ಕಲೋತ್ಸವ 2025 ಗಾನ, ನೃತ್ಯ, ಕಲರವ ಸಂಬಂಧಿಸಿದ ವಲಯ 11ರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯು ವಲಯಮಟ್ಟದ ಚಾಂಪಿಯನ್ ಆಗಿದೆ.
ಜನಪದ ಗೀತೆಯಲ್ಲಿ ಶೈಲಜಾ ತಿರುಮಲೇಶ್ ಪ್ರಥಮ ಸ್ಥಾನ, ಸೋಲೋ ಡ್ಯಾನ್ಸ್ ನಲ್ಲಿ ಶಶಿಕಾಂತ್ ನಾಡಿಗ್ ಪ್ರಥಮ ಸ್ಥಾನ, ಸೋಲೋ ಡ್ಯಾನ್ಸ್ ಆನೆಟ್‌ನಲ್ಲಿ ಕೀರ್ತನಾ ಪ್ರಥಮ ಸ್ಥಾನ, ಯುಗಳ ಗೀತೆಯಲ್ಲಿ ಜಿ.ವಿಜಯಕುಮಾರ್ ಮತ್ತು ಶೈಲಜಾ ತಿರುಮಲೇಶ್ ಪ್ರಥಮ ಸ್ಥಾನ, ಏಕವ್ಯಕ್ತಿ ಅಭಿನಯ ಸ್ಪರ್ಧೆಯಲ್ಲಿ ಡಾ. ಅರುಣ್ ಪ್ರಥಮ ಸ್ಥಾನ, ಗ್ರೂಪ್ ಡ್ಯಾನ್ಸ್ ನಲ್ಲಿ ಕ್ಲಬ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್‌ಕುಮಾರ್, ಕಾರ್ಯದರ್ಶಿ ಡಾ. ಧನಂಜಯ ರಾಂಪುರ, ಡಾ. ಅರುಣ್, ಶಶಿಕಾಂತ್ ನಾಡಿಗ್, ಜಿ.ವಿಜಯಕುಮಾರ್, ಸತೀಶ್ ಚಂದ್ರ, ಬಿಂದು ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Rotary Club Shivamogga ಕೋಣಂದೂರು ಕ್ಲಬ್ ಅಧ್ಯಕ್ಷ ಸದಾಶಿವ, ಸಾಂಸ್ಕೃತಿಕ ಸಮಿತಿಯ ಚೇರ್ಮನ್ ಸತೀಶ್ ಚಂದ್ರ, ಸುಮತಿ ಕುಮಾರಸ್ವಾಮಿ, ಅರುಣ್ ದೀಕ್ಷಿತ್, ಎಚ್.ಡಿ.ವಿನಯ್, ಎಂ.ಬಿ.ಲಕ್ಷ್ಮಣ ಗೌಡ, ಎಚ್.ಎಂ.ಸುರೇಶ್, ಜೆ.ರಾಧಾಕೃಷ್ಣ, ಭರತ್‌ಕುಮಾರ್ ಕೂಡ್ಲು, ಜಿ.ಕಿರಣ್‌ಕುಮಾರ್, ಡಾ. ರಾಜನಂದಿನಿ ಕಾಗೋಡು, ಜೆ.ಪಿ.ಕಿರಣ್, ಬಿ.ಟಿ.ಈಶ್ವರಪ್ಪ ಹಾಜರಿದ್ದರು.
