Rotary Club Shimoga ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗುಡ್‌ಲಕ್ ಆರೈಕೆ ಕೇಂದ್ರದ ಕಾರ್ಯ ಶ್ಲಾಘನೀಯ ಎಂದು ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಹೇಳಿದರು.
ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸೇವಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ, ಅಶಕ್ತರು, ಅನಾಥರು ಹಾಗೂ ಹಿರಿಯರನ್ನು ಆರೈಕೆ ಮಾಡಿ ಪೋಷಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ನಮ್ಮ ಜೀವನದಲ್ಲಿ ಪುಣ್ಯ ಪ್ರಾಪ್ತಿ ಜೊತೆಗೆ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.
ಇಂದು ಮಾನವೀಯ ಸಂಬಂಧಗಳು ಕಡಿಮೆಯಾಗುತ್ತಿವೆ. ಆಧುನಿಕ ಯುಗದಲ್ಲಿ ಮಾನವೀಯ ಮೌಲ್ಯಗಳು ಕಳೆದುಕೊಳ್ಳುತ್ತಿದ್ದೇವೆ. ರೋಟರಿ ಸಂಸ್ಥೆಗಳ ಮುಖಾಂತರ ಪ್ರಪಂಚಾದ್ಯಂತ ಮಾನವೀಯ ಸೇವೆಗಳು ನಿರಂತರವಾಗಿ ನಡೆದು ಬರುತ್ತಿವೆ. ಅದರಲ್ಲೂ ಇಂತಹ ಅನಾಥ ಆರೈಕೆ ಕೇಂದ್ರಗಳಿಗೆ ಮಾಡಿದ ದಾನದಿಂದ ಅದರ ಹತ್ತು ಪಟ್ಟು ಲಾಭ ಫಲಿಸುತ್ತದೆ ತಿಳಿಸಿದರು.
ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಗುಡ್‌ಲಕ್ ಆರೈಕೆ ಕೇಂದ್ರದ ಸೇವೆಗಳ ಬಗ್ಗೆ ಶ್ಲಾಘಿಸಿದರು. ರೋಟರಿ ಉತ್ತರ ಸದಸ್ಯ ದತ್ತಾತ್ರಿ ಅವರು ಆರೈಕೆ ಕೇಂದ್ರಕ್ಕೆ 25,000 ರೂ. ಬೆಲೆ ಬಾಳುವ ಯುಪಿಎಸ್ ಬ್ಯಾಟರಿ ಸಂಪೂರ್ಣ ಸೆಟ್ ದೇಣಿಗೆ ನೀಡಿದರು.
ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ಯು.ರವೀಂದ್ರನಾಥ್ ಐತಾಳ್ ಅವರು ದಾನಿಗಳನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿ, ಗುಡ್‌ಲಕ್ ಆರೈಕೆ ಕೇಂದ್ರ ವ್ಯವಸ್ಥಿತವಾಗಿ ನಡೆಯಲು ರೋಟರಿ ಸದಸ್ಯರು ಪ್ರಮುಖ ಕಾರಣರಾಗಿದ್ದಾರೆ. ಪ್ರತಿ ವರ್ಷ ನಿತ್ಯ ಅನ್ನಪೂರ್ಣೇಶ್ವರಿ ಪ್ರಸಾದ ಯೋಜನೆಗೆ ಪ್ರಾರಂಭದಿಂದಲೂ ಸಹಕಾರ ನೀಡುತ್ತ ಬಂದಿದ್ದಾರೆ. ಸಾಕಷ್ಟು ದಾನಿಗಳು ಕೈಜೋಡಿಸಿದ್ದಾರೆ. ಅವರ ಸೇವೆ ನಿತ್ಯ ಸ್ಮರಣೀಯ ಎಂದು ತಿಳಿಸಿದರು.
Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ರೋಟರಿ ಸಂಸ್ಥೆಯಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಸೇವಾ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ರೇಖಾ ಪಾಲಾಕ್ಷ, ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಕಾರ್ಯದರ್ಶಿ ಶಿವಕುಮಾರ್, ಸರ್ಜಾ ಜಗದೀಶ್, ಜಿ.ವಿಜಯಕುಮಾರ್, ಎಸ್.ದತ್ತಾತ್ರಿ, ವಾರಿಜಾ ಜಗದೀಶ್, ರವೀಂದ್ರನಾಥ ಐತಾಳ್, ರಮೇಶ್, ವೆಂಕಟೇಶ್, ಉಷಾ ವೆಂಕಟೇಶ್, ಕಡಿದಾಳ್ ಸದಾನಂದ, ಶ್ರಾವಣ, ಶಾರದಾ ಬಸವರಾಜ್ ಮತ್ತಿತರರು ಭಾಗವಹಿಸಿದ್ದರು
Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ, ಶಿವಮೊಗ್ಗದ ಗುಡ್ ಲಕ್ ಆರೈಕೆ ಕೇಂದ್ರದ ಸೇವೆ ಶ್ಲಾಘನೀಯ- ಕೆ.ಫಾಲಾಕ್ಷ
Date:
