Department of Social Welfare ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ನ.14 ರಂದು ಇನ್‌ಸ್ಪೈರ್ ಎಂಬ ವಿನೂತನ ಕಾರ್ಯಕ್ರಮದಡಿ ಇಗ್ನೆಂಟ್ ಮೈಂಡ್ & ಇಗ್ನೆಂಟ್ ಪಾಸಿಟಿವಿಟಿ ಎಂಬ ಘೋಷವಾಕ್ಯದೊಂದಿಗೆ ಆನ್‌ಲೈನ್ ಪಾಡ್‌ಕಾಸ್ಟ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ 32 ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು 150 ವಿದ್ಯಾರ್ಥಿ ನಿಲಯಗಳ 5 ನೇ ತರಗತಿಯಿಂದ ಪದವಿ/ಇಂಜಿನಿಯರಿಂಗ್/ಸ್ನಾತಕೋತ್ತರ ಓದುತ್ತಿರುವ ಸುಮಾರು 20 ರಿಂದ 22 ಸಾವಿರ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಶ್ರೀನಾಥ ರತ್ನಕುಮಾರ್‌ರವರು ಉಪಗ್ರಹದ ಉಪಯೋಗಗಳು, ಬಾಹ್ಯಾಕಾಶ ಕಲ್ಪನೆ ಮತ್ತು ವಿಸ್ತಾರ, ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಏನೆಲ್ಲಾ ಬೇಕು, ರಾಕೆಟ್ ವಿಜ್ಞಾನದ ಇತಿಹಾಸ, ಬಾಹ್ಯಾಕಾಶ ಉಡುಪುಗಳು ಮತ್ತು ಅಪಘಾತಗಳು, ದೇಹದ ಮೇಲೆ ಉಂಟಾಗುವ ಪರಿಣಾಮಗಳು, ಅಂತಿಕ್ಷ ಯಾನದ ಆಹಾರ, ಅಂತರಿಕ್ಷದ ಕೃಷಿ, ಯಾನದ ತರಬೇತಿ, ನೌಕೆಗಳ ಅಭಿವೃದ್ದಿ, ರಾಕೆಟ್‌ಗಳ ಮರುಬಳಕೆ, ಬಾಹ್ಯಾಕಾಶ ತಂತ್ರಜ್ಞಾನ ಬೆಳೆದು ಬಂದ ದಾರಿ, ಇಸ್ರೋ, ನಾಸಾ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ವಿವರಣೆ ನೀಡಿದರು.
Department of Social Welfare ಈ ಆನ್‌ಲೈನ್ ಪಾಡ್‌ಕಾಸ್ಟ್ ವಿಡಿಯೋ ಸಂವಾದದಲ್ಲಿ ಜಿ.ಪಂ ಸಿಇಓ ಹೇಮಂತ್ ಎನ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರೀತಿ ಭಾಗವಹಿಸಿದ್ದರು.
