ನಾವೀಗ ರಾಷ್ಟ್ರಪಿತ ಗಾಂಧೀಜಿ ಸ್ವಾತಂತ್ರಕ್ಕೋಸ್ಕರವಾಗಿ ಹೋರಾಡಿದ ಅನೇಕ ಮಹನೀಯರು ಭೂದಾನದ ಹರಿಕಾರ ವಿನೋಬಾ ಬಾವೆ ಮುಂತಾದವರನ್ನು ಮರೆಯುತ್ತಿದ್ದೇವೆ ಇದು ಸರ್ವತ ಒಳ್ಳೆಯದಲ್ಲ. ಈ ಮಹನೀಯರುಗಳು ದೇಶದ ಸ್ವಾತಂತ್ರ್ಯಕ್ಕೆ ಮತ್ತು ಒಗ್ಗಟ್ಟಿಗೆ ಅನೇಕ ಮಹತ್ತರ ಕೆಲಸಗಳನ್ನು ಮಾಡಿ ತಮ್ಮ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ ಅವರೆಲ್ಲರನ್ನ ಸ್ಮರಿಸುವ ಮತ್ತು ಅವರು ತೋರಿದ ಹಾದಿಯಲ್ಲಿ ನಡೆಯುವ ಕಾರ್ಯ ಮುಂದಿನ ಯುವ ಜನಾಂಗಕ್ಕೆ ಆಗಬೇಕಿದೆ ಎಂದು ಸಾಹಿತಿ ಎಂ ಎನ್ ಸುಂದರರಾಜ್ ತಿಳಿಸಿದ್ದಾರೆ.
ಅವರು ಗೋಪಾಲದ ರಾಮಕೃಷ್ಣ ಶಾಲೆಯ ಆವರಣದಲ್ಲಿ ನಡೆದ ಜಿಲ್ಲಾ ಸರ್ವೋದಯ ಮಂಡಲ ಏರ್ಪಡಿಸಿದ್ದ ಪ್ರಬಲ ಭಾಷಣ ಸ್ಪರ್ಧೆಯಲ್ಲಿ ಉದ್ಘಾಟಕರಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷ ಮನೋಹರ್ ಮಾತನಾಡಿ ಮುಂದೆಯೂ ಸಹ ಇಂತಹ ಅನೇಕ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ಏರ್ಪಡಿಸಿ ಗಾಂಧೀಜಿಯವರ ತತ್ವಗಳನ್ನು ಪ್ರಚಾರ ಮಾಡಲಾಗುವುದು ಎಂದು ತಿಳಿಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾರ್ಯದರ್ಶಿ ಜಿ ವಿಜಯಕುಮಾರ್ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿ ಹೇಳಿದರು ಕಾರ್ಯಕ್ರಮದಲ್ಲಿ ಅಂಜನ್ ರಾಮ್ ತಿವಾರಿ ಮತ್ತು ಆರತಿ ತಿವಾರಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ತೀರ್ಥೇಶ್ ಅವರು ಎಲ್ಲರನ್ನು ಸ್ವಾಗತಿಸಿ ಒಂದು ಕೊನೆಗೆ ವಂದಿಸಿದರು.
ಗಾಂಧೀಜಿಯವರ ಸಪ್ತ ಸಾಮಾಜಿಕ ಪಾದಕಗಳಲ್ಲಿ ಒಂದರ ಕುರಿತು ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಈ ಸ್ಪರ್ಧೆಯಲ್ಲಿ ಒಟ್ಟು 12ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಅಂತಿಮವಾಗಿ ಈ ಕೆಳಕಂಡವರಿಗೆ ಬಹುಮಾನ ನೀಡವಾಯಿತು. ಸೂಕ್ತಿ ಎಸ್ ಟಿ, ಸೃಜನ್ ಎಸ್ ಪವಾರ್, ಅನುಷ್ಕಾ ಆರ್ ಗೌಡ
ಇವರಿಗೆ ಕ್ರಮವಾಗಿ 500, 400 ಮತ್ತು 300 ರೂ. ನಗದು. ಪುಸ್ತಕಗಳು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
