Kuvempu University ಶ್ರೀ ಭಗವದ್ಗೀತಾ ಅಭಿಯಾನ 2025ರ ಅಂಗವಾಗಿ ನ.18ರಂದು ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ “ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ಕುರಿತು ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಕುವೆಂಪು ವಿಶ್ವವಿದ್ಯಾಲಯ ಮತ್ತು ಶಿವಮೊಗ್ಗದ ಸ್ವರ್ಣರಶ್ಮಿ ಟ್ರಸ್ಟ್ ಮತ್ತು ಶ್ರೀ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ವಿಚಾರ ಸಂಕಿರಣವನ್ನು ಅಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಉಚ್ಛನ್ಯಾಯಾಲಯದ ನಿವೃತ್ತ ನ್ಯಾ.ಮೂ. ಎಚ್.ಬಿಲ್ಲಪ್ಪ , ಕುವೆಂಪು ವಿವಿ ಕುಲಸಚಿವ ಎ.ಎಲ್.ಮಂಜುನಾಥ ಉದ್ಘಾಟಿಸಲಿದ್ದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮಜ್ಜಗದ್ಗುರು ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಅಭಿಯಾನದ ಜಿಲ್ಲಾ ಸಮಿತಿಯ ಅಧ್ಯಕ್ಷ ಹಾಗೂ ಶಾಸಕರಾದ ಡಿ.ಎಸ್.ಅರುಣ್, ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಅಸದೋಕ್ ಜಿ.ಭಟ್ ಉಪಸ್ಥಿತರಿರುವರು.
ಪ್ರಥಮ ಗೋಷ್ಠಿಯಲ್ಲಿ ಖ್ಯಾತ ಮನರೋಗ ತಜ್ಞ ಡಾ.ಕೆ.ಆರ್.ಶ್ರೀಧರ್ ಮನ:ಶಾಸ್ತ್ರ ದೃಷ್ಟಿಯಿಂದ ಭಗವದ್ಗೀತೆಯನ್ನು ಅಪರಾಧ ನಿಯಂತ್ರಣಕ್ಕೆ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬ ವಿಷಯದ ಕುರಿತಾಗಿಯೂ ಎರಡನೇ ಗೋಷ್ಟಿಯಲ್ಲಿ ಅಪರಾಧಶಾಸ್ತ್ರ ದೃಷ್ಟಿಯಿಂದ ಭಗವದ್ಗೀತೆಯನ್ನು ಅಪರಾಧ ನಿಯಂತ್ರಣಕ್ಕೆ ಹೇಗೆ ಪ್ರಯೋಗಿಸಬಹುದು ಎಂಬ ವಿಷಯದ ಬಗ್ಗೆ ಬೆಂಗಳೂರಿನ ಪೋಲಿಸ್ ವರಿಷ್ಠಾಧಿಕಾರಿ ಡಾ.ರಾ.ಕೃಷ್ಣ ಮುದ್ದಪಾಲ್ ಉಪನ್ಯಾಸ ನೀಡುವರು. ಭೋಜನಾ ನಂತರ ನಡೆಯುವ ಮೂರನೇ ಗೋಷ್ಠಿಯಲ್ಲಿ ಬೆಂಗಳೂರಿನ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ವಿಕ್ರಂ ಫಡ್ಕೆ ಅವರು ಕಾನೂನಿನ ದೃಷ್ಠಿಯಿಂದ ಭಗವದ್ಗೀತೆಯನ್ನು ಅಪರಾಧ ನಿಯಂತ್ರಣಕ್ಕೆ ಹೇಗೆ ಪ್ರಯೋಗಿಸಬಹುದು ಎಂಬ ವಿಷಯದ ಕುರಿತಾಗಿಯೂ ನಾಲ್ಕನೇ ಗೋಷ್ಠಿಯಲ್ಲಿ ನಿವೃತ್ತ ಕುಲಪತಿ ಡಾ.ರಾಮಚಂದ್ರ ಭಟ್ ಕೋಟೆಮನೆ ಅವರು ಭಗವದ್ಗೀತೆಯ ಪ್ರಚೀನ ಪದ್ಧತಿಗಳಾದ ಯೋಗಗಳ ಮೂಲಕ ಭಗವದ್ಗೀತೆಯನ್ನು ಅಪರಾಧ ನಿಯಂತ್ರಣಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬ ವಿಷಯದ ಬಗ್ಗೆ ಮಾತನಾಡುವರು. ಬಳಿಕ ಸಂವಾದ ಕಾರ್ಯಕ್ರಮವಿರುತ್ತದೆ.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮಜ್ಜಗದ್ಗುರು ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಶ್ರೀ ಬೆಕ್ಕಿನ ಕಲ್ಮಠದ ಜಗದ್ಗುರು ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು.
Kuvempu University ಕುವೆಂಪು ವಿವಿ ಕುಲಸಚಿವ ಎ.ಎಲ್.ಮಂಜುನಾಥ್ ಅಧ್ಯಕ್ಷತೆ ವಹಿಸುವರು. ಮೌಲ್ಯಮಾನ ಪುಲಸಚಿವ ಪ್ರೊ.ಆರ್. ತಿಮ್ಮರಾಯಪ್ಪ, ಶಾಸಕ ಹಾಗೂ ಅಭಿಯಾನ ಸಮಿತಿಯ ಅಧ್ಯಕ್ಷ ಡಿ.ಎಸ್.ಅರುಣ್, ಕಾರ್ಯಧ್ಯಕ್ಷ ಅಶೋಕ್ ಜಿ.ಭಟ್ಟ ಉಪಸ್ಥಿತರಿರುವರು ಎಂದು ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿಯ ಪ್ರಕಟಣೆ ತಿಳಿಸಿದೆ.
Kuvempu University ಕುವೆಂಪು ವಿವಿಯಲ್ಲಿ” ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ವಿಚಾರ ಸಂಕಿರಣ
Date:
