Friday, December 5, 2025
Friday, December 5, 2025

Sail- VISL ಜಿಲ್ಲೆಯ ವಿಶೇಷ ಚೇತನ ಮಕ್ಕಳನ್ನ ಸಮಾಜದ ಮುಖ್ಯವಾಹಿನಿಗೆ ತರುವುದು ಸೈಲ್- ವಿಐಎಸ್ಎಲ್ ಧ್ಯೇಯ- ಅನುಪ್ ಕುಮಾರ್

Date:

Sail- VISL ಚಟುವಟಿಕೆಗಳ ಅಡಿಯಲ್ಲಿ ಭದ್ರಾವತಿಯ ಸರ್ಕಾರಿ ಶಾಲೆಗಳು ಮತ್ತು ತರಂಗ ಕಿವುಡ ಮತ್ತು ಮೂಕ ಶಾಲೆಯ 23 ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿಶೇಷ ಸಹಾಯ ಸಾಧನಗಳನ್ನು 2025ರ ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ಸೈಲ್- ವಿಐಎಸ್ಎಲ್ ಭದ್ರಾ ಅತಿಥಿಗೃಹದಲ್ಲಿ ಹಸ್ತಾಂತರಿಸಲಾಯಿತು.

ಶ್ರೀ ಅನುಪ್ ಕುಮಾರ್, ಕಾರ್ಯಪಾಲಕ ನಿರ್ದೇಶಕ, ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕ (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ), ಶ್ರೀಮತಿ ಶೋಭಾ ಶಿವಶಂಕರನ್, ಮಹಾಪ್ರಬಂಧಕಿ (ಹಣಕಾಸು ಮತ್ತು ಲೆಕ್ಖ), ಡಾ. ಸುಜೀತ್ ಕುಮಾರ್, ಹೆಚ್ಚುವರಿ ಮುಖ್ಯ ವೈಧ್ಯಾಧಿಕಾರಿಗಳು, ಡಾ. ಎಸ್.ಎನ್. ಸುರೇಶ್, ಉಪಾಧ್ಯಕ್ಷರು ಸೈಲ್ಅಧಿಕಾರಿಗಳ ಸಂಘ, ಶ್ರೀ ಎಮ್.ಎಲ್. ಯೋಗೀಶ, ಕಿರಿಯ ಪ್ರಬಂಧಕ ಶ್ರೀ ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಭದ್ರಾವತಿ, ಶ್ರೀ ತೀರ್ಥಪ್ಪ, ಕ್ಷೇತ್ರ ಸಂಪನ್ಮೂಲ ಸಂಯೋಜಕ ಮತ್ತು ಶ್ರೀ ದಯಾನಂದ ಶಿಕ್ಷಣ ಸಂಯೋಜಕ, ಭದ್ರಾವತಿ ಸೇರಿದಂತೆ ಗಣ್ಯರು ವಿಶೇಷಚೇತನ ಮಕ್ಕಳಿಗೆ ಶ್ರವಣ ಸಾಧನಗಳು, ವೀಲ್‌ಚೇರ್‌ಗಳು, ಒಖ ಕಿಟ್‌ಗಳು, ಅP ಚೇರ್‌ಗಳು, ರೋಲೇಟರ್‌ಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅನುಪ್ ಕುಮಾರ್, ‘ಜಿಲ್ಲೆಯ ವಿಶೇಷಚೇತನ ಮಕ್ಕಳ ಮುಖದಲ್ಲಿ ನಗು ಮೂಡಿಸಲು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸೈಲ್- ವಿಐಎಸ್ಎಲ್ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಮತ್ತು ಭವಿಷ್ಯದಲ್ಲಿ ಹೆಚ್ಚು ಸಾಮಾಜಿಕವಾಗಿ ಪ್ರಯೋಜನಕಾರಿಯಾದ ಅSಖ ಚಟುವಟಿಕೆಗಳನ್ನು ಯೋಜಿಸಲಾಗುವುದು ಎಂದು ಹೇಳಿದರು.

ಭದ್ರಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ನಾಗೇಂದ್ರಪ್ಪನವರು ‘ವಿಶೇಷಚೇತನ ಮಕ್ಕಳು ಉತ್ತಮ ಜೀವನ ನಡೆಸಲು ಸಹಾಯಮಾಡುವ ಉಪಕ್ರಮಗಳನ್ನು ಸೈಲ್- ವಿಐಎಸ್ಎಲ್ ಕಳೆದ ಕೆಲವು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರವಾಗಿ ಕೊಡುತ್ತಿದ್ದು ಅದಕ್ಕಾಗಿ ಅವರು ಸೈಲ್- ವಿಐಎಸ್ಎಲ್ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದರು. ಮುಂಬರುವ ದಿನಗಳಲ್ಲಿಯೂ ಸಹ ಇಂತಹ ಹೆಚ್ಚಿನ ಸಹಾಯವನ್ನು ವಿಸ್ತರಿಸಲಾಗುವುದೆಂದು ಆಶಿಸಿದರು.

ಶ್ರೀ ಎಮ್.ಎಲ್. ಯೋಗೀಶ ಸ್ವಾಗತಿಸಿದರು ಮತ್ತು ಕಳೆದ ಮೂರು ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯ 400 ಕ್ಕೂ ಹೆಚ್ಚು ವಿಶೇಷಚೇತನ ವಿದ್ಯಾರ್ಥಿಗಳುಸೈಲ್- ವಿಐಎಸ್ಎಲ್ ಅಡಿಯಲ್ಲಿ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ವಿಶೇಷ ಸಹಾಯಕ ಸಾಧನಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.

Sail- VISL ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕ (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ವಂದನಾರ್ಪಣೆ ಮಾಡಿದರು.

ಈ ಕಾರ್ಯಕ್ರಮವನ್ನುಸೈಲ್- ವಿಐಎಸ್ಎಲ್ ನ ಅಪೆಕ್ಷ್ ಸಮಿತಿಯು ಸಂಯೋಜಿಸಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...