National Institute of Education ವಿದ್ಯಾರ್ಥಿ ಜೀವನಕ್ಕೆ ಭಗವದ್ಗೀತೆ ಯಾವ ರೀತಿ ಸಹಾಯ ಮಾಡುತ್ತದೆ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹೆಚ್ಚಾದಾಗ ಹಿಗ್ಗದೆ ಕಡಿಮೆಯಾದಾಗ ಕುಗ್ಗದೆ ಸಮ ಸ್ಥಿತಿಯಲ್ಲಿ ಹೇಗೆ ತೆಗೆದುಕೊಂಡು ಅವರು ಜೀವನ ನಡೆಸಬೇಕು, ವಿದ್ಯಾರ್ಥಿಗಳ ಓದಿನಲ್ಲಿ ಶ್ರದ್ಧೆ ಏಕೆ ಬೇಕು, ಎಲ್ಲರ ನಮ್ಮ ಮನಶಾಂತಿಗೆ ಈ ಭಗವದ್ಗೀತೆ ಹೇಗೆ ಸಹಾಯ ಮಾಡುತ್ತದೆ? ಬದುಕಿನಲ್ಲಿ ಸತ್ಯ, ಧರ್ಮ, ಕರ್ಮಗಳು ಯಾವ ರೀತಿ ಪಾತ್ರವಹಿಸುತ್ತದೆ ಹಾಗೆಯೇ ಗೀತೆಯ ಪ್ರಸ್ತುತತೆ ಏನು ಎಂಬುದರ ಕುರಿತು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ನಾಗರಾಜ್ ಹೇಳಿದ್ದಾರೆ.
ರಾಷ್ಟೀಯ ಪ್ರೌಢಶಾಲೆಯಲ್ಲಿ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಭಗವದ್ಗೀತೆ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ತಾಲೂಕು ಮಟ್ಟದ ಸ್ಪರ್ಧೆಗಳನ್ನು ಉದ್ಘಾಟನೆ ಮಾಡಿ ಎಲ್ಲರನ್ನು ಉದ್ದೇಶಿಸಿ ಶ್ರೀ ನಾಗರಾಜ್ ಮಾತನಾಡಿದರು.
ಭಗವದ್ಗೀತೆಯನ್ನು ಹೇಳಿದ ಸಂದರ್ಭ ಯಾವುದು? ಹೇಳಿದ್ದು ಯಾರು? ಯಾಕೆ ಹೇಳಿದ್ದು? ಅನ್ನೋದು ತುಂಬಾ ಮುಖ್ಯ. ಇದು ನೇರವಾಗಿ ಭಗವಂತನಿಂದ ಮನುಷ್ಯರಿಗೆ ಅರ್ಜುನನ ಮೂಲಕ ಉಪದೇಶಿಸಿದ ಜೀವನ ಕ್ರಮ. ಎರಡು ದೊಡ್ಡ ಸೈನ್ಯಗಳ ಮಧ್ಯೆ ಯುದ್ಧ ಪ್ರಾರಂಭವಾಗಬೇಕು ಅನ್ನುವ ಒಂದು ಸಂದರ್ಭದಲ್ಲಿ ಅರ್ಜುನನಿಗೆ ಬರುವ ಅನೇಕ ಸಂದೇಹಗಳು ಅದು ಮನುಷ್ಯರಿಗೂ ಸಹ ಆಪತ್ಕಾಲದಲ್ಲೇ ಸಂದೇಹ ಬರುವ ಹಾಗೆ ಬಂದದ್ದು. ವಿದ್ಯಾರ್ಥಿಗಳಿಗೂ ಸಹ ಪರೀಕ್ಷೆ ಬರುವ ಸಂದರ್ಭದಲ್ಲಿ ಸಂದೇಹ ಹೆಚ್ಚು ಎಂಬ ಹಾಗೆ ಆ ಹೊತ್ತಿನಲ್ಲಿ ಬಂದ ಅನುಮಾನಗಳಾದ ಯುದ್ಧ ಮಾಡಬೇಕಾ? ಬಿಡಬೇಕಾ? ಯಾಕೆ ಮಾಡಬೇಕು? ಈ ಸೈನ್ಯದ ಎದುರಾಳಿಗಳೆಲ್ಲರೂ ನನ್ನ ಗುರು ಹಿರಿಯರು, ಸಂಬಂಧಿಗಳು, ಸ್ನೇಹಿತರು, ಸಹವರ್ತಿಗಳು ಇವರೆಲ್ಲರ ಜೊತೆಗೆ ಯುದ್ಧ ಮಾಡಿ ಅವರನ್ನು ಸೋಲಿಸಿ, ಸಾಯಿಸಿ ನಾನು ಸಾಧಿಸುವುದೇನಿದೆ. ಇದು ಸರಿಯೇ ತಪ್ಪೇ ಎನ್ನುವುದಕ್ಕೆ ಕೃಷ್ಣ ಮಾಡುವಂತಹ ಉಪದೇಶವೇ ಈ ಭಗವದ್ಗೀತೆ. 18 ಅಧ್ಯಾಯಗಳು, ಪ್ರತಿಯೊಂದು ಅಧ್ಯಾಯಗಳಲ್ಲೂ ಒಂದೊಂದು ವಿಷಯಗಳು. National Institute of Education ಇಲ್ಲಿ ಕೃಷ್ಣ ದೇವರು ಎಂದುಕೊಂಡರೆ ಈಗಿನ ಕಾಲದ ಪರಿಸ್ಥಿತಿಗೆ ನಾವು ಅನುಸಂಧಾನ ಮಾಡಿ ಹೇಳುವುದಾದರೆ ಆತ ಬಹುದೊಡ್ಡ ಮನಶಾಸ್ತ್ರಜ್ಞ. ಆತ ಹೇಳದಿರುವ ನೀತಿ ಇಲ್ಲ ಅವನು ಉತ್ತರ ಕೊಡದಿರುವಂತಹ ಸಮಸ್ಯೆಗಳೇ ಇಲ್ಲ, ಎಲ್ಲದಕ್ಕೂ ಎಲ್ಲರಿಗೂ ಸಮಾಧಾನವಾಗುವ ಹಾಗೆ ಅರ್ಥವಾಗುವ ಹಾಗೆ ಅವರ ಜೀವನದಲ್ಲಿ ಅವೆಲ್ಲವನ್ನ ಅನುಸರಿಸಿಕೊಳ್ಳುವಂತೆ ಹೇಳಿದಂತಹ ಉಪದೇಶ ನೀಡಿದ ಬಹುದೊಡ್ಡ ಆದರ್ಶ ಪುರುಷ ಕೃಷ್ಣ. ನಮಗೆ ಕೃಷ್ಣ ಹತ್ತಿರವಾಗಲು ಕಾರಣವೇನೆಂದರೆ ಮನುಷ್ಯನ ರೂಪಕ್ಕೆ ಆತನ ರೂಪ ಬಹಳ ಸಮೀಪ. ಅರ್ಜುನನನ್ನು ಸಾಂಕೇತಿಕವಾಗಿ ಇಟ್ಟುಕೊಂಡು ನಮ್ಮ ಜೀವನ ಕ್ರಮ ಹೇಗಿರಬೇಕು ನಾವೇನು ಮಾಡಬೇಕು ಏನು ಮಾಡಬಾರದು ಯಾವಾಗ ಮಾಡಬೇಕು ಯಾಕೆ ಮಾಡಬೇಕು ಎಂಬುದನ್ನು ಬಹಳ ಸ್ಪಷ್ಟವಾಗಿ ಸರಳವಾಗಿ ವ್ಯಾಸ ಮಹರ್ಷಿಗಳ ಕೈಯಿಂದ ನಮಗೆ ಇದನ್ನು ಭಗವಂತ ಕೊಡಿಸಿದ್ದಾನೆ. ನಮ್ಮ ದೇಶಕ್ಕೊಂದು ಸಂವಿಧಾನ ಇರುವ ಹಾಗೆ ಇಡೀ ಜಗತ್ತಿಗೆಲ್ಲ ಒಪ್ಪುವಂತಹ ಎಲ್ಲ ವರ್ಗವು ಒಪ್ಪುವಂತಹ, ಸರ್ವರಿಗೂ ಸಮಾನವಾಗಿ ಅನ್ವಯವಾಗುವ ಸಂವಿಧಾನದ ರೀತಿಯಲ್ಲಿ ಇರುವುದು ಈ ಭಗವದ್ಗೀತೆ. ಅದರಂತೆ ಎಲ್ಲರೂ ಸಹ ಇದನ್ನು ಒಪ್ಪಿಕೊಂಡಿದ್ದಾರೆ ಅಭ್ಯಾಸ ಮಾಡುತ್ತಿದ್ದಾರೆ. ಅನುಷ್ಠಾನವನ್ನು ಕೂಡ ಮಾಡುತ್ತಿದ್ದಾರೆ ಹಾಗಾಗಿ ನಾವುಗಳೆಲ್ಲರೂ ಸಹ ಇದನ್ನು ಕಲಿಯಬೇಕು. ಅಭ್ಯಾಸ ಮಾಡಬೇಕು. ಈ ಸಂಸ್ಕೃತಿಯನ್ನು ಮುಂದುವರೆಸುವ ನಿಟ್ಟಿನಲ್ಲಿ ಗುರುಗಳ ಕಾರ್ಯ ಶ್ಲಾಘನೀಯ. ನಾವೆಲ್ಲರೂ ಅದರ ಮಹತ್ವ ಅರಿತು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲನಾ ಸಮಿತಿಯ ಪ್ರಮುಖರಾದ ಶ್ರೀ. ಪಿ. ಪಿ ಹೆಗ್ಡೆಯವರು ವಹಿಸಿದ್ದರು. ವೇದಿಕೆಯಲ್ಲಿ ಅಭಿಯಾನದ ಪ್ರಧಾನ ಸಂಚಾಲಕರಾದ ಶ್ರೀ ಟಿ. ಜೆ. ಲಕ್ಷ್ಮಿನಾರಾಯಣ, ಶಾಲೆಯ ಮುಖ್ಯಸ್ಥರಾದ ಶ್ರೀ ಚಿಕ್ಕಪೆಂಚಾಲಯ್ಯ ಉಪಸ್ಥಿತರಿದ್ದರು. ಡಾ. ಮೈತ್ರೇಯಿ ಹೆಚ್. ಎಲ್. ಪ್ರಮೋದ್ ಭಟ್ ಡಾ. ಗಣೇಶ್ ಭಟ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ನಗರದ ಸುಮಾರು 35ಕ್ಕೂ ಹೆಚ್ಚು ಶಾಲೆಗಳಿಂದ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿಭಾಗದ ಸುಮಾರು 140 ವಿದ್ಯಾರ್ಥಿಗಳು ಗೀತೆಯ ಕಂಠಪಾಠ, ಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
