ICAR Agricultural Science Centre ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ,ಶಿವಮೊಗ್ಗ ಇವರ ಆಶ್ರಯದಲ್ಲಿ ನವೆಂಬರ್ 20 ರಿಂದ 26 ವರೆಗೆ ತೋಟಗಾರಿಕಾ ಬೆಳೆಗಳ ಸಂಸ್ಕರಣೆ,ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಅವಕಾಶಗಳು ಕುರಿತ ಕೌಶಲ್ಯಾಭಿವೃದ್ಧಿ ತರಬೇತಿ ಏರ್ಪಡಿಸಲಾಗಿದೆ.
ಈ ತರಬೇತಿಯಲ್ಲಿ ಕೋಕೋ ಸಂಸ್ಕರಣೆ, ಚಾಕೊಲೇಟ್ಸ್ ತಯಾರಿಕೆ, ಗೇರು ಸಂಸ್ಕರಣೆ, ಮೈಕ್ರೋ ಗ್ರೀನ್ಸ್ ಉತ್ಪಾದನೆ, ಹಣ್ಣು ಮತ್ತು ತರಕಾರಿಗಳ ಮೌಲ್ಯವರ್ಧನೆ ಮತ್ತು ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತ ಪದ್ಧತಿ ಪ್ರತ್ಯಕ್ಷಿಕೆಗಳಿರುತ್ತವೆ.
ಆಸಕ್ತರು ನೊಂದಾಯಿಸಿ ತರಬೇತಿಯ ಪ್ರಯೋಜನವನ್ನ ಪಡೆಯಬಹುದು.
ಕರಪತ್ರದಲ್ಲಿ ನಮೂದಿಸಿರುವ ಮೊ.ಸಂಖ್ಯೆ ಮೂಲಕ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.
