Saalumarada Thimmakka ಮರಗಳೇ ನನ್ನ ಮಕ್ಕಳು ಎಂದು ಪ್ರೀತಿಯಿಂದ ನೀರೆರೆದು ಪೋಷಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಮಿಗಳವರು ಸಂತಾಪ ಸೂಚಿಸಿದ್ದಾರೆ.
ಪರಿಸರದ ಬಗ್ಗೆ ಅತೀವ ಕಾಳಜಿ ಕಳಕಳಿಯುಳ್ಳ ತಿಮ್ಮಕ್ಕನವರ ಸೇವೆ ಅನುಕರಣೀಯವಾದುದು. ತಾನು ಬೆಳೆಸಿದ ಮರಗಿಡಗಳನ್ನು ಕಂಡು ಸಂತಸಪಟ್ಟರೀತಿ ಅವರ ಶ್ರಮಕ್ಕೊಂದು ಹಿರಿಮೆ ಗರಿಮೆಯನ್ನು ತಂದುಕೊಟ್ಟಿತು. ಈ ಮೂಲಕ ಈ ನಾಡಿಗೆ ಅವರು ಸಲ್ಲಿಸಿದ ಮಹದುಪಕಾರದ ಸೇವೆಗೆ ಶಾಶ್ವತವಾಗಿ ಅವರನ್ನು ನೆನೆಯುವಂತೆ ಮಾಡಿದೆ.
Saalumarada Thimmakka ಶ್ರೀಮಠದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಶ್ರೀಮಠದ ಕಂಚಿನ ದೀಪ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಮಠ ಮಹಿಳಾ ಸಾಧಕರಿಗೆ ನೀಡುವ ಕೆಳದಿರಾಣಿ ಚನ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದರು. ಸಂತಸದಿAದ ಪ್ರಶಸ್ತಿ ಸ್ವೀಕರಿಸಿ ತಮ್ಮ ಬದುಕಿನ ಯಶೋಗಾಥೆಯನ್ನು ಸಭಿಕರಿಗೆ ತಿಳಿಸಿದ್ದರು. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಸಾಲುಮರದ ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬಕ್ಕೆ ಅಗಲಿಕೆಯ ದು:ಖ ಭರಿಸುವ ಶಕ್ತಿ ದೊರೆಯಲೆಂದು ಬಸವಾದಿ ಶರಣರಲ್ಲಿ ಪ್ರಾರ್ಥಿಸಿದ್ದಾರೆ.
Saalumarada Thimmakka ಸಾಲುಮರದ ತಿಮ್ಮಕ್ಕನವರ ಪರಿಸರ ಸೇವೆ ಅನುಕರಣೀಯ-ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರಶ್ರೀ
Date:
