Friday, December 5, 2025
Friday, December 5, 2025

Rotary East English Medium School ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನ ಕಲಿಸುವುದು ಪೋಷಕರ ಕರ್ತವ್ಯ- ರೋ.ಕೆ.ಬಿ.ರವಿಶಂಕರ್

Date:

Rotary East English Medium School ರೋಟರಿ ಪೂರ್ವ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಪಂಡಿತ್ ಜವಹರ್ ಲಾಲ್ ನೆಹರು ಇವರ ಜನ್ಮ ಜಯಂತಿಯ ಪ್ರಯುಕ್ತ ಮಕ್ಕಳ ದಿನಾಚರಣೆ ಮತ್ತು ಕ್ರಿಡಾ ದಿನಾಚರಣೆಯನ್ನು ಮಕ್ಕಳ ಪೋಷಕರೊಂದಿಗೆ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು. ಈ ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ್ದ ಮ್ಯಾನೇಜಿಂಗ್ ಟ್ರಸ್ಟಿ ರೊ. ಕೆ ಬಿ ರವಿಶಂಕರ್ ಇವರು ಮಾತನಾಡುತ್ತಾ ಇಂದಿನ ಮಕ್ಕಳೇ ಮುಂದಿನ ಸತ್‌ಪ್ರಜೆಗಳೆಂದು ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವುದು ಪೊಷಕರ ಆದ್ಯ ಕರ್ತವ್ಯವೆಂದು ತಿಳಿಸುತ್ತಾ ಮಕ್ಕಳೆಲ್ಲರೂ ಈ ರಾಷ್ಟದ ಅಮೂಲ್ಯ ಆಸ್ತಿಗಳೆಂದು ಈ ಕಾರಣದಿಂದಲೇ ರೋಟರಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಗುಣಮಟ್ಟ ಮತ್ತು ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆಂದು ತಿಳಿಸಿದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಟ್ರಸ್ಟಿನ ಕಾರ್ಯದರ್ಶಿ ರೊ. ಎಸ್ ಸಿ ರಾಮಚಂದ್ರ ರವರು ಇಂದಿನ ಬಹುತೇಕ ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲವೆಂದು ಮಕ್ಕಳೆಲ್ಲರಿಗೂ ಸಂವಿದಾನದಡಿಯಲ್ಲಿ ರಕ್ಷಣೆ, ಬದುಕುವ, ವಿಕಸನಹೊಂದುವ ಮತ್ತು ಭಾಗವಹಿಸುವ ಹಕ್ಕುಗಳನ್ನು ನೀಡಲಾಗಿದ್ದು, ಈ ಎಲ್ಲಾ ಹಕ್ಕುಗಳ ಬಗ್ಗೆ ಮಕ್ಕಳಲ್ಲದೇ ಮಕ್ಕಳ ಪೊಷಕರಿಗೂ ಅರಿವುಮೂಡಿಸುವುದು ಬಹಳ ಮುಖ್ಯವಾಗಿರುತ್ತದೆಂದು ಈ ನಿಟ್ಟಿನಲ್ಲಿ ಎಲ್ಲಾ ಪೊಷಕರೂ ಕಾರ್ಯ ಪ್ರವೃತ್ತರಾಗಬೇಕೆಂದು ಕರೆನೀಡಿದರು.
Rotary East English Medium School ಇನ್ನೊಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಕಟಪೂರ್ವ ಮ್ಯಾನೆಜಿಂಗ್ ಟ್ರಸ್ಟಿ ರೊ. ಎಮ್ ಚಂದ್ರಶೇಖರಯ್ಯ ಇವರು ಮಾತನಾಡುತ್ತಾ ಜಗತ್ತು ಇಂದು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆಂದು ತಂತ್ರಜ್ಞಾನವಿಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲವೆಂದು ಈ ಕಾರಣಕ್ಕೆ ತಂತ್ರಜ್ಞಾನದ ಜೊತೆಗೆ ಕೃತಕ ಬುದ್ಧಿಮತ್ತೆಯ ಬಗ್ಗೆ ಮಕ್ಕಳಿಗೆ ಬಾಲ್ಯದಲ್ಲಿಯೇ ಅರಿವನ್ನು ಮೂಡಿಸಬೇಕೆಂದು ಈ ನಿಟ್ಟಿನಲ್ಲಿ ಸೂಕ್ತ ತರಬೇತಿಯ ಕೊರತೆ ಇದ್ದು ಈ ಕೊರತೆಯನ್ನು ನೀಗಿಸಲು ಆಡಳಿತ ಮಂಡಳಿಯು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಸಮಾರಂಭದ ಇರ್ನ್ನೊವ ಮುಖ್ಯ ಅತಿಥಿ ರೊ. ವಿಜಯಕುಮಾರ್ ಇವರು ಮಾತನಾಡುತ್ತಾ ಮಕ್ಕಳೆಲ್ಲರೂ ಬಾಲ್ಯದಲ್ಲಿಯೇ ಶಿಕ್ಷಣದ ಜೊತೆಗೆ ಸೇವಾಮನೊಭಾವನ್ನು ಬೆಳೆಸಿಕೊಳ್ಳಬೇಕೆಂದು ಕರೆನಿಡಿದರು. ರೊಟರಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮಕ್ಕಳಿಗೆ ಸೇವಾಮನೊಭಾವನ್ನು ಬೆಳೆಸಿಕೊಳ್ಳುವಂತಹ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆಯೆಂದು, ಸಮಾರಂಭದಲ್ಲಿ ಹಾಜರಿದ್ದ ಮಕ್ಕಳ ಪೊಷಕರೆಲ್ಲರೂ ಕೊಡ ಈ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಕರೆನೀಡಿದರು, ಸಮಾರಂಭದಲ್ಲಿ ಟ್ರಸ್ಟಿನ ಉಪಾಧ್ಯಕ್ಷರಾದ ರೊ. ನಾಗವೇಣಿ ಎಸ್ ಆರ್ ಮತ್ತು ಖಜಾಂಚಿ ರೊ. ಮಂಜುನಾಥ ಎನ್ ಬಿ, ಪ್ರನ್ಸಿಪಾಲ್ ಸೂರ್ಯನಾರಾಯಣ್ ಇವರು ಉಪಸ್ಥಿತರಿದ್ದು ಸದರಿ ಸಮಾರಂಭದಲ್ಲಿ ಇನ್ನರ್ ವೀಲ್‌ನ ಅದ್ಯಕ್ಷರಾದ ಶ್ರೀಮತಿ ವೀಣಾಸುರೇಶ್ ಭಾಗವಹಿಸಿರುವುದಲ್ಲದೇ ಮಕ್ಕಳೆಲ್ಲರಿಗೂ ಸಿಹಿಯನ್ನು ವಿತರಿಸಿ ಶುಭಾಶಯವನ್ನು ಕೊರಿದರು.
ಕೊನೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಗೆದ್ದ ಮಕ್ಕಳೆಲ್ಲರಿಗೂ ಹಾಜರಿದ್ದ ಅತಿಥಿಗಳಿಂದ ಪ್ರಶಸ್ತಿ ಪತ್ರದ ಜೊತೆಗೆ ಬಹುಮಾನವನ್ನು ವಿತರಿಸಲಾಯಿತು. ಸಮಾರಂಭವನ್ನು ಶ್ರೀಮತಿ ರೂಪ ರಾವ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದ್ದು, ಶ್ರೀಮತಿ ಸುಷ್ಮಾ ಇವರು ಅತಿಥಿಗಳೆಲ್ಲರನ್ನು ಸ್ವಾಗತಿಸಿದ್ದರು, ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಕಾವ್ಯ ಇವರು ನಿರ್ವಹಿಸಿದ್ದು ಸಮಾರಂಭದಲ್ಲಿ ಆಂಗ್ಮ ಮಾದ್ಯಮ ಶಾಲೆಯ ಎಲ್ಲಾ ಶಿಕ್ಷಕ/ಶಿಕ್ಷಕಿಯರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದು, ಶ್ರೀಮತಿ ರೂಪಾ ಎಸ್ ಸಿ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...