ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಬೆಂಗಳೂರಿನ ಉದ್ಯಮಿ ಹಾಗೂ ರೋಟರಿ ಜಿಲ್ಲೆ 3192ರ ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಹೇಳಿದರು.
ರೋಟರಿ ಸಂಸ್ಥೆಗೆ 100 ಕೋಟಿ ರೂ. ದಾನ ಮಾಡಿರುವ ಹಿನ್ನೆಲೆಯಲ್ಲಿ ರೋಟರಿ ಸಮೃದ್ಧಿ ಕಾರ್ಯಾಗಾರ, ದತ್ತಿನಿಧಿ ಸಮಾವೇಶದಲ್ಲಿ ಸದಸ್ಯರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹವಾಮಾನ ವೈಪರೀತ್ಯದಿಂದ ಮಾನವನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ನಮ್ಮ ಮುಂದಿನ ಪೀಳಿಗೆ ಅನುಭವಿಸದಿರಲಿ ಎಂಬ ಸದುದ್ದೇಶದಿಂದ ಕೆರೆಗಳ ಪುನರುಜ್ಜೀವನ ಮತ್ತು ಲಕ್ಷಾಂತರ ಸಸಿಗಳನ್ನು ನೆಡುವುದರ ಮುಖಾಂತರ ಬರಡು ಭೂಮಿಯನ್ನು ಸಮೃದ್ಧ ಕಾಡನ್ನಾಗಿ ಪರಿವರ್ತಿಸಲು ರೋಟರಿ ಸಂಸ್ಥೆ ಜೊತೆಗೆ ಕೈಜೋಡಿಸಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಮುಂದಿನ ಪೀಳಿಗೆ ತಾವು ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಬಾರದು. ಆದ್ದರಿಂದ ಪ್ರತಿಯೊಬ್ಬರು. ಪರಿಸರ ಸಂರಕ್ಷಣೆಯಲ್ಲಿ ಪ್ರಾಮಾಣಿಕವಾಗಿ ಕೈಜೋಡಿಸಬೇಕು ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್ ಕುಮಾರ್, ಕಾರ್ಯದರ್ಶಿ ಡಾ. ಧನಂಜಯ ರಾಂಪುರ, ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ, ಸಮಾವೇಶದ ಅಧ್ಯಕ್ಷ ಚಂದ್ರಹಾಸ್ ಪಿ ರಾಯ್ಕರ್, ಮಾಜಿ ಜಿಲ್ಲಾ ಗವರ್ನರ್ ಸಾಂಬಶಿವ ರಾವ್ ಪತಿಬಂದ್ಲ, ಡಾ. ನಾರಾಯಣ್, ಡಾ. ವಿನಯಕುಮಾರ್, ರಾಜಾರಾಮ್ ಭಟ್ ಬಿ, ಡಿ.ಎಸ್.ರವಿ, ಬಿ.ಎನ್.ರಮೇಶ್, ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ.ಭಟ್, ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ವಲಯ 11ರ ಸಹಾಯಕ ಗವರ್ನರ್ ಲಕ್ಷ್ಮಣಗೌಡ ಬಿ, ವಲಯ 10ರ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಪ್ರಮೋಷನ್ ಚೇರ್ಮನ್ ಜಿ.ವಿಜಯಕುಮಾರ್, ಸಮಾವೇಶದ ಕಾರ್ಯದರ್ಶಿ ಡಾ. ಗುಡದಪ್ಪ ಕಸಬಿ, ಮಾಜಿ ಜಿಲ್ಲಾ ಗವರ್ನರ್ ಬಿ.ಎಂ.ರಮೇಶ್, ರೇಖಾ ಪಾಲಾಕ್ಷ, ಪದ್ಮಿನಿ ವಸಂತ ಇದ್ದರು.
