The Institute of Indian Foundrymen ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಕೇಂದ್ರ ಉಕ್ಕು ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ದಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ವತಿಯಿಂದ ಜ್ಞಾಪನ ಪತ್ರ ಸಲ್ಲಿಸಲಾಯಿತು.
ಬಿ2ಬಿ ವಹಿವಾಟುಗಳ ಅಡಿಯಲ್ಲಿ ಸರಬರಾಜು ಮಾಡಲಾದ ಎರಕಹೊಯ್ದ ಕಬ್ಬಿಣದ ಗುಣಮಟ್ಟ ನಿಯಂತ್ರಣ ಆದೇಶದಿಂದ (ಕ್ಯೂಸಿಒ) ವಿನಾಯಿತಿ ನೀಡುವ ಬಗ್ಗೆ ಜ್ಞಾಪನ ಪತ್ರವನ್ನು ಹಸ್ತಾಂತರಿಸಿ ಮನವಿ ಮಾಡಿದರು.
ಇತ್ತೀಚಿನ ಕೇಂದ್ರ ಸರ್ಕಾರದ (ಕ್ಯೂಸಿಒ) ನೀತಿಯಿಂದ ಎಂಎಸ್‌ಎಂಇ ಫೌಂಡ್ರಿ ಕೈಗಾರಿಕೆಗಳಿಗೆ ಆಗುತ್ತಿರುವ ತೊಂದರೆ, ಬಿಐಎಸ್ ಅಧಿಕಾರಿಗಳಿಂದ ಕಿರುಕುಳ, ರೆಡ್ ಟೇಪಿಸಂ, ಅಸಮರ್ಪಕ ವಿಳಂಬ, ಆರ್ಥಿಕ ಹೊರೆ, ಅಗತ್ಯ ಪರೀಕ್ಷಾ ಸೌಲಭ್ಯಗಳ ಕೊರತೆ, ವ್ಯಾಪಾರ ನಷ್ಟ ಇತ್ಯಾದಿ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಲಾಯಿತು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ವಿಷಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
The Institute of Indian Foundrymen ಐಐಎಫ್ ಮಾಜಿ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್, ಖಜಾಂಚಿ ಮುತ್ತುಕುಮಾರ್, ಐಐಎಫ್‌ನ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಪಳನಿಮುರುಗನ್, ಐಐಎಫ್‌ನ ದಕ್ಷಿಣ ಪ್ರಾಂತ್ಯ ಮಾಜಿ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಐಐಎಫ್ ಕೊಯಮತ್ತೂರು ಅಧ್ಯಾಯದ ಅಧ್ಯಕ್ಷ ವೇಲುಸಾಮಿ, ಐಐಎಫ್ ಸದಸ್ಯ ಸೆಂಥಿಲ್ ಕುಮಾರ್, ಜೆಡಿಎಸ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮತ್ತು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಉಪಸ್ಥಿತರಿದ್ದರು.
