ಶಿವಮೊಗ್ಗದ ಸಾಹಿತಿ ಆರ್.ಶೇಖರ್ ಬರೆದ ಪುಸ್ತಕ (ವ್ಯಕ್ತಿ ಚಿತ್ರಗಳು )”ಚರಿತ್ರೆಯ ಪುಟಗಳಿಂದ.”ಇದರಲ್ಲಿ 53 ಲೇಖನಗಳಿವೆ. ಈ ಪುಸ್ತಕದ ಬಿಡುಗಡೆಯು ತಾ.6.11.2025 ರಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಜರುಗಿತು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಕೆ.ಶ್ರೀಕಂಠ ಕೂಡಿಗೆ ಅವರು “ಇದೊಂದು ಉಪಯುಕ್ತ ಪುಸ್ತಕ.ವಿಶೇಷವಾಗಿ ಹೊಸ ತಲೆಮಾರಿನ ಯುವಕರಿಗೆ ಹೆಚ್ಚು ಉಪಯೋಗವಾಗುತ್ತ ದೆ.
ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು, ತಿಳುವಳಿಕೆ ಜಾಸ್ತಿಮಾಡಿಕೊಳ್ಳಲು ಈ ಪುಸ್ತಕ ಉಪಯುಕ್ತ ಎಂದರು.
ತಮಿಳು ಮಾತೃಭಾಷೆ ಯಾದರು ಶೇಖರ್ “ಅಂಗೈಯಲ್ಲಿ ಅರಿವು “ಮತ್ತು ಚರಿತ್ರೆಯ ಪುಟಗಳಿಂದ (2ನೇ ಭಾಗ) ) ಎಂಬ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.
ಅವರಿಗೆ ಅಭಿನಂದನೆಗಳು. ಎಂದಯ ಹೇಳಿದರು. ಪುಸ್ತಕ ಕುರಿತು ಲೇಖಕ ಆರ್.ಕುಮಾರ್ ವಿವರವಾಗಿ ಮಾತನಾಡಿದರು.
ನಟನo ಬಾಲ್ಯನಾಟ್ಯ ಕೇಂದ್ರದ
ಡಾ.ಎಸ್.ಕೇಶವ ಕುಮಾರ್ ಪಿಳ್ಳೆ ಉಪಸ್ಥಿತರಿದ್ದರು.
