Saturday, December 6, 2025
Saturday, December 6, 2025

Kanakadasa Jayanti ಕನಕದಾಸರ ತತ್ವಾದರ್ಶಗಳು ಇಂದು & ಎಂದೆಂದಿಗೂ ಸಮಾಜಕ್ಕೆ ಆದರ್ಶಪ್ರಾಯ- ಕೆ.ಬಿ.ರವಿಶಂಕರ್

Date:

Kanakadasa Jayanti ಕನಕದಾಸರ ಕೀರ್ತನೆಗಳು ಹಾಗೂ ಅವರ ತತ್ವ ಆದರ್ಶ ಗುಣಗಳು ಸಮಾಜದ ಒರೆಕೊರೆಗಳನ್ನು ತಿದ್ದುವುದರ ಜೊತೆಗೆ ಕನಕದಾಸರು ರಚಿಸಿದ ಸಾಹಿತ್ಯದಿಂದ ಬದುಕಿನ ಮೌಲ್ಯಗಳು ಶ್ರೀಮಂತಗೊಳ್ಳುತ್ತವೆ ಎಂದು ಮ್ಯಾನೇಜಿಂಗ್ ಟ್ರಸ್ಟಿ ರೊ. ಕೆ ಬಿ ರವಿಶಂಕರ್ ರವರು ರೋಟರಿ ಶಿವಮೊಗ್ಗ ಪೂರ್ವ ಶಾಲೆಯಲ್ಲಿ ಆಯೋಜಿಸಲಾಗಿದ್ದ 516 ನೇ ಕನಕದಾಸ ಜಯಂತಿಯನ್ನು ಉದ್ಘಾಟಿಸಿ ಮಾತನಾಡುತ್ತಾ ತಿಳಿಸಿದರು.

ಹಾಗೆಯೇ ಅವರ ಸಾಹಿತ್ಯದ ವಿವಿದ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಬೊಗಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುತ್ತವೆ. ಸಂಗೀತ ಪ್ರಪಂಚಕ್ಕೆ ತನ್ನದೆ ಆದ ಮೌಲ್ಯ ನೀಡಿದವರಲ್ಲಿ ಕನಕದಾಸರು ಪ್ರಮುಖರಾಗಿರುತ್ತಾರೆಂದು, ಅವರ ತತ್ವಾದರ್ಶಗಳು ಇಂದು ಮತ್ತು ಎಂದೆಂದಿಗೂ ಸಮಾಜಕ್ಕೆ ಆದರ್ಶಪ್ರಾಯವಾಗಿರುತ್ತದೆಂದು ತಿಳಿಸಿದರು.

ಇದೇ ಸಂದಂರ್ಭದಲ್ಲಿ ಟ್ರಸ್ಟಿನ ಕಾರ್ಯದರ್ಶಿಯಾದ ರೊ. ಎಸ್ ಸಿ ರಾಮಚಂದ್ರ ಇವರು ಮಾತನಾಡುತ್ತಾ ಕನಕದಾಸರು ಕನ್ನಡದ ಪ್ರಮುಖ ಸಂತರಷ್ಟೇಲ್ಲದೆ ಕವಿ, ಮತ್ತು ಶ್ರೇಷ್ಟ ತತ್ವ ಜ್ಙಾನಿಯಾಗಿರುತ್ತಾರೆಂದು, ಅವರ ಕೃತಿಗಳಲೊಂದಾದ ರಾಮದಾನ್ಯ ಚರಿತ್ರೆಯು ಸಮ ಸಮಾಜ ಮತ್ತು ಪರಸ್ಪರ ಅನ್ಯೊನ್ಯತೆಯಿಂದ ಬದುಕನ್ನು ಹೇಗೆ ಕಟ್ಟಿಕೊಳ್ಲಬೇಕೆಂಬುದರ ¨ಗ್ಗೆ ತುಂಬಾ ಸಂಕೇತಿಕವಾಗಿ ಸಾದರ ಪಡಿಸಿರುತ್ತದೆಂದು ಇಂದಿನ ಯುವ ಜನರು ಕನಕದಾಸರ ಈ ಪ್ರಮುಖ ಆಶಯವನ್ನು ರೂಢಿಕೊಳ್ಳಬೇಕೆಂದು ಕರೆನೀಡಿದರು.

ಇದೇ ಸಮಾರಂಭದಲ್ಲಿ ಟ್ರಸ್ಟಿನ ಜಂಟಿ ಕಾರ್ಯದರ್ಶಿಯಾದ ವಿಜಯಕುಮಾರ್ ರವರು ಮಾತನಾಡುತ್ತಾ ಕನಕದಾಸರ ಕೀರ್ತನೆಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಮಹತ್ವದ ಸಂದೇಶವನ್ನು ಸಮಾಜಕ್ಕಕೆ ನೀಡಿವೆ ಎಂದು, ಕನಕದಾಸರ ಕೀರ್ತನೆಯೊಂದನ್ನು ಹಾಡುವುದರ ಮೂಲಕ ಕನಕ ಜಯಂತಿಗೆ ಹೆಚ್ಚಿನ ಮೆರಗನ್ನು ತಂದುಕೊಟ್ಟಿರುತ್ತಾರೆ.

ಸಮಾರಂಭದಲ್ಲಿ ಶ್ರೀಮತಿ ಕಾವ್ಯ ಇವರು ಪ್ರಾಸ್ತಾವಿಕ ನುಡಿಗಳ್ಳನ್ನಾಡುತ್ತಾ ಕನಕದಾಸರ ಹುಟ್ಟು ಬದುಕು ಮತ್ತು ಸಮಾಜಕ್ಕೆ ಅವರು ನೀಡಿದ ಮೌಲ್ಯಗಳನ್ನು ಕೀರ್ತನೆಗಳ ಮೂಲಕ ಸಾಹಿತ್ಯ ಮತ್ತು ಸಂಗೀತಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.

Kanakadasa Jayanti ಶಿಕ್ಷಕಿಯಾದ ಶ್ರೀಮತಿ ರೂಪ ರಾವ್ ಇವರು ಕನಕದಾಸರ ಪ್ರಮುಖ ಕೀರ್ತನೆಯಾದ ಬಾಗಿಲನು ತೆರೆದು ಸೇವೆಯನ್ನು ಕೊಡುಹರಿಯೆ ಎಂಬ ಕೀರ್ತನೆಯನ್ನು ಸುಶ್ರಾವ್ಯವಾಗಿ ಹಾಡುವುದರ ಮೂಲಕ ಕನಕದಾಸರ ಜಯಂತಿಯ ಸೊಬಗನ್ನು ಹೆಚ್ಚಿಸಿದರು. ಇದೇ ಸಮಾರಂಭದಲ್ಲಿ ರೊಟರಿ ಆಂಗ್ಲ ಮಾದ್ಯಮ ಶಾಲೆಯ ಪ್ರಿನ್ಸಿಪಾಲ್‌ರಾದ ಸೂರ್ಯನಾರಾಯಣ್‌ರವರು ಮಾತನಾಡುತ್ತಾ ಕನಕದಾಸರ ಪ್ರಮುಖ ಸಂದೇಶವಾದ ನಾನು ಹೊದರೆ ಹೊದೇನು ಅಂದರೆ ಪ್ರತಿಯೊಬ್ಬರು ಅಹಂನ್ನು ಬಿಟ್ಟು ನಾವೆಲ್ಲರೂ ಒಂದೇ ಎಂಬ ಬಾವನೆಯನ್ನು ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಮಾರಂಭದಲ್ಲಿ ಎಲ್ಲಾ ಶಿಕ್ಷಕವೃಂದ ಹಾಜರಿದ್ದು ನಿರೂಪಣೆಯನ್ನು ಶ್ರೀಮತಿ ವಿದ್ಯಾ ರವರು ನಿರ್ವಹಿಸಿದ್ದು ಶ್ರೀಮತಿ ರೇಖ ಇವರ ವಂದಾನರ್ಪಣೆಯೊಂದಿಗೆ ಕನಕ ಜಯಂತಿಯ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...