Saturday, December 6, 2025
Saturday, December 6, 2025

Good Luck Care Center ಮಕ್ಕಳಲ್ಲಿ ಸಮಾಜಮುಖಿ ಸೇವಾ ಮನೋಭಾವವನ್ನ ಬಾಲ್ಯದಿಂದಲೇ ಬೆಳೆಸಿ- ಯು.ರವೀಂದ್ರನಾಥ ಐತಾಳ್

Date:

Good Luck Care Center ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಯಲ್ಲಿ ಸಮಾಜಮುಖಿ ಸೇವಾ ಮನೋಭಾವವನ್ನು ಬಾಲ್ಯದಿಂದಲೇ ಬೆಳೆಸಬೇಕು ಎಂದು ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷ, ರೋಟರಿ ಮಾಜಿ ಸಹಾಯಕ ಗವರ್ನರ್ ಯು.ರವೀಂದ್ರನಾಥ್ ಐತಾಳ್ ಹೇಳಿದರು.
ಗುಡ್ ಲಕ್ ಆರೈಕೆ ಕೇಂದ್ರದಲ್ಲಿ ಜ್ಞಾನದೀಪ ಶಾಲೆಯ ಮಕ್ಕಳಿಂದ ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛತಾ ಕಾರ್ಯಕ್ರಮ ಮತ್ತು ಗುಡ್ ಲಕ್ ಆರೈಕೆ ಕೇಂದ್ರದ ಆಶ್ರಮವಾಸಿಗಳ ಜೊತೆಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪರಿಪೂರ್ಣತೆಯನ್ನು ಹೊಂದಬೇಕಾದರೆ ಇಂತಹ ಹಲವಾರು ಆಶ್ರಮಗಳಿಗೆ ಭೇಟಿ ನೀಡಿ ಅವರ ಬದುಕು ಸಾಧನೆ ಮತ್ತು ಅವರ ಸಂಕಷ್ಟದಲ್ಲಿ ಪಾಲ್ಗೊಳ್ಳುವುದರಿಂದ ನಮಗೆ ಪುಣ್ಯ ಲಭಿಸುತ್ತದೆ ಇದರಿಂದ ಹಲವಾರು ವಿದ್ಯಾರ್ಥಿಗಳ ಮನೋಸ್ಥಿತಿ ಬದಲಾವಣೆ ಆಗುತ್ತದೆ. ಸ್ವಚ್ಛತೆ ನಮ್ಮ ದಿನನಿತ್ಯದ ಅವಿಭಾಜ್ಯ ಅಂಗವಾಗಬೇಕು. ಮಕ್ಕಳು ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಜ್ಞಾನದೀಪ ಶಾಲೆಯಿಂದ ಗುಡ್ ಲಕ್ ಆರೈಕೆ ಕೇಂದ್ರಕ್ಕೆ 10 ಫ್ಯಾನ್ ಹಾಗೂ ಧ್ವನಿವರ್ಧಕ ಮತ್ತು ಹಲವಾರು ಅಗತ್ಯ ಸಾಮಗ್ರಿಗಳನ್ನು ನೀಡಿರುತ್ತಾರೆ ಇವರ ಸೇವೆ ಅನನ್ಯ ಎಂದು ಸ್ಮರಿಸಿದರು.
Good Luck Care Center ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಮಕ್ಕಳಿಗೆ ಸಮಾಜದ ಸ್ಥಿತಿಗತಿಗಳು ಹಾಗೂ ವೃದ್ಧರು ಮತ್ತು ಅಶಕ್ತರ ಅರಿವು ಅವರ ಕಷ್ಟಗಳ ಪರಿಚಯವಾಗಬೇಕು. ಈ ರೀತಿಯ ಕಾರ್ಯಕ್ರಮಗಳು ಅವರ ಕಣ್ಣನ್ನು ತೆರೆಸುತ್ತವೆ. ಜ್ಞಾನದೀಪ ಶಾಲೆ ವಿದ್ಯೆಯ ಜೊತೆಗೆ ಮನುಕುಲದ ಸೇವೆಗಳಲ್ಲಿ ಪಾಲ್ಗೊಳ್ಳುವುದರಿಂದ ಸಂಸ್ಥೆಯ ಹಿರಿಮೆ ಹೆಚ್ಚುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಆಶ್ರಮ ವಾಸಿಗಳಿಗೆ ಹಣ್ಣು ಸಿಹಿ ತಿಂಡಿ ನೀಡಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆಶ್ರಮದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು
ಆರೈಕೆ ಕೇಂದ್ರದ ಉಪಾಧ್ಯಕ್ಷ ಶಿವಪ್ಪಗೌಡ ಮಾತನಾಡಿ, ನಮ್ಮ ಗುಡ್ ಲಕ್ ಆರೈಕೆ ಕೇಂದ್ರ ದಾನಿಗಳ ನೆರವಿನಿಂದ ನಿತ್ಯ ಅನ್ನಪೂರ್ಣೇಶ್ವರಿ ಪ್ರಸಾದ ಯೋಜನೆ ಯಾವುದೇ ಅಡೆ ತಡೆ ಇಲ್ಲದೆ ನಡೆಯುತ್ತಿದೆ. ಸಾರ್ವಜನಿಕರು ಜನ್ಮದಿನ, ವಿವಾಹ ವಾರ್ಷಿಕೋತ್ಸವ ಹಾಗೂ ಶುಭ ಸಮಾರಂಭಗಳನ್ನು ಆಚರಿಸಬಹುದು ಎಂದು ತಿಳಿಸಿದರು. ಸರ್ಜಾ ಜಗದೀಶ್. ನಿರ್ದೇಶಕರಾದ ಅನುಪಮ ಹೆಗಡೆ, ಕಾರ್ಯದರ್ಶಿ ಪಂಚಾಕ್ಷರಯ್ಯ ಹಿರೇಮಠ್, ಮೀನಾಕ್ಷಿ ಎಲ್.ಜಿ., ನಯನಾ ಯು.ಡಿ., ನಾಗರಾಜ್ ನಾಡಿಗ್, ಶೃತಿ ಎಚ್.ಎಂ., ರುಕ್ಸನಾ ಬೇಗಂ, ಜೆನ್ಸಿ ಜೆಕೋಬ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...