Sunday, December 7, 2025
Sunday, December 7, 2025

Visvesvaraya Iron and Steel Plant ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಶ್ರೀ ಅನೂಪ್ ಕುಮಾರ್‌ರವರು ಅಧಿಕಾರ ಸ್ವೀಕಾರ

Date:

Visvesvaraya Iron and Steel Plant 22-06-2022ರಿಂದ ಕಾರ್ಯಪಾಲಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಬಿ.ಎಲ್. ಚಂದ್ವಾನಿಯವರಿಂದ ನವೆಂಬರ್ 5, 2025ರಂದು, ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಸ್ಥಾವರದ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಶ್ರೀ ಅನೂಪ್ ಕುಮಾರ್‌ರವರು ಅಧಿಕಾರ ವಹಿಸಿಕೊಂಡರು.

13ನೇ ಡಿಸೆಂಬರ್, ೧1966 ರಂದು ಜನಿಸಿದ ಶ್ರೀ ಅನೂಪ್ ಕುಮಾರ್, ಬಿಎಸ್ಸಿ ಎಂಜಿನಿಯರಿಂಗ್ (ಲೋಹಶಾಸ್ತ್ರ) ಪದವೀಧರಾಗಿದ್ದು, ಇಂದೋರ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪ್ರಮಾಣಪತ್ರ ಪಡೆದಿದ್ದಾರೆ.

ಪಶ್ಚಿಮ ಬಂಗಾಳದ ಬರ್ನ್ಪುರದಲ್ಲಿರುವ ಸ್ಟೀಲ್ ಪ್ಲಾಂಟ್ ನಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಸೇರಿದರು. ಅವರು 2017ರಲ್ಲಿ ಜನರಲ್ ಮ್ಯಾನೇಜರ್ ಮತ್ತು 2022ರಲ್ಲಿ ಕಾರ್ಯಪಾಲಕ ನಿರ್ದೇಶಕ (ಕೊಲಿಯರೀಸ್) ಹುದ್ದೆಗೆ ಏರಿದರು. ಅವರು ಬ್ಲಾಸ್ಟ್ಫರ್ನೇಸ್ ನಲ್ಲಿ 17 ವರ್ಷಗಳ ಪರಿಣತಿಯನ್ನು ಹೊಂದಿದ್ದಾರೆ. ಕಳೆದ 34 ವರ್ಷಗಳಲ್ಲಿ ಅವರು ಬರ್ನ್ಪುರ, ಬೊಕಾರೋ, ಕೊಲಿಯರೀಸ್ ವಿಭಾಗ ಮತ್ತು ಸೈಲ್ ಸುರಕ್ಷತಾ ಸಂಸ್ಥೆಯೊಂದಿಗೆ ಕೆಲಸ ಮಾಡಿದ್ದಾರೆ.

Visvesvaraya Iron and Steel Plant ಮೂಲಭೂತವಾಗಿ ಆಶಾವಾದಿಯಾಗಿರುವ ಅವರು ಪ್ರಾಯೋಗಿಕ ಮತ್ತು ಸಕಾರಾತ್ಮಕ ಮನೋಭಾವದವರು. ಘಟಕವು ಸವಾಲನ್ನು ಎದುರಿಸುತ್ತಿರುವ ಸಮಯದಲ್ಲಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ತೀವ್ರ ಆಸಕ್ತಿ ಹೊಂದಿರುವ ಅವರು, ಸಾಮರ್ಥ್ಯಗಳನ್ನು ಅಂದರೆ ವಿಶಾಲವಾದ ಉತ್ಪನ್ನ ಮಿಶ್ರಣ, ಉತ್ಪನ್ನಗಳ ಗುಣಮಟ್ಟ ಮತ್ತು ಅದರ ಹೆಚ್ಚು ಪ್ರತಿಭಾನ್ವಿತ ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಲು ಬಯಸುತ್ತಾರೆ, ಸುಧಾರಣೆಯ ಬಗ್ಗೆ ಅವರು ವಿಶ್ವಾಸವನ್ನು ಹೊಂದಿದ್ದಾರೆ ಮತ್ತು ಸವಾಲುಗಳು ಅವಕಾಶಳನ್ನು ಒದಗಿಸುತ್ತದೆ ಎಂದು ನಂಬಿದ್ದಾರೆ ಮತ್ತು ವಿಐಎಸ್ ಎಲ್ ಸಾಮೂಹಿಕವಾಗಿ ಒಟ್ಟಾಗಿ ಘಟಕವನ್ನು ಪುನರುಜ್ಜೀವನಗೊಳಿಸಲು ಉಪಕ್ರಮಗಳೊಂದಿಗೆ ಹೊರಬರಲು ಕರೆ ನೀಡಿದ್ದಾರೆ. ಸ್ಥಾಪಕ ವಾಸ್ತುಶಿಲ್ಪಿ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ಅವರು, ಸಂಸ್ಥೆಯು ತನ್ನ ಹಿಂದಿನ ವೈಭವಕ್ಕೆ ಪುನರುಜ್ಜೀವನಗೊಳ್ಳಲು ಸಾಧ್ಯವಾಗುವಂತೆ, ಸಂಸ್ಥಾಪಕರ ಕನಸುಗಳು ಬೇಗನೆ ನನಸಾಗುವುದನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಸಕಾರಾತ್ಮಕವಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...