Purandara Dasa ತ್ಯಾಗಮಯ ಜೀವನದ ಮೂಲಕ ದಾಸರು ನಮಗೆ ಮುಕ್ತಿ ಮಾರ್ಗ ತೋರಿಸಿದ್ದಾರೆ. ಅವರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ. ಆರಗವನ್ನು ಪುರಂದರದಾಸರ ಹುಟ್ಟೂರು ಎಂದು ಗುರುತಿಸಿ ಅಭಿವೃದ್ಧಿಪಡಿಸಬೇಕು ಎಂದು ಶ್ರೀಗಳು ಹೇಳಿದರು.
ಆರಗದಲ್ಲಿ ನಡೆದ ಪುರಂದರದಾಸರ ಕೀರ್ತನೋತ್ಸವದಲ್ಲಿ ಆದಿಚುಂಚನಗಿರಿ ಶ್ರೀಗಳು ಮಾತನಾಡಿದರು.
ಆರಗದಲ್ಲಿ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀಪ್ರಸನ್ನನಾಥ ಸ್ವಾಮಿಗಳು, 35ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ದಾಸವರೇಣ್ಯ ಪುರಂದರ ದಾಸರ ಕೀರ್ತನೋತ್ಸವದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
Purandara Dasa ಸಾಮಾನ್ಯ ಸೂತ್ರದಡಿ ಜೀವನ ಕಂಡುಕೊಳ್ಳುವ ಪ್ರಯತ್ನ ನಮ್ಮದಾದರೆ ಭಕ್ತಿ ಮೂಲಕ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ಭಗವಂತ ಅನೇಕ ಅವತಾರಗಳಲ್ಲಿ ಜಗತ್ತಿನಲ್ಲಿಕಾಣಿಸಿಕೊಂಡಿದ್ದು, ಸರಳವಾದ ಬದುಕಿಗೆ ಶಕ್ತಿ ಇದೆ ಎಂಬುದನ್ನು ನಾವುಗಳು ಗೊತ್ತು ಮಾಡಿಕೊಳ್ಳಬೇಕು. ನವಕೋಟಿ ನಾರಾಯಣ ಹೆಸರಲ್ಲಿ ಶ್ರೀಮಂತಿಕೆ ಹೊಂದಿದ್ದ ಶ್ರೀನಿವಾಸ ನಾಯಕನಿಗೆ ಸತ್ಯ ದರ್ಶನವಾದಾಗ ಭಕ್ತಿಯ ಮಹತ್ವ ಅರಿತ ಎಂದರು.
