21 ವರ್ಷದ ಮನೀಷ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನಗರದ ಖಾಸಗಿ ಕಾಲೇಜಿನಲ್ಲಿ ತೃತೀಯ ಬಿ ಎಸ್ ಸಿ ವಿದ್ಯಾರ್ಥಿನಿ ಮನಿಷಾ
ವ್ಯಾಸಂಗ ಮಾಡುತ್ತಿದ್ದಳು . ಬೆಳಗ್ಗೆ 10:15 ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ ಮನಿಷಾ
ಭದ್ರಾವತಿ ತಾಲೂಕು ದೊಡ್ಡೇರಿ ಗಂಗೂರು ಗ್ರಾಮದವಳೆಂದು ವರದಿಯಾಗಿದೆ.
ಶಿವಮೊಗ್ಗದ ಕೋಟೆ ರಸ್ತೆಯ ಡಾ. ಬಿ. ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ನಲ್ಲಿ ಮನಿಷಾ ವಾಸಿಯಾಗಿದ್ದಳು
ಬೆಳಗ್ಗೆಯ ತಿಂಡಿ ಸೇವಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಮೆಗ್ಗಾನ್ ಆಸ್ಪತ್ರೆಗೆ ವಿದ್ಯಾರ್ಥಿನಿಯ ಶವ ರವಾನೆ ಮಾಡಲಾಗಿದೆ
ಎಂದು ವರದಿಯಾಗಿದೆ.
