Shimoga News ಕನ್ನಡ ಭಾಷೆ ವೈದ್ಯರು ಸೇರಿದಂತೆ ಎಲ್ಲ ಜನರಿಗೂ ಬದುಕನ್ನು ಕಟ್ಟಿಕೊಟ್ಟಿದೆ. ವೈದ್ಯರಿಗೆ ವೃತ್ತಿಪರ ಶಿಕ್ಷಣ ಆಂಗ್ಲ ಭಾಷೆಯಲ್ಲಿ ಪಡೆದಿದ್ದರೂ ಜನಸಾಮಾನ್ಯರೊಂದಿಗೆ ಸಂವಹನಕ್ಕೆ ಕನ್ನಡವೇ ದಾರಿ ದೀಪವಾಗಿದೆ ಎಂದು ಕರ್ನಾಟಕ ವೈದ್ಯಕೀಯ ಪರಿಷತ್ ಅಧ್ಯಕ್ಷ ಡಾ. ಯೋಗಾನಂದ ರೆಡ್ಡಿ ವೈ ಸಿ ಹೇಳಿದರು.
ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು 2025-26ರ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕನ್ನಡ ನಮ್ಮ ಮನೆ ಮತ್ತು ಮನಗಳಲ್ಲಿ ಸದಾ ತುಂಬಿರಬೇಕು ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘವು ಯುವ ವೈದ್ಯರನ್ನು ಮತ್ತಷ್ಟು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಬೇಕು. ಸಂಘಟನೆಯಾಗಿ ನಮ್ಮ ಐಎಂಎ ಸಮಾಜದ ವಿವಿಧ ಜನರನ್ನು ತಲುಪುವಲ್ಲಿ ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.
ಭಾರತೀಯ ವೈದ್ಯಕೀಯ ಸಂಘ ರಾಜ್ಯ ಘಟಕದ ನಿಯೋಜಿತ ಅಧ್ಯಕ್ಷ ಡಾ. ಹರೀಶ ದೇಲಂತ ಬೆಟ್ಟು ಮಾತನಾಡಿ, ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಈವರೆಗೆ ನಡೆಸಿರುವ ಚಟುವಟಿಕೆಗಳು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸಲಿ ಎಂದು ಆಶಿಸಿದರು.
Shimoga News ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಘಟಕದ ಅಧ್ಯಕ್ಷ ಡಾ. ಕೆ.ಆರ್.ರವೀಶ್ ಅಧ್ಯಕ್ಷತೆ ವಹಿಸಿದ್ದರು. 2025-26ರ ಪದಾಧಿಕಾರಿಗಳಾಗಿ ಡಾ. ಕೆ.ಆರ್.ರವೀಶ್, ಡಾ. ಕೆ.ಎಸ್.ಶುಭ್ರತ, ಡಾ. ಶಶಿಧರ ಎಚ್.ಎಲ್, ಡಾ. ಕೌಸ್ತುಭಾ ಅರುಣ್, ಡಾ. ಶ್ವೇತಾ ಬಾದಾಮಿ, ಡಾ ರಾಮಚಂದ್ರ ಬಾದಾಮಿ, ಡಾ. ಸುಭಾಷ್ ಬಿ.ಎ, ಡಾ ಸತೀಶ್ ಎಂ.ಆರ್, ಡಾ. ರಾಕೇಶ್ ಬಿಸಿಲೇಹಳ್ಳಿ ಅಧಿಕಾರ ಸ್ವೀಕರಿಸಿದರು.
ಡಾ. ಎಸ್.ಶ್ರೀಧರ ಮತ್ತು ಡಾ. ವಿನಯ ಶ್ರೀನಿವಾಸ್ , ಡಾ. ರಾಜರಾಮ್ ಹಾಜರಿದ್ದರು. ಡಾ. ಕೆ.ಎನ್. ಗುರುದತ್ತ ಅವರು ವಿಶೇಷವಾದ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಐಎಂಎ ಮ್ಯೂಸಿಕ್ ಕ್ಲಬ್ ವತಿಯಿಂದ ಡಾ. ಚೇತನ್ ಹೆಚ್ ಎ, ಡಾ. ವಿಜಯಲಕ್ಷ್ಮೀ ರವೀಶ್, ಡಾ. ಪ್ರವೀಣ್ ಮಲವಡೆ, ಡಾ. ರಾಮಚಂದ್ರ ಬಾದಾಮಿ, ಡಾ. ಶ್ವೇತಾ ಬಾದಾಮಿ, ಡಾ. ಸುಭಾಷ್ ಬಿಎ, ಡಾ. ಶಂಭುಲಿಂಗ ಬಂಕೊಳ್ಳಿ ಮತ್ತು ಮಾಸ್ಟರ್ ಶ್ರೇಯಸ್ ಬಾದಾಮಿ ಕನ್ನಡ ಗೀತೆಗಳ ಗಾಯನ ನಡೆಸಿಕೊಟ್ಟರು. ಡಾ. ಶ್ವೇತಾ ಬಾದಾಮಿ ಅವರು ಕಾರ್ಯಕ್ರಮ ನಿರೂಪಿಸಿದರು.
