Saturday, December 6, 2025
Saturday, December 6, 2025

Bharatada pramuka vyapara mela ಬೆಂಗಳೂರಿನಲ್ಲಿ ನವೆಂಬರ್ 6 ರಿಂದ 8 ವರೆಗೆ ಭಾರತದ ಪ್ರಮುಖ ವ್ಯಾಪಾರ ಮೇಳ- 2025

Date:

Bharatada pramuka vyapara mela ಭಾರತ ಉತ್ಪಾದನಾ ಪ್ರದರ್ಶನದ 7 ನೇ ಆವೃತ್ತಿ – ಬಾಹ್ಯಾಕಾಶ, ರಕ್ಷಣಾ ಮತ್ತು ಸಾಮಾನ್ಯ ಎಂಜಿನಿಯರಿoಗ್ ವಲಯಗಳಲ್ಲಿ ಭಾರತದ ಪ್ರಮುಖ ವ್ಯಾಪಾರ ಮೇಳ-ನವೆಂಬರ್ 6 ರಿಂದ 8, 2025 ರವರೆಗೆ ಬೆಂಗಳೂರಿನ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ.
ಐಎಂಎಸ್ ಫೌಂಡೇಶನ್ ಸಹಯೋಗದೊಂದಿಗೆ ಲಘು ಉದ್ಯೋಗ ಭಾರತಿ–ಕರ್ನಾಟಕ ಆಯೋಜಿಸುವ ಕೇಂದ್ರ ರಕ್ಷಣಾ ಸಚಿವಾಲಯ, ಕರ್ನಾಟಕ ಸರ್ಕಾರ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಬೆಂಬಲದೊoದಿಗೆ, ಈ ಕಾರ್ಯಕ್ರಮವು ಜಾಗತಿಕ ವೇದಿಕೆಯಲ್ಲಿ ಭಾರತದ ಉತ್ಪಾದನಾ ನಾಯಕತ್ವವನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ.
ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಭಾರಿ ಕೈಗಾರಿಕೆಗಳು ಮತ್ತು ಉಕ್ಕಿನ ಖಾತೆ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಮತ್ತು ಭಾರತ ಸರ್ಕಾರದ ಎಂಎಸ್‌ಎoಇ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರ ಸಮ್ಮುಖದಲ್ಲಿ ಈ ಪ್ರದರ್ಶನ ನಡೆಯಲಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಐಎಂಎಸ್ 2025 ಈ ಕಾರ್ಯಕ್ರಮದ ಇಲ್ಲಿಯವರೆಗಿನ ಅತಿದೊಡ್ಡ ಆವೃತ್ತಿಯಾಗಿದ್ದು, 6,000 ಚದರ ಮೀಟರ್‌ಗಿಂತಲೂ ಹೆಚ್ಚಿನದ್ದಾಗಿರುವ ಬಿಐಇಸಿಯ ಎರಡೂ ಸಭಾಂಗಣಗಳು – ಸಂಪೂರ್ಣವಾಗಿ ಮಾರಾಟವಾಗಿವೆ. 220 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸೇರಿದಂತೆ 450 ಕ್ಕೂ ಹೆಚ್ಚು ಪ್ರದರ್ಶಕರು, ಬಾಹ್ಯಾಕಾಶ ಮತ್ತು ರಕ್ಷಣಾ, ಆಟೊಮೇಷನ್ ಮತ್ತು ರೊಬೊಟಿಕ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಜನರಲ್ ಎಂಜಿನಿಯರಿoಗ್, ಪಂಪ್ ಮತ್ತು ಕವಾಟ, ಪರೀಕ್ಷೆ ಮತ್ತು ಅಳತೆ ಉಪಕರಣಗಳಂತಹ ಪ್ರಮುಖ ವಲಯಗಳಲ್ಲಿ ನಾವೀನ್ಯತೆಗಳನ್ನು ಪ್ರದರ್ಶಿಸಲಿದ್ದಾರೆ.
20,000 ವ್ಯಾಪಾರ ಸಂದರ್ಶಕರು ಈಗಾಗಲೇ ನೋಂದಾಯಿಸಿಕೊoಡಿದ್ದಾರೆ ಮತ್ತು 40,000 ಜನ ಭಾಗವಹಿಸುವ ನಿರೀಕ್ಷೆಯೊಂದಿಗೆ, ಐಎಂಎಸ್ 2025 ಭಾರತದ ಉತ್ಪಾದನಾ ಪರಿಸರ ವ್ಯವಸ್ಥೆಗೆ ಒಂದು ಹೆಗ್ಗುರುತು ಕಾರ್ಯಕ್ರಮವಾಗಲಿದೆ.
ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮ ಸಂಸ್ಥೆಗಳಾದ ಬಿಇಎಲ್, ಹೆಚ್‌ಎಎಲ್, ಬಿಇಎಂಎಲ್, ಇಸ್ರೋ, ಡಿಆರ್‌ಡಿಒ ಮತ್ತು ಸಿಇಎಂಐಎಲ್ ಎಸಿ ಸೇರಿದಂತೆ ಭಾರತ್ ಫೋರ್ಜ್, ಎಲ್ & ಟಿ ಡಿಫೆನ್ಸ್, ಪ್ರಮುಖ ಕಾರ್ಪೊರೇಟ್ ಕಂಪನಿಗಳೊoದಿಗೆ ಭಾಗವಹಿಸಲಿದ್ದಾರೆ. ಶ್ರೀ ಬಾಬಾ ಕಲ್ಯಾಣಿ, ಶ್ರೀ ಅರುಣ್ ರಾಮಚಂದಾನಿ ಮತ್ತು ಸತ್ಯನಾರಾಯಣ್ ನುವಾಲ್ ಅವರಂತಹ ಉನ್ನತ ಉದ್ಯಮ ನಾಯಕರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಐಎಂಎಸ್ 2025 ನ್ನು ತನ್ನ ಖರೀದಿ ಮತ್ತು ಮಾರುಕಟ್ಟೆ ಯೋಜನೆಯ ಅಡಿಯಲ್ಲಿ ಸೇರಿಸಿಕೊಂಡಿದ್ದು, ಸಬ್ಸಿಡಿಗಳ ಮೂಲಕ ಎಂಎಸ್‌ಎoಇ ಭಾಗವಹಿಸುವಿಕೆಯನ್ನು ಬೆಂಬಲಿಸುತ್ತದೆ.
IMSCON 2025-ಜ್ಞಾನ ಮತ್ತು ಸಹಯೋಗ ವೇದಿಕೆ: ಏಕಕಾಲದಲ್ಲಿ ನಡೆಯುವ, 2 ನೇ ಆವೃತ್ತಿ “ಭಾರತವನ್ನು ಸಬಲೀಕರಣಗೊಳಿಸುವುದು: ಜಾಗತಿಕ ಉತ್ಪಾದನೆಯ ಭವಿಷ್ಯ” ಎಂಬ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ನಿರ್ಣಾಯಕ ವಿಷಯಗಳ ಕುರಿತು ಎಂಟು ತಾಂತ್ರಿಕ ಅವಧಿಗಳನ್ನು ಒಳಗೊಂಡಿರುತ್ತದೆ.

  • ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಪಾತ್ರ
  • ಬಾಹ್ಯಾಕಾಶ ಮತ್ತು ರಕ್ಷಣಾ ಉತ್ಪಾದನೆಗೆ ಹೊಸ ಯುಗ
  • ಡಿಜಿಟಲ್ ಉತ್ಪಾದನೆ ಮತ್ತು ಕೈಗಾರಿಕೆ 4.0
  • ಬಾಹ್ಯಾಕಾಶ ಮತ್ತು ರಕ್ಷಣೆಯಲ್ಲಿ ಗುಣಮಟ್ಟದ ಭರವಸೆ ಮತ್ತು ಪ್ರಮಾಣೀಕರಣ
  • ಎಐ ಮತ್ತು ಮುಂದಿನ ಪೀಳಿಗೆಯ ನಾವೀನ್ಯತೆ
  • ಕೌಶಲ್ಯಗಳು, ಜನರು ಮತ್ತು ಸುಸ್ಥಿರತೆ
  • ಭಾರತೀಯ ರಕ್ಷಣಾ ಖರೀದಿ ನೀತಿ
  • ಸ್ಟಾರ್ಟ್ಅಪ್‌ಗಳಿಗೆ ಹಣಕಾಸು
    Bharatada pramuka vyapara mela ನೀತಿ ನಿರೂಪಕರು, ಸಿಇಒಗಳು, ಡೊಮೇನ್ ತಜ್ಞರು ಮತ್ತು ವಿಜ್ಞಾನಿಗಳು ಸೇರಿದಂತೆ 1,000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನವು ದೊಡ್ಡ ನಿಗಮಗಳೊಂದಿಗೆ ಬಿ೨ಬಿ ಸಭೆಗಳು ಮತ್ತು ಮಾರಾಟಗಾರರ ಅಭಿವೃದ್ಧಿ ಅಧಿವೇಶಗಳನ್ನು ಸಹ ಆಯೋಜಿಸುತ್ತದೆ.
    2010 ರಿಂದ ಆರು ಯಶಸ್ವಿ ಆವೃತ್ತಿಗಳನ್ನು ಅನುಸರಿಸಿ, ಐಎಂಎಸ್ 2025, ಭಾರತದ ಉತ್ಪಾದನಾ ವಲಯಗಳಲ್ಲಿ ನಾವೀನ್ಯತೆ, ಸಹಯೋಗ ಮತ್ತು ಬೆಳವಣಿಗೆಯನ್ನು ಬೆಳೆಸುವ ತನ್ನ ಧ್ಯೇಯವನ್ನು ಮುಂದುವರೆಸಿದೆ. ಪ್ರಮುಖ ಕೈಗಾರಿಕಾ ಸಂಘಗಳ ಬೆಂಬಲ ಮತ್ತು ಆತ್ಮನಿರ್ಭರ ಭಾರತ ಸಹಯೋಗದೊಂದಿಗೆ ಹೊಂದಿಕೊoಡ ಐಎಂಎಸ್ 2025, ಬಾಹ್ಯಾಕಾಶ ಮತ್ತು ರಕ್ಷಣಾ ಪರಿಸರ ವ್ಯವಸ್ಥೆಯಲ್ಲಿ 30 ರಿಂದ 40 ಶೇಕಡಾ ದೇಶೀಕರಣವನ್ನು ಸಾಧಿಸುವ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಬಲಪಡಿಸುತ್ತದೆ.
    www.lubkarnataka.org

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...