Rishab Shetty ಚಲನಚಿತ್ರ ತಂತ್ರಜ್ಞಾನವು ಅಂತರ್ ರಾಷ್ಟ್ತೀಯ ಮಟ್ಟದಲ್ಲಿ ಅಗಾಧವಾಗಿ ಬೆಳೆದಿದೆ. ಅದಕ್ಕೆ ತಕ್ಕಂತೆ ನಾವು ಕಾರ್ಯನಿರ್ವಹಿಸಬೇಕಿದೆ. ಮೈಸೂರಿನಲ್ಲಿ ಸ್ಥಾಪಿಸಲಾಗುವ ಚಿತ್ರನಗರಿಯು ಇದಕ್ಕೆ ಪೂರಕವಾಗಲಿದೆ ಎಂದು ಖ್ಯಾತ ಚಿತ್ರನಟ-ನಿರ್ದೇಶಕ ರಿಷಬ್ ಶೆಟ್ಟಿ ಅಭಿಪ್ರಾಯಪಟ್ಟರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಸೋಮವಾರ(ನ.3) ಏರ್ಪಡಿಸಿದ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ತಮ್ಮ ನಿರ್ದೇಶನದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ 2018 ನೇ ಸಾಲಿನ “ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ”ದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮೈಸೂರಿನಲ್ಲಿ ಚಿತ್ರನಗರಿ(ಫಿಲಂ ಸಿಟಿ) ನಿರ್ಮಾಣಕ್ಕೆ 162 ಎಕರೆ ಜಮೀನು ನೀಡಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಅಂತರ್ರಾಷ್ಟ್ರೀ ಲಯ ಗುಣಮಟ್ಠದ ಚಿತ್ರ ನಿರ್ಮಾಣಕ್ಕೆಚಿತ್ರನಗರಿ ಸಹ
ಕಾರಿಯಾಗಲಿದೆ ಎಂದರು.
Rishab Shetty ಸರಕಾರ ನೀಡುವ ಪ್ರಶಸ್ತಿಯಿಂದ ಪ್ರೋತ್ಸಾಹ ಹಾಗೂ ಬೆಂಬಲ ದೊರಕಿದಂತಾಗುತ್ತದೆ.
ಅನಿವಾರ್ಯ ಕಾರಣಗಳಿಂದ ಬಾಕಿಬಿರುವ ಪ್ರಶಸ್ತಿಗಳನ್ನು ಆದಷ್ಟು ಬೇಗನೇ ಘೋಷಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿರುವುದು ಸಂತಸ ತಂದಿದೆ ಎಂದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ 2018 ನೇ ಸಾಲಿನ “ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ”ದ ಪ್ರಶಸ್ತಿಯನ್ನು ಸರಕಾರಿ ಶಾಲೆಯ ಮಕ್ಕಳಿಗೆ ಅರ್ಪಿಸುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದರು.
