R.M. Manjunatha Gowda ಕೊಟ್ಟ ಸಾಲ ವಸೂಲಾದಾಗ ಮಾತ್ರ ಸಹಕಾರ ಸೊಸೈಟಿಗಳು ಉಳಿಯಲು ಸಾಧ್ಯ ಎಂದು ಸಹಕಾರ ಕ್ಷೇತ್ರದ ದುರಿಣರಾದ ಎಂಎಡಿಬಿ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.
ಅವರು ಭಾನುವಾರ ವಿದ್ಯಾನಗರದ ಚಂದ್ರಪ್ಪ ಕಾಂಪ್ಲೆಕ್ಸ್ ಸೊಸೈಟಿ ಆವರಣದಲ್ಲಿ ಆಯೋಜಿಸಿದ್ದ ವನ್ನಿಯಾರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘಗಳು ಇಂದು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದೆ ಕಷ್ಟವಾಗಿದೆ. ಇಲ್ಲಿ ಸಾಲಗಾರರೇ ಬಹಳ ಮುಖ್ಯ. ಬಿಗಿ ಕ್ರಮ ಅಗತ್ಯ. ಸರ್ಕಾರದ ನಿಯಮಗಳು ಸಹಕಾರ ಸಂಘಗಳ ಏಳಿಗೆಗೆ ಕಷ್ಟವಾಗುತ್ತಿದೆ.ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು ಎಂದು ನಾವು ಹೇಳುತ್ತಲೇ ಬಂದಿದ್ದರೂ ಕೂಡ ಅದೇಕೋ ಗೊತ್ತಿಲ್ಲ. ಸರ್ಕಾರಗಳು ನಿಯಮಗಳನ್ನು ಕಠಿಣಗೊಳಿಸತ್ತಲೇ ಹೋಗಿವೆ ಎಂದರು.
ಇಲ್ಲಿ ಸಾಲಗಾರರೇ ಮುಖ್ಯ. ‘ಕೊಟ್ಟವನು ಕೋಡಂಗಿ, ಇಸ್ಕೊಂಡವನು ವೀರಭದ್ರ’ ಎಂಬ ಗಾದೆ ಸೊಸೈಟಿಗಳಿಗೆ ಸರಿ ಹೊಂದುತ್ತದೆ. ಸಾಲ ಪಡೆದವರು ನಾನಾ ಕಾರಣಗಳಿಂದ ಸಾಲ ವಾಪಸ್ ಮರು ಪಾವತಿ ಮಾಡುವುದಿಲ್ಲ. ಹಾಗಾಗಿ ಆಡಳಿತ ಮಂಡಳಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದರು.
ಸೊಸೈಟಿಯ ಅಧ್ಯಕ್ಷರಾದ ಜಿ.ವಿ. ಗಣೇಶಪ್ಪ ಅವರು ತುಂಬಾ ಕಷ್ಟದಿಂದ 6 ಜಿಲ್ಲೆಗಳಲ್ಲಿ ಸೊಸೈಟಿಯನ್ನು ವಿಸ್ತರಿಸಿದ್ದಾರೆ. ಸುಮಾರು 56 ಲಕ್ಷ ರೂ. ಷೇರು ಹಣ ಸಂಗ್ರಹಿಸಿದ್ದಾರೆ. ಇದು ಕಡಿಮೆಯೇನಲ್ಲ. ಮುಂದಿನ ದಿನಗಳಲ್ಲಿ ಇದು ದೊಡ್ಡ ಸೊಸೈಟಿಯಾಗಿ ಬೆಳೆಯಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಸಹಕಾರ ಕ್ಷೇತ್ರ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಭಾರತದ ಆರ್ಥಿಕ ಬಲವರ್ಧನೆಗೆ ಇದು ಸಹಕಾರಿಯಾಗಲಿದೆ. ಸುಮಾರು 40 ಕೋಟಿ ಜನರು ಇದರ ವ್ಯಾಪ್ತಿಗೆ ಬಂದಿದ್ದಾರೆ. ಪರಸ್ಪರ ಒಗ್ಗಟ್ಟಿನಿಂದ ಮಾತ್ರ ಸೊಸೈಟಿಗಳು ಉಳಿಯಲು ಸಾಧ್ಯ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ ಮಾತನಾಡಿ, ಸೊಸೈಟಿಗಳನ್ನು ನಡೆಸುವುದು ಬಹಳ ಕಷ್ಟ. ನಿಷ್ಟುರತೆ ಇರಬೇಕು. ಮುಲಾಜಿಗೆ ಅವಕಾಶ ಕೊಡಬಾರದು ಎಂದರು.
R.M. Manjunatha Gowda ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಮಾತನಾಡಿ, ಸೊಸೈಟಿಯ ಉಪ ನಿಯಮಗಳ ರಚಿಸುವ ಅಧಿಕಾರ ಸದಸ್ಯರಿಗೆ ಇದೆ. ಸಹಕಾರ ಕ್ಷೇತ್ರಕ್ಕೆ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂದರು.
ವನ್ನಿಯಾರ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಜಿ.ವಿ. ಗಣೇಶಪ್ಪ ಮಾತನಾಡಿ, ಈ ಸೊಸೈಟಿ ರಚಿಸಲು 11 ತಿಂಗಳು ಕಷ್ಟಪಡಬೇಕಾಯಿತು. ಷೇರುದಾರರು ನಮಗೆ ಸಹಕರಿಸಿದ್ದಾರೆ. ಸಹಕಾರ ಕ್ಷೇತ್ರದ ಧುರೀಣರ ಮಾರ್ಗದರ್ಶನವನ್ನು ಪಡೆದುಕೊಂಡು ಈ ಸೊಸೈಟಿ ಬೆಳೆಸುವುದರ ಜತೆಗೆ ವನ್ನಿಯಾರ್ ಸಮಾಜದ ಸಂಘಟನೆ ಕೂಡ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಎಂ ಎಂ ಪರಮೇಶ್ ಹಾಪ್ ಕಾಮ್ಸ್ ನೂತನ ನಿರ್ದೇಶಕ ಎಂ.ಪಿ. ದಿನೇಶ್ ಪಟೇಲ್, ನಿವೃತ್ತ ಪೊಲೀಸ್ ಅಧಿಕಾರಿ ಪಿ.ಒ. ಶಿವಕುಮಾರ್ ಎಂ.ಬಿ. ಹರಿಕೃಷ್ಣ ಸೇರಿದಂತೆ ಹಲವು ಮುಖಂಡರು ಸೊಸೈಟಿ ಕುರಿತಂತೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಆರ್.ಎಂ. ಮಂಜುನಾಥಗೌಡ ಮತ್ತು ಡಾ. ಧನಂಜಯ ಸರ್ಜಿ ಅವರನ್ನು ಸನ್ಮಾನಿಸಿದ್ದಲ್ಲದೇ,ಇತರೇ ಎಲ್ಲಾ ಗಣ್ಯರನ್ನು ಸಹ ಸನ್ಮಾನಿಸಲಾಯಿತು ಮತ್ತು ಎಲ್ಲಾ ಪ್ರವರ್ತಕರು ಮತ್ತು ನಿರ್ದೇಶಕರಿಗೂ ಸಹ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಪ್ರಮುಖರಾದ ಪರಮೇಶ್, ಬಿಜೆಪಿ ಮುಖಂಡ ಹರಿಕೃಷ್ಣ, ಸೊಸೈಟಿ ಉಪಾಧ್ಯಕ್ಷರಾದ ರಮಣಿ, ರೊಟ್ಟಿ ಸುಬ್ಬಣ್ಣ, ಶಿವು ಮಠ, ಶಿವರಾಜ್ ಕುಮಾರ್, ದಂಡಪಾಣಿ, ವಿ. ಮುರುಗೇಶ್ ಮತ್ತು ಸೊಸೈಟಿ ನಿರ್ದೇಶಕರು ಮೊದಲಾವರಿದ್ದರು.
R.M. Manjunatha Gowda ಸರ್ಕಾರದ ನಿಯಮಗಳಿಂದ ಸಹಕಾರ ಸಂಘಗಳ ಏಳಿಗೆಗೆ ಕಷ್ಟವಾಗುತ್ತಿದೆ- ಆರ್.ಎಂ.ಮಂಜುನಾಥ ಗೌಡ
Date:
