Women Cricket World Cup ಮುಂಬೈ ಡಿ.ವೈ.ಪಾಟೀಲ್ ಕ್ರೀಡಾಂಗಣ ಎಂದೂ ಕಾಣದ ಸಂಭ್ರಮ ಸಡಗರ ಕಂಡಿತು.
ಹಿಂದೆ ಕಂಡಿತ್ತೋ ಏನೋ ಆದರೆ ಭಾರತದ ವನಿತೆಯರು
ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನ 52 ರನ್ ಗಳ ಅಂತರದಲ್ಲಿ ಸೋಲಿಸಿ ದಾಖಲೆ ಬರೆದರು.
ಟಾಸ್ ಗೆದ್ದು ದಕ್ಷಿಣ ಆಫ್ರಿಕ
ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅವರಿಗೂ ಫೈನಲ್ಸ್ ಪ್ರವೇಶ
ಮೊದಲ ಬಾರಿಗೆ ಆಗಿತ್ತು.
ಕಡಿಮೆ ರನ್ ಗಳಿಗೆ ಭಾರತವನ್ನ ಓಟ್ ಮಾಡುವ ಹುನ್ನಾರ ಅವರದಾಗಿತ್ತು. ಆದರೆ ಶಿಪಾಲಿ ಅವರ ದಿಟ್ಟ ಬ್ಯಾಟಿಂಗ್ 87 ರನ್ ಗಳು ಆರಂಭಿಕವಾಗಿ ಉತ್ತಮ ಕೊಡುಗೆಯಾಗಿ ಬಂದಿತು.
ಭಾರತ ಮಹಿಳಾ ತಂಡವು ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ದೊಡ್ಡ ಬಹುಮಾನ ಮೊತ್ತ ₹ 39 ಕೋಟಿ ಯನ್ನು ತನ್ನ ಮಡಿಲಿಗೆ ಹಾಕಿ ಕೊಂಡಿದೆ. ಬಿಸಿಸಿಐ ಕೂಡ ಪುರುಷರ ತಂಡಕ್ಕೆ ನೀಡಿದಷ್ಟೇ ಬೋನಸ್ ನೀಡುವ ಸಾಧ್ಯತೆಯಿದೆ. ಮಾಧ್ಯಮಗಳಲ್ಲಿ ಪ್ರಕಟವಾದಂತೆ ₹ 125 ಕೋಟಿ ಬಹುಮಾನ ಘೋಷಿಸಿದೆ.
ಮಹಿಳೆಯರ ಕ್ರಿಕೆಟ್ ಬಗ್ಗೆ ಮೂಗುಮುರಿಯುತ್ತಿದ್ದವರೀಗ ಮೈಚಿವುಟಿಕೊಳ್ಳುವಂತೆ ಮಾಡಿದೆ.
ಇದು ಮಹಿಳಾ ಕ್ರಿಕೆಟ್‌ನ ಬೆಳವಣಿಗೆಯಲ್ಲಿ ಒಂದು ಮಹತ್ವದ ಕ್ಷಣವೆಂದು ಪರಿಗಣಿಸಬಹುದು.
Women Cricket World Cup ಬ್ಯಾಟಿಂಗ್ ಸಿಕ್ಕಿದ್ದು ಭಾಗ್ಯವೆಂದೇ ಭಾರತದ ತಂಡ ಆಡಿತು.
ಭಾರತ ತಂಡವು 7 ವಿಕೆಟ್ ಕಳೆದುಕೊಂಡು 298 ರನ್ ಗಳಿಸಿತು.
ಭಾರಿ ಮೊತ್ತವಲ್ಲ ಎಂಬಂತೆ ದಕ್ಷಿಣ ಆಫ್ರಿಕಾ ತನ್ನ ಪಾಳಿ ಆರಂಭಿಸಿತು.
ಈ ಮೊತ್ತವನ್ನು ಬೆಂಬತ್ತಿ ಹೊರಟ ದಕ್ಷಿಣ ಆಫ್ರಿಕಾ ತಂಡ 45.3 ಓವರ್ ಗಳಲ್ಲಿ 246 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಹೀಗಾಗಿ
ಭಾರತ ತಂಡ 52 ರನ್ ಗಳ ಭರ್ಜರಿ ವಿಜಯ ದಾಖಲಿಸಿತು
ದೀಪ್ತಿ ಶರ್ಮ ಐದು ವಿಕೆಟ್ ಪಡೆದು ಯಶಸ್ವಿ ಬೌಲರ್ ಆದರು.
ದಕ್ಷಿಣ ಆಫ್ರಿಕ ತಂಡದ ನಾಯಕಿ ಲಾರಾ ವೋಲ್ವಾರ್ಡ್ತ್ ಶತಕ ಸಿಡಿಸಿದರು. ಹೀಗಾಗಿ ಭಾರತದ ಗೆಲುವಿಗೆ ತಡೆಗೋಡೆಯಾಗಿದ್ದರು. ಮೊದಲ ಓವರ್ನಿಂದಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಲಾರಾ 98 ಎಸೆತಗಳಲ್ಲಿ ಶತಕ ಪೂರೈಸಿದರು.
ಆದರೆ ಅಮನಜಿತ್ ಅವರ ಅದ್ಭುತ ಕ್ಯಾಚ್ ಇಡೀ ಪಂದ್ಯದ ಅದೃಷ್ಟವನ್ನೇ ಬದಲಿಸಿತು. ಫೀಲ್ಡಿಂಗ್ ನಲ್ಲಿ ಕ್ಯಾಚ್ ಹಿಡಿದು ಜಾರಿ ಮತ್ತೆ ಹಿಡಿದು ಚೆಂಡನ್ನ ನೆಲಕ್ಕೆ ಬಿಡದೆ ಮತ್ತೆ ತಾವೇ ನೆಲಕ್ಕೆ ಬಿದ್ದು ಹಿಡಿದ ಪರಿ ರೋಚಕವಾಗಿತ್ತು.
