Shimoga News ಇಂದಿನ ಕಾಲಮಾನದಲ್ಲಿ ಮಹಾತ್ಮ ಗಾಂಧಿಯವರ ಸಾಮಾಜಿಕ ಕಲ್ಪನೆ ಆರ್ಥಿಕ ಚಿಂತನೆ ಮತ್ತು ರಾಜಕೀಯ ಪರಿಶುದ್ಧತೆ ಇವೆಲ್ಲವೂ ಎಲ್ಲರಿಗೂ ಮಾರ್ಗದರ್ಶಿ ಅವರ ತತ್ವಗಳನ್ನು ಪಾಲಿಸಿದರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯವಾಗುತ್ತದೆ ಆದರೆ ಇಂದಿನ ಜನಾಂಗ ಅದರಲ್ಲೂ ಮುಖ್ಯವಾಗಿ ಯುವಕರು ಗಾಂಧೀಜಿಯವರ ಆದರ್ಶಗಳನ್ನು ಅಲಕ್ಷಿಸಿರುವುದು ಒಂದು ದುರಂತವಾಗಿದೆ ಎಂದು ಕರ್ನಾಟಕ ಸಂಘದ ಪೂರ್ವಾಧ್ಯಕ್ಷ ಎಂ.ಎನ್.ಸುಂದರರಾಜ್ ತಿಳಿಸಿದ್ದಾರೆ
ಅವರು ಮುಂದುವರೆದು ಸ್ವತಂತ್ರ ಸಂಗ್ರಾಮದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಮಹಾತ್ಮ ಗಾಂಧಿಯವರು ದೇಶಕ್ಕಾಗಿ ಸರ್ವವನ್ನು ತ್ಯಾಗ ಮಾಡಿ ಸರಳ ಜೀವನ ನಡೆಸಿ ಬೇರೆಯವರಿಗೆ ಮಾರ್ಗದರ್ಶಿಯಾಗಿದ್ದಾರೆ ಇದನ್ನು ನಾವು ಯಾರು ಮರೆಯಬಾರದು ಎಂದು ತಿಳಿಸಿದರು. ಅವರು ಬಸವೇಶ್ವರ ಕಾಲೇಜಿನಲ್ಲಿ ಏರ್ಪಡಿಸಿದ್ದ ಗಾಂಧಿ ಚಿಂತನೆ ಮತ್ತು ಮಕ್ಕಳಿಗೆ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಸರ್ವೋದಯ ಮಂಡಳಿ ರಾಜ್ಯಾಧ್ಯಕ್ಷರಾದ ಡಾ!! ಹೆಚ್ಎಸ್ ಸುರೇಶ್ ನೆರವೇರಿಸಿ ಗಾಂಧೀಜಿಯವರ ಮೌಲ್ಯಗಳು ಹಾಗೂ ಜೀವನದ ಯಶೋಗಾಥೆ ಮತ್ತು ಅವರ ತ್ಯಾಗ ಬಲಿದಾನ ದೇಶಪ್ರೇಮಾ ಇಂದಿನ ಮಕ್ಕಳಿಗೆ ಮಾರ್ಗದರ್ಶನವಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಮನೋಹರ್ ಅವರು ಮಾತನಾಡಿ ಜಿಲ್ಲೆಯಲ್ಲಿ ನಮ್ಮ ಸರ್ವೋದಯ ಮಂಡಳಿ ಹೆಚ್ಚು ಹೆಚ್ಚು ಗಾಂಧಿ ತತ್ವದ ಸರ್ವೋದಯ ಪ್ರೇರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
Shimoga News ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ H V ಮಹೇಶ್ವರಪ್ಪ ಅವರು ಅಧ್ಯಕ್ಷತೆ ವಹಿಸಿ ಸರ್ವೋದಯ ಮಂಡಳಿಯ ತತ್ವ ಆದರ್ಶವನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು
ಸರ್ವೋದಯ ಮಂಡಳಿ ಜಿಲ್ಲಾ ಕಾರ್ಯದರ್ಶಿಯಾದ ಜಿ ವಿಜಯ್ ಕುಮಾರ್ ಮಾತನಾಡುತ್ತಾ
ಮಕ್ಕಳು ಗಾಂಧೀಜಿಯವರ ಲೇಖನಗಳನ್ನು ಪುಸ್ತಕಗಳನ್ನ ಓದುವುದರ ಮುಖಾಂತರ ತಮ್ಮ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಬೇಕು. ಅವರ ಸಾಧನೆ ಹಾಗೂ ಅವರ ತತ್ವ ಆದರ್ಶ ಗುಣಗಳು ಇಂದಿನ ಮಕ್ಕಳಿಗೆ ದಾರಿದೀಪವಾಗಬೇಕು ಇಂತಹ ಪುಸ್ತಕಗಳನ್ನು ಅಭ್ಯಾಸ ಮಾಡುವುದರಿಂದ ಮಕ್ಕಳಲ್ಲಿ ದೇಶಪ್ರೇಮ ವೃದ್ಧಿಯಾಗುತ್ತದೆ ಎಂದು ಸರ್ವೋದಯ ಮಂಡಳಿಯ ತತ್ವ ಆದರ್ಶದ ಬಗ್ಗೆ ಮಕ್ಕಳಿಗೆ ವಿವರಿಸಿದರು
ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಗನಾಥ್, ಬಸವರಾಜಪ್ಪ ಕಂದಗಲ್, ಭಗವಂತ ರಾವ್ ಮತ್ತು ಸಹ ಕಾರ್ಯದರ್ಶಿ ಆರತಿ ತಿವಾರಿ ಹಾಗೂ ಕಾಲೇಜಿನ ಪ್ರಾಚಾರ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಕ್ಕಳಿಗೆ ಸ್ಫರ್ಧೆಗಳನ್ನು ಏರ್ಪಡಿಸಿ, ಬಹುಮಾನಗಳನ್ನು ವಿತರಿಸಲಾಯಿತು
