Shimoga News ರಾಜ್ಯ ಸರ್ಕಾರ ಮುಟ್ಟಿನ ರಜೆ ನಿರ್ಧಾರ ತೆಗೆದುಕೊಂಡಿರುವುದು ಕೃತಜ್ಞತೆಯ ಹೆಜ್ಜೆಯಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಡಾ. ಟಿ .ನೇತ್ರಾವತಿ ಹೇಳಿದ್ದಾರೆ.
ಸರ್ಕಾರದ ನಿರ್ಧಾರ ನಿಜಕ್ಕೂ ಸ್ವಾಗತ ಈಗಾಗಲೇ ಈ ಆದೇಶಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ ಸರ್ಕಾರಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ವಲಯಗಳ ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ರಜೆ ನೀಡುವ ನಿರ್ಧಾರ ನಿಜಕ್ಕೂ ಪ್ರಗತಿಪರ ಹೆಜ್ಜೆಯಾಗಿದೆ ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವು ಸಂಕಟ ಹೆಣ್ಣಿಗೆ ಗೊತ್ತು ಇದಕ್ಕೆ ವಿಶ್ರಾಂತಿಯ ಅಗತ್ಯವಿದ್ದು, ಸರ್ಕಾರದ ಈ ನಿರ್ಧಾರದಿಂದ ಮಹಿಳೆಯರಲ್ಲಿ ಸಮಾಧಾನ ತಂದಿದೆ, ಹತ್ತಾರು ಒತ್ತಡಗಳಿಂದ ಹೈರಾಣಗಿ ದುಡಿಯುವ ಮಹಿಳೆಯರು ಈ ನಿರ್ಧಾರ ಕೃತಜ್ಞತೆ ಹೆಜ್ಜೆ ಎಂದಿದ್ದಾರೆ.
Shimoga News ನಮ್ಮ ಮಹಿಳೆಯರು ಈ ರಜವನ್ನು ದುರುಪಯೋಗಪಡಿಸಿಕೊಳ್ಳದಿರಲಿ, ಮತ್ತು ಸರ್ಕಾರದ ಈ ಆದೇಶ ಪರಿಣಾಮಕಾರವಾಗಿ ಅನುಷ್ಠಾನಕ್ಕೆ ಬರ ಬೇಕು. ಎಲ್ಲಾ ಇಲಾಖೆಯ ಮುಖ್ಯಸ್ಥರುಗಳು ಈ ನಿರ್ಧಾರವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚನೆ ನೀಡಲಿ. ದುಡಿಯುವ ಮಹಿಳೆಯರಿಗೆ ಇದು ಅನುಕೂಲವಾಗಿದೆ.
ಈ ಆದೇಶ ಅಸಂಘಟಿತ ವಲಯಕ್ಕೂ ಅನ್ವಯವಾಗಲಿ
ಎಂದು ನೇತ್ರಾವತಿ ತಿಳಿಸಿದ್ದಾರೆ.
