Kannada Rajyotsava ಕನ್ನಡ ರಾಜ್ಯೋತ್ಸವ ಅಂಗವಾಗಿ ಎವಿಎಲ್‌ಜಿಐ ಸಂಸ್ಥೆ ಶಿವಮೊಗ್ಗ ವಿಂಗ್ ವತಿಯಿಂದ ನ.2ರಂದು ಬೆಳಗ್ಗೆ 10ಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ವಿದ್ಯಾನಗರದಲ್ಲಿ ಬಿ.ಹೆಚ್. ರಸ್ತೆಯ ಫ್ಲೈಓವರ್ ಬಳಿಯ ಆಂಜನೇಯ ದೇವಾಲಯದಿಂದ ಬೈಕ್ ಜಾಥಾ ಹೊರಡಲಿದೆ. ಬೆಕ್ಕಿನ ಕಲ್ಮಠ, ಎಸ್‌ಪಿಎಂ ರಸ್ತೆ, ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ ಮೂಲಕ ಗೋಪಿ ವೃತ್ತದಲ್ಲಿ ಸಮಾರೋಪಗೊಳ್ಳಲಿದೆ. ಬಳಿಕ ಗೋಪಿ ವೃತ್ತದಲ್ಲಿ “ಹಚ್ಚೇವು ಕನ್ನಡದ ದೀಪ” ಎಂಬ ಸಮೂಹ ಗೀತಾ ಗಾಯನ ಕಾರ್ಯಕ್ರಮ ಲಕ್ಷ್ಮೀ ಮಹೇಶ್ ನೇತೃತ್ವದಲ್ಲಿ ಆಯೋಜಿಸಲಾಗಿದೆ ಎಂದು ಎವಿಎಲ್‌ಜಿಐ ಸಂಸ್ಥೆ ಶಿವಮೊಗ್ಗ ವಿಂಗ್ ಅಧ್ಯಕ್ಷೆ ಸುಷ್ಮಾ ಅರವಿಂದ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 7204200900, 7829567944 ಸಂಪರ್ಕಿಸಬಹುದಾಗಿದೆ.
Kannada Rajyotsava ರಾಜ್ಯೋತ್ಸವ ವಿಶೇಷವಾಗಿ ಸೈಕಲ್ ಜಾಥಾ & ‘ಹಚ್ಚೇವು ಕನ್ನಡದ ದೀಪ’ ಸಮೂಹ ಗಾಯನ ಕಾರ್ಯಕ್ರಮ
Date:
