Incubation ಯೋಜನೆ ಕುರಿತು ಒಂದು ದಿನದ ಕಾರ್ಯಾಗಾರವನ್ನು MBA & MCA ಆಡಿಟೋರಿಯಂ JNN ಕಾಲೇಜ್ ಆಫ್ ಇಂಜಿನಿಯರಿಂಗ್, ಶಿವಮೊಗ್ಗದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಶ್ರೀ ಗೋಪಿನಾಥ್ ಬಿ. ಅಧ್ಯಕ್ಷರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ(ರಿ). ಶಿವಮೊಗ್ಗ ಇವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ, ವಿದ್ಯಾರ್ಥಿಗಳಿಗೆ ಅನೇಕ ಉದ್ಯಮಿಗಳ ಯಶಸ್ಸಿನ ಹಿಂದೆ ಇರುವ Innovation, Investment and Implementation ಎಂಬ ಮೂರು ನಿಯಮಗಳನ್ನು ಅಳವಡಿಸಿ ಹೇಗೆ ಯಶಸ್ವಿ ಉದ್ಯಮದಾರರಾಗಲು ಉತ್ತೇಜಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಶ್ರೀ ಜೋಯಿಸ್ ರಾಮಾಚಾರ್ ಇವರು ಮಾತನಾಡಿ, ವಿದ್ಯಾರ್ಥಿಗಳಿಗೆ ಉದ್ಯಮದಾರರಾಗಲು ಹೆಚ್ಚಿನ ಸ್ಪೂರ್ತಿದಾಯಕ ವಿಷಯವನ್ನು ಪ್ರಸ್ತಾಪಿಸಿದರು.
ಸಂಪನ್ಮೂಲಕರಾದ ಶ್ರೀ ಗೋಪಿನಾಥ್ ಇವರು ವಿದ್ಯಾರ್ಥಿಗಳಿಗೆ ಉದ್ಯಮದಾರರಾಗಲು ಸರ್ಕಾರದ ವಿವಿಧ ಯೋಜನೆಗಳು, ಬ್ಯಾಂಕ್ ಗಳಿಂದ ದೊರಕುವ ಸಾಲ ಸೌಲಭ್ಯಗಳು ಮತ್ತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ಶ್ರೀ ಹೆಚ್ ಸುರೇಶ್, ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಶ್ರೀ ಹನುಮಂತಪ್ಪ, MCA ವಿಭಾಗದ ಡಾ. ಹೇಮಂತ್ ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಅರುಣ್ ಕುಮಾರ್ ಕೆ.ಎಲ್. ಹಾಗೂ ಇನ್ನಿತರರು ಪ್ರಮುಖರಿದ್ದರು.
