ಶಿವಮೊಗ್ಗ ನಗರದ ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಾಕಾಥಾನ್ ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು.
ಶಿವಮೊಗ್ಗ ನಗರದ ಸಹ್ಯಾದ್ರಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಿಂದ ಪ್ರಾರಂಭವಾದ ವಾಕಾಥಾನ್, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಆಸ್ಪತ್ರೆ ಆವರಣದಲ್ಲಿ ಮುಕ್ತಾಯಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗದ ಹಿರಿಯ ನ್ಯೂರೋ ಫಿಜಿಷಿಯನ್ ಡಾ. ಶಿವರಾಮಕೃಷ್ಣ ಆರೂರು, ಭಾರತದಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರಿಗೆ ಸ್ಟ್ರೋಕ್ ಆಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಹಾಗೂ ಪಾರ್ಶ್ವ ವಾಯುವಿಗೆ ಮುಖ್ಯ ಕಾರಣಗಳು ಜಡಜೀವನ ಶೈಲಿ ಧೂಮಪಾನ ಮದ್ಯಪಾನ ಅತಿಯಾದ ಕೆಲಸದ ಒತ್ತಡ ಇವುಗಳು ಕಾರಣಗಳಾಗಿವೆ. ಹಾಗಾಗಿ ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿರಬೇಕು ಮತ್ತು ಪ್ರತಿನಿತ್ಯ ವಾಕಿಂಗ್, ವ್ಯಾಯಾಮ, ಯೋಗ ಹಾಗೂ ಉತ್ತಮ ಆಹಾರ ಪದ್ಧತಿಗಳನ್ನು ರೂಡಿಸಿಕೊಂಡು ಸಕ್ರಿಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು.
ಇಂದಿಗೂ ಸಹ ಪಾಶ್ವ ವಾಯುವಿನ ಬಗ್ಗೆ ಮೂಢನಂಬಿಕೆಗಳಿದ್ದು ಸಾರ್ವಜನಿಕರು ಅಂತಹ ಮೂಢನಂಬಿಕೆಗಳಿಂದ ಹೆಚ್ಚು ತೊಂದರೆಗೆ ಒಳಗಾಗದೆ ಸೂಕ್ತ ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಪಡೆಯುವುದು ಅವಶ್ಯಕವಾಗಿದೆ, ಹಾಗೂ 40 ವಯಸ್ಸಿನ ನಂತರ ಕನಿಷ್ಠ ವರ್ಷಕ್ಕೆ ಒಂದು ಬಾರಿಯಾದರೂ ಆರೋಗ್ಯ ತಪಾಸಣೆಗಳನ್ನು ಮಾಡಿಸುವುದರ ಮುಖಾಂತರ ಉತ್ತಮ ಆರೋಗ್ಯದ ಕಡೆ ಗಮನಹರಿಸಬೇಕೆಂದು ತಿಳಿಸಿದರು.
Sahyadri Superspeciality Hospital ಪಾರ್ಶ್ವವಾಯುವಿನ ಲಕ್ಷಣಗಳಾದ ಸಮತೋಲನ ಕಳೆದುಕೊಳ್ಳುವುದು, ದೃಷ್ಟಿ ದೋಷವಾಗುವುದು, ಮುಖದ ಒಂದು ಭಾಗ ಜೋತು ಬೀಳುವುದು, ದೇಹದ ಒಂದು ಭಾಗದ ಕೈಕಾಲುಗಳು ದುರ್ಬಲವಾಗುವುದು, ಮಾತಿನಲ್ಲಿ ತೊದಲುವಿಕೆ ಇಂತಹ ಲಕ್ಷಣಗಳು ಕಂಡುಬಂದಲ್ಲಿ ತ್ವರಿತವಾಗಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತವಾಗಿದೆ ಎಂದು ಸಲಹೆ ನೀಡಿದರು.
ನಾರಾಯಣ ಆಸ್ಪತ್ರೆಯ ನ್ಯೂರೋಲಜಿ ವಿಭಾಗದ ತಜ್ಞ ವೈದ್ಯರಾದ ಡಾ. ರೂಪ ಕೆಜಿ ಮಾತನಾಡಿ ಉತ್ತಮ ಹವ್ಯಾಸಗಳನ್ನು ರೂಪಿಸಿಕೊಳ್ಳುವುದರ ಮೂಲಕ ಪ್ರತಿಯೊಬ್ಬರು ಸಕ್ರಿಯ ಹಾಗೂ ಸದೃಢ ಜೀವನ ಶೈಲಿಯನ್ನು ರೂಡಿಸಿಕೊಳ್ಳಬೇಕು, ಸಾರ್ವಜನಿಕರಲ್ಲಿ ಹೃದ್ರೋಗದ, ಪಾರ್ಶ್ವವಾಯು, ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಸರ್ವೇಸಾಮಾನ್ಯವಾಗುತ್ತಿದ್ದು ತುಂಬಾ ಬೇಸರ ಸಂಗತಿಯಾಗಿದೆ ಇದರಿಂದ ಹೊರಗೆ ಬರಲು ಪ್ರತಿಯೊಬ್ಬರೂ ಉತ್ತಮ ಆರೋಗ್ಯದ ಕಡೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು ಪಾಶ್ವವಾಯುವಿನ ಲಕ್ಷಣಗಳು ಕಾಣಿಸಿದ ತಕ್ಷಣ ರೋಗಿಯನ್ನು 4 ಗಂಟೆಯ ಒಳಗೆ ಸ್ಟ್ರೋಕ್ ರೆಡಿ ಹಾಸ್ಪಿಟಲ್ ಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಲ್ಲಿ ರೋಗಿಯನ್ನು ಸಂಪೂರ್ಣ ಗುಣಮುಖರನ್ನಾಗಿ ಮಾಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ವರ್ಗೀಸ್ ಪಿ ಜಾನ್, ಎಲ್ಲಾ ವಿಭಾಗದ ವೈದ್ಯರು ಹಾಗೂ ಮುಖ್ಯಸ್ಥರುಗಳು, ಸಿಬ್ಬಂದಿಗಳು, ಮಾರ್ಕೆಟಿಂಗ್ ವಿಭಾಗದ ಶೈಲೇಶ್ ಹಾಗೂ ನಗರದ ಮೈತ್ರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರು ಹಾಗೂ ನಗರದ ಸಾರ್ವಜನಿಕರು ಸಹ ಭಾಗವಹಿಸಿದ್ದರು.
