Gangadharendra Saraswati Swamiji ಭಗವದ್ಗೀತೆಯು ಓದು ಸಹನೆ ಸ್ಥೈರ್ಯ ಹಾಗೂ ವಿವೇಚನೆಗಳನ್ನು ವ್ಯಕ್ತಿಯಲ್ಲಿ ಬೆಳೆಸುತ್ತದೆ. ಭಗವದ್ಗೀತೆಯ ಪಠಣದಿಂದ ವ್ಯಕ್ತಿತ್ವ ವಿಕಸನ , ಆತ್ಮ ಜಾಗೃತಿಯಾಗುತ್ತದೆ. ಅಂತಹ ಸಹನೆ ಹಾಗೂ ಸೌಹಾರ್ದದಿಂದಲೇ ಮನುಕುಲಕ್ಕೆ ಒಳಿತಾಗುತ್ತದೆ ಎಂದು ಸ್ವರ್ಣಪಲ್ಲಿ ಮಠಾಧೀಶ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ವಿವರಿಸಿದರು.
ದಿನಾಂಕ 28 .10. 2025.ರಂದು ಸಂಜೆ 3 ಗಂಟೆಗೆ ಶಂಕರ ಕಣ್ಣಿನ ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿಗಳಿಗೆ ಭಗವದ್ಗೀತೆಯ ಪುಸ್ತಕ ವಿತರಿಸಿ ಮಾತನಾಡುತ್ತಿದ್ದರು.
ನವೆಂಬರ್ 30 ರಂದು ಶಿವಮೊಗ್ಗದಲ್ಲಿ ನಡೆಯುವ ಗೀತ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕರೆ ನೀಡಿದರು.
Gangadharendra Saraswati Swamiji ಶಂಕರ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ಸಮಿತಿ ಸದಸ್ಯರಾದ ಡಾ. ವೆಂಕಟೇಶಮೂರ್ತಿ, ಡಾ. ಮಂಜುನಾಥ್, ಡಾ. ಮಹೇಶ್ ರವರು ಶ್ರೀಗಳನ್ನು ಆದರಿಸಿ ಫಲ ಸಮರ್ಪಣೆ ಮಾಡಿದರು. ಡಾ. ವೆಂಕಟೇಶಮೂರ್ತಿರವರು ಸ್ವಾಗತಿಸಿದರು. ಅಭಿಯಾನ ಸಮಿತಿ ಪರವಾಗಿ ಶ್ರೀ ಲಕ್ಷ್ಮೀನಾರಾಯಣ ಕಾಶಿಯವರು ವಂದಿಸಿದರು. ಕಾರ್ಯಕ್ರಮದಲ್ಲಿ ಸಭೆಯಲ್ಲಿ ಡಾ. ಟಿ.ಜೆ. ಲಕ್ಷ್ಮೀನಾರಾಯಣ, ಸೋಮಶೇಖರ ನಾಡಿಗ್, ಜೋಶಿ ಮುಂತಾದವರಿದ್ದರು.
