Shikaripura Animal Husbandry and Veterinary Services Department ಶಿಕಾರಿಪುರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು 2025-26ನೇ ಸಾಲಿನ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ, ಬೆಂಗಳೂರು ವತಿಯಿಂದ ಶಿಕಾರಿಪುರ ತಾಲೂಕಿನ ಗ್ರಾಮೀನ ಭಾಗದ ಎಲ್ಲಾ ವರ್ಗದ ಒಟ್ಟು 99 ಜನ ರೈತ ಮಹಿಳೆಯರಿಗೆ ಐದು ವಾರದ 20 ನಾಟಿ ಕೋಳಿಮರಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ರೈತ ಮಹಿಳೆಯರು ಹತ್ತಿರದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಂಸ್ಥೆಗಳಲ್ಲಿ ನಿಗದಿತ ನಮೂನೆ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ನ. 20 ರೊಳಗಾಗಿ ಸಲ್ಲಿಸುವಂತೆ ಶಿಕಾರಿಪುರ ಮುಖ್ಯ ಪಶುವೈದ್ಯಾಧಿಕಾರಿ ಡಾ. ರವಿ ಎಂ. ತಿಳಿಸಿದ್ದಾರೆ.
