Sakrebyle Elephant Camp ದಸರಾ ಆನೆ ಬಾಲಣ್ಣನ ಕಿವಿಯನ್ನ ಸರ್ಜರಿ ಮೂಲಕ ವೈದ್ಯರು ತೆಗೆದಿದ್ದಾರೆ. ತೀವ್ರವಾಗಿ ಗ್ಯಾಂಗ್ರಿನ್ ಸೋಂಕಿನಿಂದಾಗಿ ಬಾಲಣ್ಣ ಆನೆಯ ಬಲಕಿವಿ ಸಂಪೂರ್ಣವಾಗಿ ಕಪ್ಪಾಗಿ ಕೀವು ಸೋರುತ್ತಿತ್ತು. ಈ ಹಿನ್ನೆಲೆಯಲ್ಲಿ ಆನೆಗೆ ತುರ್ತು ಚಿಕಿತ್ಸೆ ನೀಡಲು ಬೆಂಗಳೂರಿನಿಂದ ವಿಶೇಷ ವೈದ್ಯರ ತಂಡವು ಸಕ್ರೆಬೈಲು ಶಿಬಿರಕ್ಕೆ ಆಗಮಿಸಿತ್ತು.
ತಜ್ಞ ವೈದ್ಯರಾದ ಡಾ. ಚೆಟ್ಟುಯಪ್ಪ , ಡಾ. ವಸೀಮ್ ಸೇರಿದಂತೆ ಒಟ್ಟು ಐದು ಜನರ ವೈದ್ಯ ತಂಡದವರು ಆನೆಯ ಆರೋಗ್ಯವನ್ನು ಪರಿಶೀಲಿಸಿ ಚಿಕಿತ್ಸೆ ನೀಡಿದ್ದಾರೆ.
Sakrebyle Elephant Camp ಸೋಂಕು ತೀವ್ರವಾಗಿದ್ದರಿಂದ ಮತ್ತು ಗ್ಯಾಂಗ್ರಿನ್ ದೇಹದ ಇತರ ಭಾಗಗಳಿಗೆ ಹರಡುವ ಸಾಧ್ಯತೆ ಇದ್ದರಿಂದ ಕಿವಿಯನ್ನ ಸರ್ಜರಿ ಮೂಲಕ ತೆಗೆಯಲಾಗಿದೆ. ಆನೆಗೆ ಯಾವುದೇ ಪ್ರಾಣಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.
