Sharavati Pumped Storage ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಅತ್ಯಂತ ಸೂಕ್ಷ್ಮ ಪ್ರದೇಶ, ಅಳಿವಿನಂಚಿನಲ್ಲಿರುವ ಸಿಂಗಳೀಕ, ಮಂಗಟ್ಟೆ ಹಕ್ಕಿ ಮೊದಲಾದ ವನ್ಯ ಜೀವಿಗಳ ಆವಾಸ ಸ್ಥಾನ ಶರಾವತಿ ಕಣಿವೆ ಪ್ರದೇಶದಲ್ಲಿ ಸುಮಾರು 10 ಸಾವಿರ ಕೋಟಿ ರೂ.ವೆಚ್ಚದ 2,000 ಮೆ.ವ್ಯಾ. ವಿದ್ಯುತ್ ಯೋಜನೆಗೆ ಶರಾವತಿ ಪಂಪ್ಡ್ ಸ್ಟೋರೇಜ್ ಎಂಬ ಪರಿಸರ ಮಾರಕ ಯೋಜನೆಯ ಜಾರಿಗೆ ಸರ್ಕಾರ, KPCL ಹಠಕ್ಕೆ ಬಿದ್ದಿದ್ದೇಕೆ? ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಈ ಯೋಜನೆಯ ಜಾರಿಗೆ ಅಷ್ಟೊಂದು ಆತುರ ಏಕೆ?
ಶಿವಮೊಗ್ಗದಲ್ಲಿ KPCL ಮತ್ತು KPTCL ಉನ್ನತ ಅಧಿಕಾರಿಗಳು ನಿನ್ನೆ ಅ.27ರಂದು ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ತಮ್ಮ ಯೋಜನೆ ಬಗ್ಗೆ ವಿವರ ಮಾಹಿತಿ ನೀಡಿದರೇ ವಿನ: ಈ ಯೋಜನೆಯಿಂದಾಗುವ ಪರಿಸರ ಹಾನಿ, ಸ್ಥಳೀಯ ಜನರು ಅನುಭವಿಸುವ ತೊಂದರೆ ತೊಡಕುಗಳು, ಈ ಪ್ರದೇಶದ ಭೂಕುಸಿತ, ಶಿಲಾ ಪದರಗಳ ಬಗ್ಗೆ, ದಟ್ಟ ಅರಣ್ಯ ನಾಶದ ಬಗ್ಗೆ, ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ASI)ದಿಂದ ಸಂರಕ್ಷಿಸಲ್ಪಟ್ಟ ಐತಿಹಾಸಿಕ ಮಹತ್ವದ ಸ್ಮಾರಕಗಳ ಮುಂದಿನ ಕಥೆಗಳ ಬಗ್ಗೆ ಏನೂ ಹೇಳಲಿಲ್ಲ. ಏಕೆಂದರೆ ಇವುಗಳ ಬಗ್ಗೆ ವಿವರ ಅಧ್ಯಯನವನ್ನೆ ಮಾಡಲಾಗಿಲ್ಲ. 13 ಇಲಾಖೆಗಳಿಂದ ಅನುಮತಿ ಪಡೆಯಲಾಗಿದೆ ಎಂದು ಹೇಳಿದರೂ ಕೇಂದ್ರ ಸರ್ಕಾರದ ಪರಿಸರ ಸಂಬಂಧಿ ಇಲಾಖೆಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಅದನ್ನು ಇಲ್ಲಿ ಲಗತ್ತಿಸಿರುವ ವೀಡಿಯೋದಲ್ಲಿ ಅವರ ಬಾಯಿಯಿಂದಲೇ ಕೇಳಿ.
1972 ವನ್ಯ ಜೀವಿ ಕಾಯ್ದೆ ಸೆಕ್ಷನ್ 29 ರ ಪ್ರಕಾರ ವನ್ಯ ಜೀವಿ ಧಾಮ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಾರದು ಎಂದಿದೆ. ಪ್ರಸ್ತಾವಿತ ಯೋಜನೆ ಈ ಕಾಯ್ದೆಯನ್ನೂ ಉಲ್ಲಂಘಿಸಿದೆ. ಉಲ್ಲಂಘನೆ ಬಗ್ಗೆಯೂ ಅಧಿಕಾರಿಗಳಿಂದಲೇ ಈ ವೀಡಿಯೋದಲ್ಲಿ ಮಾಹಿತಿ ಕೇಳಿ.
Sharavati Pumped Storage ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯೂ ಈ ಯೋಜನೆಯಿಂದಾಗುತ್ತಿದೆ ಅಲ್ವೆ ಎಂಬ ಪ್ರಶ್ನೆಗೂ ಈ ವೀಡಿಯೋದಲ್ಲಿ ಅಧಿಕಾರಿಗಳು ನೀಡಿದ ಉತ್ತರ ನೋಡಿ.
ವೆಚ್ಚ ಮತ್ತು ಲಾಭದ ಲೆಕ್ಕಾಚಾರದಲ್ಲಿ ವೆಚ್ಚದ ಎದಿರು ಲಾಭದ ಅನುಪಾತ 75 ಎಂದು ಹೇಳಲಾಗಿದೆ. ಇದರಲ್ಲಿ 10000 ಕೋಟಿ ಯೋಜನಾ ವೆಚ್ಚ ಮತ್ತು ಗೇರುಸೊಪ್ಪಾ ಅಣೆಕಟ್ಟಿನಿಂದ ನೀರನ್ನು ಮೇಲೆ ತಲಕಳಲೆ ಅಣೆಕಟ್ಟಿಗೆ ಸಾಗಿಸುವ ವಿದ್ಯುತ್ ವೆಚ್ಚವನ್ನು ಏಕೆ ಪರಿಗಣಿಸಲಾಗಿಲ್ಲ.
ಒಟ್ಟಿನಲ್ಲಿ ಪಡೆಯ ಬೇಕಾದ ಪ್ರಮುಖ ಇಲಾಖೆಯಿಂದಲೇ ಇನ್ನೂ ಅನುಮತಿಯನ್ನೇ ಪಡೆಯದೆ ಸರ್ಕಾರ ಈ ಯೋಜನೆ ಜಾರಿ ಮಾಡ ಹೊರಟಿದ್ದು ತೀವ್ರ ವಿರೋಧಕ್ಕೆ ಯೋಗ್ಯವಾಗಿದೆ.
– ಡಾ. ಬಾಲಕೃಷ್ಣ ಹೆಗಡೆ.
Sharavati Pumped Storage ಪರಿಸರಕ್ಕೆ ಮಾರಕವಾದ ಶರಾವತಿ ಪಂಪ್ಡ್ ಸ್ಟೊರೇಜ್. ಕೆಪಿಸಿಎಲ್ ಹಠ ಯಾಕೆ?- ಡಾ. ಬಾಲಕೃಷ್ಣ ಹೆಗಡೆ.
Date:
