ಅನ್ನ ದಾಸೋಹ ಪರಿಕಲ್ಪನೆಯು ಶಿವಶರಣರು ಹುಟ್ಟು ಹಾಕಿದ್ದು ಎಂದು ಕುವೆಂಪು ವಿ ವಿ ಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಸಣ್ಣರಾಮ ಹೇಳಿದರು. ಶಿವಮೊಗ್ಗ ನಗರದ ಬಿ ಹೆಚ್ ರಸ್ತೆಯಲ್ಲಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೇಂದ್ರ ಕಾರ್ಯಾಲಯದಲ್ಲಿ ಅನ್ನ ದಾಸೋಹ ಕೇಂದ್ರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂದು ಪ್ರಾರಂಭವಾದ ಈ ಪರಿಕಲ್ಪನೆಯು ನೊಂದವರ, ಹಸಿದವರ ಬದುಕಿಗೆ ಆಧಾರ ಸ್ತಂಭವಾಯಿತು. ಅಂದು ಪ್ರಾರಂಭವಾದ ಈ ಪರಿಕಲ್ಪನೆಯನ್ನು ಮಠಮಾನ್ಯಗಳು ಇಂದಿಗೂ ಮುಂದುವರಿಸಿಕೊಂಡು ಬರುತ್ತಿರುವುದು ಮೆಚ್ಚುತಕ್ಕ ಸಂಗತಿಯಾಗಿದೆ ಎಂದು ಹೇಳಿದರು.
ಡಿಎಸ್‌ಎಸ್ ಕಚೇರಿಯಲ್ಲಿ ಅನ್ನದಾಸೋಹ ಕೇಂದ್ರವನ್ನು ತೆರೆದು ಮಧ್ಯಾಹ್ನದ ಹಸಿವಿಗೆ ಅನ್ನ ನೀಡುವ ವ್ಯವಸ್ಥೆಯನ್ನು ಸಮಿತಿಯು ರೂಪಿಸಿರುವುದು ಸ್ವಾಗತಾರ್ಹವಾದ ಸಂಗತಿಯಾಗಿದೆಯಲ್ಲದೆ ಹಸಿದವರು ಹೊಟ್ಟೆಗೆ ಇಡಿ ಅನ್ನವನ್ನು ನೀಡುವ ಉದ್ದೇಶ ಅತ್ಯಂತ ಮೆಚ್ಚು ತಕ್ಕಂತಹ ಸಂಗತಿಯಾಗಿದೆ ಎಂದು ಡಾ. ಸಣ್ಣರಾಮ ರವರು ಹೇಳಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಾ. ಶ್ರೀನಿವಾಸ್ ಕರಿಯಣ್ಣ, ನಿವೃತ್ತ ಎಸ್ ಇ ಅಣ್ಣಪ್ಪ, ಲೋಕೇಶ್ ತಿಮ್ಮಲಾಪುರ ಶಿವಲಿಂಗಪ್ಪ ಮಾರಶೆಟ್ಟಿಹಳ್ಳಿ, ಯಡವಾಲ ಹನುಮಂತಪ್ಪ, ಜಿಲ್ಲಾ ಸಂಚಾಲಕ ಎಂ ಏಳುಕೋಟಿ, ಚಿಕ್ಕಮರಡಿ ರಮೇಶ್, ಹರಿಗೆ ರವಿ, ತಮ್ಮಯ್ಯ ಭದ್ರಾವತಿ, ಕೃಷ್ಣ ಬೊಮ್ಮನಕಟ್ಟೆ, ಹಸ್ವಿ ಬಸವರಾಜ್ ಮೊದಲಾದವರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ ರವರು ವಹಿಸಿದ್ದರು.
ಅನ್ನ ದಾಸೋಹದ ಪರಿಕಲ್ಪನೆ ನೊಂದವರ ,ಹಸಿದವರ ಆಧಾರ ಸ್ಥಂಭ: ಡಾ.ಸಣ್ಣರಾಮ
Date:
