ದೇಶದ ಆರ್ಥಿಕತೆಗೆ ಫೈನಾನ್ಸಿಯರ‍್ಸ್ ಕೊಡುಗೆ ಅಪಾರ. ಇತ್ತೀಚೆಗೆ ಫೈನಾನ್ಸ್ ನಿರ್ವಹಣೆ ಕಾನೂನಿನಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಕಾನೂನಿನ ನಿಯಮಗಳನ್ನು ಪಾಲಿಸಿ ವ್ಯವಹಾರ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
Karnataka Financiers Association ಶಿವಮೊಗ್ಗ ನಗರದ ಕಂಟ್ರಿ ಕ್ಲಬ್‌ನಲ್ಲಿ ಅಖಿಲ ಕರ್ನಾಟಕ ಫೈನಾನ್ಸಿಯರ‍್ಸ್ ಅಸೋಸಿಯೇಷನ್ ಹಾಗೂ ಶಿವಮೊಗ್ಗ ಫೈನಾನ್ಸಿಯರ‍್ಸ್ ಅಸೋಸಿಯೇಷನ್ ಘಟಕದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಫೈನಾನ್ಸಿಯರ್ ಸೆಮಿನಾರ್, ತೆರಿಗೆ, ಕಾನೂನು, ಲೇವಾದೇವಿ, ಚಿಟ್ಸ್ ಬಗ್ಗೆ ಮಾಹಿತಿ ಕಾರ್ಯಾಗಾರ, ಹಿರಿಯ ಲೇವಾದೇವಿಗಾರರಿಗೆ ಸನ್ಮಾನ ಮತ್ತು ಸನ್ಮಾನ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದಲಾಗುತ್ತಿರುವ ಕಾನೂನುಗಳ ಬಗ್ಗೆ ನಿರಂತರವಾಗಿ ಮಾಹಿತಿ ಹೊಂದಿರಬೇಕು. ಅದಕ್ಕೆ ಅನುಗುಣವಾಗಿ ಲೇವಾದೇವಿ ವ್ಯವಹಾರಗಳನ್ನು ಮಾಡಬೇಕು. ಹಣಕಾಸು ಸಂಘ ಸಂಸ್ಥೆಗಳಿಂದ ಸಾಲ ತೆಗೆದುಕೊಳ್ಳುವವರು ಸರಿಯಾದ ಉದ್ದೇಶಗಳಿಗೆ ಬಳಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಇಂತಹ ಫೈನಾನ್ಸ್ ಸಂಸ್ಥೆಗಳು ಇಲ್ಲದಿದ್ದರೆ ಆರ್ಥಿಕ ವ್ಯವಹಾರ ತುಂಬಾ ಸಮಸ್ಯೆ ಆಗುತ್ತದೆ ಎಂದು ತಿಳಿಸಿದರು.
ಪೊಲೀಸ್ ಹೆಚ್ಚುವರಿ ಅಧೀಕ್ಷಕ ರಮೇಶ್ ಮಾತನಾಡಿ, ಪರವಾನಗಿ ಪಡೆಯದೆ ಲೇವಾದೇವಿ ಮಾಡಬೇಡಿ, ಕಾನೂನುಗಳನ್ನು ಪಾಲಿಸಬೇಕು. ಸಾಲ ತೆಗೆದುಕೊಂಡವರಿಗೆ ತೊಂದರೆ ಕೊಡಬೇಡಿ, ಸಾಲ ಕೊಡುವಾಗ ಮರುಪಾವತಿ ಶಕ್ತಿ ಇದೆಯೇ ಎಂಬುದನ್ನು ಗಮನಿಸಿ ವ್ಯವಹಾರ ನಡೆಸಬೇಕು ಎಂದು ಹೇಳಿದರು.
ಸಹಕಾರಿ ಸಂಘಗಳ ಉಪವಿಭಾಗ ಸಹಾಯಕ ನಿಬಂಧಕ ಶ್ರೀನಿವಾಸ್ ಮಾತನಾಡಿ, ಕಾಲಕಾಲಕ್ಕೆ ಪರವಾನಗಿ ನವೀಕರಿಸಿ ಪುಸ್ತಕ ತಪಾಸಣೆ ಮಾಡಬೇಕು. ಖಾಲಿ ದಾಖಲಾತಿಗಳನ್ನು ತೆಗೆದುಕೊಳ್ಳಬೇಡಿ, ಅಧಿಕ ಬಡ್ಡಿ ಪಡೆಯಬೇಡಿ, ಸಾಲ ತೆಗೆದುಕೊಂಡವರು ಸರಿಯಾದ ರೀತಿಯಲ್ಲಿ ಪಾವತಿ ಮಾಡಬೇಕು ಎಂದರು.
Karnataka Financiers Association ಅಖಿಲ ಕರ್ನಾಟಕ ಫೈನಾನ್ಸಿಯರ್ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ.ಮೂರ್ತಿ ಮಾತನಾಡಿ, ಪ್ರತಿ ವರ್ಷ ವಿವಿಧ ಜಿಲ್ಲೆಗಳಲ್ಲಿ ಇಂತಹ ಕಾರ್ಯಾಗಾರಗಳು ಹಮ್ಮಿಕೊಳ್ಳುವುದರ ಮೂಲಕ ಸಂಘಟನೆ ಬಲಪಡಿಸಲಾಗುತ್ತದೆ. ಇನ್ನೂ ಹೆಚ್ಚಿನ ಹೊಸ ಸದಸ್ಯರು ಸಂಸ್ಥೆಗೆ ಸೇರ್ಪಡೆಯಾಗಬೇಕು ಎಂದು ತಿಳಿಸಿದರು.
ಅಖಿಲ ಕರ್ನಾಟಕ ಫೈನಾನ್ಸಿಯರ್ ಅಸೋಸಿಯೇಷನ್ ರಾಜ್ಯ ಸಂಘಟನಾ ಕಾರ್ಯದರ್ಶಿ, ಜಿಲ್ಲಾ ಫೈನಾನ್ಸಿಯರ್ ಘಟಕದ ಅಧ್ಯಕ್ಷ ಜಿ.ವಿಜಯಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ಪ್ರಸನ್ನಕುಮಾರ್, ರಾಜ್ಯ ಕಾರ್ಯಾಧ್ಯಕ್ಷ ಬಿ.ಶಿವರಾಮ್, ಟಿ.ಎಸ್.ಬದರಿನಾಥ್, ವಿವಿಧ ಜಿಲ್ಲೆಗಳಿಂದ. ಫೈನಾನ್ಸಿಯರ್ಸ್, ಕರ್ನಾಟಕ ಫೈನಾನ್ಸಿಯಸ್ ಅಸೋಸಿಯೇಷನ್ ರಾಜ್ಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Karnataka Financiers Association ಹಣಕಾಸು ಲೇವಾದೇವಿಯಲ್ಲಿ ಫೈನಾನ್ಸ್ ಸಂಸ್ಥೆಗಳು ಬದಲಾಗಿರುವ ಕಾನೂನು ಅರಿತಿರಬೇಕು : ಡಿ.ಎಸ್.ಅರುಣ್
Date:
